IAS-IPS ಅಧಿಕಾರಿಗಳ ಬೀದಿ ರಂಪಾಟ : ರೂಪಾ ಮತ್ತು ಸಿಂಧೂರಿಗೆ ನೋಟಿಸ್

Social Share

ಬೆಂಗಳೂರು,ಫೆ.20- ಶಿಸ್ತು ಉಲ್ಲಂಘನೆ, ದುರ್ನಡತೆ ಹಾಗೂ ಕರ್ನಾಟಕ ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿ ಹಾದಿಬೀದಿಯಲ್ಲಿ ರಂಪಾಟ ಮಾಡಿರುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ(ಐಜಿಪಿ)ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪ ಮೌದ್ಗಿಲ್ ಅವರಿಗೆ ಸೇವಾ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ಛತ್ತೀಸ್‍ಗಢ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಇಡಿ ದಾಳಿ

ಈ ಇಬ್ಬರ ನಡವಳಿಕೆ ಸರ್ಕಾರಕ್ಕೆ ಮುಜುಗರ ತಂದಿದ್ದು, ಹಿರಿಯ ಅಧಿಕಾರಿಗಳಾದ ಇವರು ಕಿರಿಯರಿಗೆ ಮಾರ್ಗದರ್ಶಕರಾಗಬೇಕಿತ್ತು. ಹೀಗೆ ವೈಯಕ್ತಿಕ ನಿಂದನೆ ಮತ್ತು ಪರಸ್ಪರ ಆರೋಪ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದು ಕೂಡಲೇ ನೋಟಿಸ್ ಕೊಡುವಂತೆ ಅವರು ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳು ತಮ್ಮನ್ನು ತಾವು ದೇವಮಾನವರು ಎಂದುಕೊಂಡಿದ್ದಾರಾ? ಇಲ್ಲಿ ಒಂದು ಆಡಳಿತ ವ್ಯವಸ್ಥೆಯೂ ಇದೆ. ಯಾವುದೇ ಅಕಾರಿಗಳು ಶಿಸ್ತು ಉಲ್ಲಂಘನೆ ಮಾಡಬಾರದೆಂಬ ನಿಯಮ ಇದ್ದರೂ ಇಬ್ಬರು ಜಿದ್ದಿಗೆ ಬಿದ್ದವರಂತೆ ಪರಸ್ಪರ ಆರೋಪ ಮಾಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆ ನಾಶ

ಈ ಇಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಏನು ಆಗಬೇಕೋ ಅದೇ ಆಗುತ್ತದೆ ಎಂದು ಪರೋಕ್ಷವಾಗಿ ನೋಟಿಸ್ ನೀಡುವ ಮುನ್ಸೂಚನೆ ನೀಡಿದರು. ಮುಖ್ಯಮಂತ್ರಿಗಳು ಇದರ ಬಗ್ಗೆ ಈಗಾಗಲೇ ಗಮನಹರಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರ ಬಗ್ಗೆಯೂ ಸ್ವತಃ ನಾನೇ ಮಾತುಕತೆ ನಡೆಸಿದ್ದೇನೆ.

ಯಾರೇ ಆಗಲಿ ಇತಿಮಿತಿ ಇರಬೇಕು. ಮಾಧ್ಯಮದ ಮುಂದೆ ಮಾತನಾಡುವುದು ಸರಿಯಲ್ಲ. ಶಿಸ್ತು ಉಲ್ಲಂಘನೆ ಮಾಡುವವರಿಗೆ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದು ಸಿಟ್ಟಿನಿಂದಲೇ ಉತ್ತರಿಸಿದರು.

ಇಬ್ಬರ ನಡುವೆ ಯಾವುದೋ ಹಳೆಯ ವೈಯಕ್ತಿಕ ದ್ವೇಷ ಇಲ್ಲವೇ ಸಮಸ್ಯೆಗಳಿರಬಹುದು. ಪರಸ್ಪರ ಕುಳಿತು ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಆದರೆ ಹಿರಿಯ ಅಕಾರಿಗಳಾಗಿ ಇವರೇ ಈ ರೀತಿ ವರ್ತಿಸಿರುವುದು ಸರಿಯಲ್ಲ. ಈ ಹಿಂದೆಯೂ ಕೂಡ ಇವರಿಬ್ಬರಿಗೆ ಎಚ್ಚರಿಕೆ ಕೊಡಲಾಗಿತ್ತು. ಆದರೂ ಈ ವರ್ತನೆ ಅತ್ಯಂತ ನೋವಿನ ಸಂಗತಿ. ಕಾನೂನಿನ ಪ್ರಕಾರ ಏನು ಶಿಕ್ಷೆಯಾಗಬೇಕೊ ಅದು ಆಗೇ ಆಗುತ್ತದೆ. ಸರ್ಕಾರ ಕಣ್ಣಮುಚ್ಚಿ ಕುಳಿತಿಲ್ಲ ಎಂದು ಎಚ್ಚರಿಸಿದರು.

ಇಬ್ಬರು ಕೂಡ ಅತ್ಯಂತ ಕೆಟ್ಟದಾಗಿ ವರ್ತಿಸಿದ್ದಾರೆ. ಅವರು ವೈಯಕ್ತಿಕವಾಗಿ ಏನಾದರೂ ಮಾಡಿಕೊಳ್ಳಲಿ ಅದು ನಮಗೆ ಸಂಬಂಸಿದ್ದಲ್ಲ. ಆದರೆ ಮಾಧ್ಯಮಗಳ ಮುಂದೆ ಬಂದು ಈ ರೀತಿ ಆಪಾದನೆ ಮಾಡಿದ್ದು ಸರಿಯಲ್ಲ. ಇಲಾಖೆಗಳಲ್ಲಿ ಅವ್ಯವಹಾರ ನಡೆದಿದ್ದರೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಅಂಥವರ ಮೇಲೆ ತನಿಖೆ ನಡೆಸಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಹಾದಿಬೀದಿಯಲ್ಲಿ ಮಾತನಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಜಾಲಿಮೂಡ್‍ನಲ್ಲಿ ರಾಹುಲ್, ಪ್ರಿಯಾಂಕಾ

ಇವರಿಬ್ಬರ ಜಗಳ ನಿನ್ನೆಯಿಂದ ಮಾಧ್ಯಮಗಳಲ್ಲಿ ಬರುತ್ತಿದ್ದು ಹಲವು ವಿಷಯಗಳು ಪ್ರಸ್ತಾಪವಾಗಿದೆ. ವೈಯಕ್ತಿಕವಾಗಿ ಇವರಿಬ್ಬರಿಗೆ ಭಿನ್ನಾಭಿಪ್ರಾಯಗಳಿದ್ದರೆ ಏನಾದರೂ ಮಾಡಿಕೊಳ್ಳಲಿ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕಾಗಿತ್ತು. ಆರಂಭದಲ್ಲಿ ನೊಟೀಸ್ ನೀಡುತ್ತೇವೆ, ಆದರೂ ಇವರ ಜಗಳ ಮುಂದುವರಿದರೆ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂದು ನಿರ್ಧಾರ ಮಾಡುತ್ತೇವೆ ಎಂದರು.

Roopa, IPS, Rohini, IAS, government, Notice,

Articles You Might Like

Share This Article