ನಾಗ್ಪುರ, ಫೆ. 10- ನಾಯಕನ ಜವಾಬ್ದಾರಿಯುತ ಆಟವಾದ ಟೀಮ್ ಇಂಡಿಯಾದ ಕಪ್ತಾನ ರೋಹಿತ್ ಶರ್ಮಾ ( 102* ರನ್, 14 ಬೌಂಡರಿ, 2 ಸಿಕ್ಸರ್) ಶತಕದ ನೆರವಿನಿಂದ ತಂಡವು ಮೊದಲ ಇನ್ನಿಂಗ್ಸ್‍ನಲ್ಲಿ ಮುನ್ನಡೆ ಗಳಿಸಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು ದ್ವಿತೀಯ ದಿನದ ಆಟ ಮುಂದುವರೆಸಿದ ರವಿಚಂದ್ರನ್ ಅಶ್ವಿನ್ ಹಾಗೂ ರೋಹಿತ್ ಶರ್ಮಾ (56* ರನ್) ಆರಂಭದಿಂದಲೂ ಎಚ್ಚರಿಕೆಯ ಆಟ ಪ್ರದರ್ಶಿಸಿ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು.
ಮುರ್ಫಿ ಕಮಾಲ್:
ಆಸ್ಟ್ರೇಲಿಯಾ ತಂಡದ ಪರ ಪಾದಾರ್ಪಣೆ ಪಂದ್ಯದಲ್ಲೇ ತಮ್ಮ ಸ್ಪಿನ್ ಮೋಡಿ ಪ್ರದರ್ಶಿಸಿದ ಯುವ ಬೌಲರ್ ಮುರ್ಫಿ, ಅಪಾಯಕಾರಿಯಾಗಿದ್ದ ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಜೊತೆಯಾಟ ಮುರಿದು ಆಸೀಸ್ ಪಾಳೆಯದಲ್ಲಿ ಸಂತಸ ಮೂಡಿಸಿದರು.
ಸ್ಯಾಂಕಿ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್
ಮೊದಲ ದಿನದ ಕೊನೆಯಲ್ಲಿ ಉಪನಾಯಕ ಕೆ.ಎಲ್.ರಾಹುಲ್( 20ರನ್)ರ ವಿಕೆಟ್ ಕಬಳಿಸಿದ್ದ ಮುರ್ಫಿ, ಇಂದು ಕೂಡ ತಮ್ಮ ಬೌಲಿಂಗ್ ಚಮತ್ಕಾರ ನಡೆಸಿ ರವಿಚಂದ್ರನ್ ಅಶ್ವಿನ್ ( 23 ರನ್, 2 ಬೌಂಡರಿ, 1 ಸಿಕ್ಸರ್), ಚೇತೇಶ್ವರ್ ಪೂಜಾರ (7, 1 ಬೌಂಡರಿ), ವಿರಾಟ್ ಕೊಹ್ಲಿ (12) ರವರ ವಿಕೆಟ್ ಕಬಳಿಸಿ ಭಾರತ ತಂಡಕ್ಕೆ ಎದುರೇಟು ನೀಡಿದರು.
ಸೂರ್ಯ ಕಾಡಿದ ಲಯಾನ್:
ಟಿ 20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್ ತಮ್ಮ ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಸ್ಪೋಟಕ ಆಟ ಪ್ರದರ್ಶಿಸುವ ಹುರುಪಿನಲ್ಲಿದ್ದರು. ಅದರಂತೆ ಆರಂಭದಲ್ಲೇ ಬೌಂಡರಿ ಸಿಡಿಸಿ ಗಮನ ಸೆಳೆದರಾದರೂ 8 ರನ್ ಗಳಿಸಿ ನಥೇನ್ ಲಿಯಾನ್‍ಗೆ ವಿಕೆಟ್ ಒಪ್ಪಿಸಿದರು.
BIG NEWS : ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆ
ಈ ನಡುವೆ ನಾಯಕ ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಜೀವನದ 8ನೇ ಶತಕ ಸಿಡಿಸಿ ಭಾರತ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತ್ತು. ರೋಹಿತ್ ಶರ್ಮಾ (103) ಹಾಗೂ ರವೀಂದ್ರ ಜಡೇಜಾ ( 12) ಕ್ರೀಸ್‍ನಲ್ಲಿದ್ದರು.
Rohit Sharma, scores, Test, century,