ಬುಕಾರೆಸ್ಟï, ಫೆ.15-ರೊಮೇನಿಯಾ ಮತ್ತುಮೊಲ್ಡೊವಾ ದೇಶದ ವಾಯು ಪ್ರದೇಶದಲ್ಲಿ ಬಲೂನ್‍ನಂತಹ ವಸ್ತು ಹಾರಟ ಕಂಡುಬಂದಿದ್ದು ರಷ್ಯಾಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸದೆ.ಮೊಲ್ಡೊವಾ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ .ಯುದ್ದ ಪೀಡಿತ ಉಕ್ರೇನ್‍ನ ಗಡಿಯಲ್ಲಿರುವ ಈ ದೇಶಗಳಲ್ಲಿ ಕಳವಳ ಉಂಟಾಗಿದೆ.
ರೊಮೇನಿಯಾದ ರಕ್ಷಣಾ ಸಚಿವಾಲಯ ಪ್ರಕಾರ ಆಕಾಶದಲ್ಲಿ ಬಲೂನ್ ನಂತಹ ವಸ್ತು ಹಾರುತ್ತದೆ ಎಂಬ ಮಾಹಿತಿ ಆಧರಿಸಿ ಎರಡು ಯುದ್ದ ವಿಮಾನಗಳನ್ನು ಕಾರ್ಯಾಚರಣೆಗೆ ಇಳಿಸಿದೆ.
ಇದು ಸುಮಾರು 36,000 ಅಡಿ ಎತ್ತರದಲ್ಲಿ ರೊಮೇನಿಯ ವಾಯುಪ್ರದೇಶದಲ್ಲಿ ರಾಡಾರ್ ಮೂಲಹ ಆರಂಭದಲ್ಲಿ ಪತ್ತೆಯಾಯಿತು.ಆದರೆ ಎರಡು ವಿಮಾನಗಳ ಪೈಲಟ್‍ಗಳು ಗುರಿಯ ಉಪಸ್ಥಿತಿಯನ್ನು ದೃಢೀಕರಿಸಲಿಲ್ಲ ಎಂದು ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ,
ರೊಮೇನಿಯಾದ ವಿದೇಶಾಂಗ ಸಚಿವ ಬೊಗ್ಡಾನ್ ಔರೆಸ್ಕು ಮಾತನಾಡಿ, ರಾಡಾರ್‍ನಲ್ಲಿ ಕಂಡುಬಂದರೂ ಸಹ ರೊಮೇನಿಯನ್ ಫೈಟರ್ ಜೆಟ್‍ಗಳು ಯಾವುದೇ ವಸ್ತುವನ್ನು ಕಂಡುಹಿಡಿಯಲಿಲ್ಲ ಆದರೂ ರೊಮೇನಿಯನ್ ವಾಯುಪ್ರದೇಶಕ್ಕೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ.
ಹವಾಮಾನ ಪರಿಸ್ಥಿತಿಗಳ ಕಾರಣ ವಿಚಿತ್ರವಾದ ವಸ್ತುವಿನ ಹಾರಾಟದ ಮಾರ್ಗವನ್ನು ಮೇಲ್ವಿಚಾರಣೆ ಮಾಡಲು ಮತ್ತು ಗುರುತಿಸಲು ಅಸಾಧ್ಯವಾದ ಕಾರಣ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೊಲ್ಡೊವಾದ ವಾಯುಯಾನ ಪ್ರಾಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಇದರ ನಡುವೆ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಆರೋಪ ಸಂಪೂರ್ಣವಾಗಿ ಆಧಾರರಹಿತ ಮತ್ತು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ.
#Romania, #suspicious, #weatherballoon, #detected, #airspace,