ಬೆಂಗಳೂರು,ಮೇ 31- ಸಂವಿಧಾಬದ್ದ ಆಶಯಕ್ಕೆ ವಿರುದ್ಧವಾಗಿ ಮತ್ತು ಸೂಕ್ತ ಆದೇಶವಿಲ್ಲದೆ ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯ ಖಜಾನೆಗೆ ರೋಹಿತ್ ಚಕ್ರತೀರ್ಥ ಕೋಟ್ಯಂತರ ರೂ ನಷ್ಟ ಮಾಡಿದ್ದು, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂಗೆ ಸಾಹಿತಿ ಹಾಗೂ ಶಿಕ್ಷಣ ತಜ್ಞರು ಮನವಿ ಮಾಡಿದ್ದಾರೆ.
ಮಾಜಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮತ್ತು ತಂಡದ ಸದಸ್ಯರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಇತಿಹಾಸ ಹಾಗೂ ಕನ್ನಡ ಪುಸ್ತಕಗಳ ಸರಬರಾಜು ಸ್ಥಗಿತ ಮಾಡಬೇಕು ಎಂದು ಸಮಾನ ಮನಸ್ಕರ ಒಕ್ಕೂಟ ಒತ್ತಾಯಿಸಿದೆ.
ಯಾವ ಮಾನದಂಡದ ಮೇಲೆ ಬಿಬಿಎಂಪಿ ಚುನಾವಣೆ..?
ರೋಹಿತ್ ಸಮಿತಿಯಿಂದಲೇ ನಷ್ಠ ವಸೂಲಿ ಮಾಡವಂತೆ ಡಾ.ಮರುಳ ಸಿದ್ದಪ್ಪ ನೇತೃತ್ವದ ಸಮಿತಿ ಮನವಿ ಮಾಡಿದ ಸರ್ಕಾರ ಈಗಾಗಲೆ ಪಠ್ಯ ಪರಿಷ್ಕರಣೆಗೆ ನಿರ್ಧರಿಸಿದ್ದು, ಈಗ ನಷ್ಟದ ಬಗ್ಗೆ ದೂರು ಬಂದಿರುವುದರಿಂದ
ತನಿಖೆ ನಡೆಸುವ ಸಾಧ್ಯತೆ ಇದ್ದು ಮಮುಂದಿನ ದಿನಗಳಲ್ಲಿ ರಾಜಕೀಯ ಸಂಘರ್ಷ ಉಂಟಾಗಬಹುದು.
RohithChakrathirtha, #TextRevision, #Complaint,