ಉದ್ಯೋಗ ದಕ್ಕಿಸಿಕೊಂಡ ರಾಜ್ಯದ 1000 ಯುವಕ-ಯುವತಿಯರು

Social Share

ಬೆಂಗಳೂರು,ಅ.22- ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಯುವಕರು ಮತ್ತು ಯುವತಿಯರಿಗೆ ಉದ್ಯೋಗ ಕಲ್ಪಿಸುವ ರೋಜ್‍ಗಾರ ಉದ್ಯೋಗ ಮೇಳದಲ್ಲಿ ರಾಜ್ಯದ ಒಂದು ಸಾವಿರ ಪ್ರತಿಭಾವಂತರಿಗೆ ಉದ್ಯೋಗ ಲಭಿಸಿದೆ.

ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿ ಶುಭ ಕೋರಿದರು.

ಪ್ರಧಾನಿ ನರೇಂದ್ರಮೋದಿ ಅವರು ದೆಹಲಿಯಲ್ಲಿ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ಬೆಂಗಳೂರಿನಲ್ಲೂ ಚಾಲನೆ ಕೊಡಲಾಯಿತು. ಮೊದಲ ಹಂತದಲ್ಲಿ ರಾಜ್ಯದಿಂದ ಕೇಂದ್ರ ಸರ್ಕಾರದ 38 ಇಲಾಖೆಗಳಲ್ಲಿ 1000 ಆಕಾಂಕ್ಷಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರ ಮಾಡಲಾಯಿತು.

ಬೆಂಗಳೂರು : ಮನೆಯ ಟೆರೆಸ್‍ನಲ್ಲಿ ವ್ಯಕ್ತಿಯ ಭೀಕರ ಹತ್ಯೆ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕರ್ನಾಟಕದಲ್ಲಿ ಇಂದು 1000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿದ್ದೇವೆ. ಮುಂದಿನ 12 ತಿಂಗಳು ಈ ಕಾರ್ಯಕ್ರಮ ನಡೆಯುತ್ತದೆ ಎಂದರು.
ಕೋವಿಡ್ ಹಾಗೂ ಉಕ್ರೇನ್, ರಷ್ಯಾ ಯುದ್ಧದ ಬಳಿಕ ಅನೇಕ ಸಮಸ್ಯೆಗಳು ಉದ್ಭವಿಸಿತ್ತು. ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ.

ಉದ್ಯೋಗ ಮೇಳದಲ್ಲಿ ಭಾರತ ಬಹುದೊಡ್ಡ ಹೆಜ್ಜೆ ಇಟ್ಟಿದೆ. ಸ್ಟಾರ್ಟ್ ಅಪ್‍ನಲ್ಲೂ ಬಹಳಷ್ಟು ನಮ್ಮ ದೇಶ ಮುಂದಿದೆ. ಅದರಲ್ಲೂ ಬೆಂಗಳೂರು ಐಟಿ ಹಬ್ ಆಗುತ್ತಿದೆ.

ಏಷ್ಯಾ ಕಪ್ ಪಂದ್ಯದ ಭವಿಷ್ಯ ಬಿಸಿಸಿಐ ನಿರ್ಧರಿಸಲಿದೆ ; ರೋಹಿತ್

ಬ್ರಿಟಿಷ್ ನವರು ನಮ್ಮನ್ನು ಇಲಿಗಳು ಆಡಿಸುವವರು, ಇಲಿಗಳನ್ನು ತಿನ್ನುವವರು ಅಂತ ಒಂದ್ ಕಾಲದಲ್ಲಿ ಹೇಳುತ್ತಿದ್ದರು. ಇಂದು ಆರ್ಥಿಕ ವ್ಯವಸ್ಥೆಯಲ್ಲಿ ನಾವು ಇಂಗ್ಲೆಂಡ್‍ನ್ನು ಹಿಂದಿಕ್ಕಿ ನಾವು ನಾಲ್ಕನೇ ಸ್ಥಾನದಲ್ಲಿ ಇದ್ದೇವೆ ಎಂದು ಹೇಳಿದರು.

ಇಂದು ಒಂದು ರೂಪಾಯಿ ನೀಡದೆ ಕೆಲಸ ಸಿಗುತ್ತಿದೆ. ಹೀಗಾಗಿ ನಿಮ್ಮ ಬಳಿ ಬಂದವರಿಗೆ ತೊಂದರೆ ಕೊಡಬೇಡಿ ಎಂದು ಆಯ್ಕೆಯಾದ ಅಭ್ಯರ್ಥಿಗಳಿಗೆ ಜೋಷಿ ಸಲಹೆ ಮಾಡಿದರು.

Articles You Might Like

Share This Article