IAS- IPS ಬೀದಿ ಜಗಳಕ್ಕೆ ಮತ್ತೊಂದು ಟ್ವಿಸ್ಟ್

Social Share

ಬೆಂಗಳೂರು,ಫೆ.22- ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವಾಕ್ಸಮರ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬುವರ ಜೊತೆ ರೂಪ ಮೌದ್ಗಿಲ್ ನಡೆಸಿರುವ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದ್ದು, ಸದ್ಯ ವರ್ಗಾವಣೆಗೊಂಡಿರುವ ರೋಹಿಣಿ ಸಿಂಧೂರಿ ವಿರುದ್ಧ ವೈಯಕ್ತಿಕ ಮಟ್ಟದಲ್ಲಿ ದಾಳಿ ನಡೆಸಿದ್ದಾರೆ.

ಡಿ.ರೂಪಾ ಅವರು ರೋಹಿಣಿ ಸಿಂಧೂರಿಯವರನ್ನು ಹಿಗ್ಗಾಮುಗ್ಗ ಬೈಯುತ್ತಿರುವ ಮತ್ತು ತಮ್ಮ ಸಂಸಾರದ ವಿಷಯಗಳನ್ನು ಪ್ರಸ್ತಾಪಿಸಿರುವ ಆಡಿಯೋ ಬಿಡುಗಡೆಯಾಗಿದೆ. ಆಡಿಯೋದಲ್ಲಿ ರೂಪ ಅವರು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ದೂರು ನೀಡುವಂತೆ ಗಂಗರಾಜು ಮೇಲೆ ಒತ್ತಡ ಹೇರುತ್ತಿದ್ದಾರೆ.

ಕೆ.ಆರ್.ಪುರಂ-ವೈಟ್‍ಫೀಲ್ಡ್ ಮೆಟ್ರೋ ರೈಲು ಸಂಚಾರಕ್ಕೆ ದಿನಗಣನೆ ಆರಂಭ

ರೋಹಿಣಿ ಫ್ಯಾಮಿಲಿದು ಲ್ಯಾಂಡ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಬ್ಯುಸಿನೆಸ್. ಕಬಿನಿ ಹತ್ತಿರ ಒಂದು ಲ್ಯಾಂಡ್ ಇದೆ ಅಂತಾ ಪಹಣಿ ಕೊಟ್ಟು ನನ್ನ ಗಂಡ ಲ್ಯಾಂಡ್ ರೆಕಾಡ್ರ್ಸ್‍ನಲ್ಲಿ ಇರೋದ್ರಿಂದ ಹೆಲ್ಪ್ ತಗೋಂಡಿದ್ದಾಳೆ. ಯಾರೋ ಬುಜ್ಜಮ್ಮ ಅನ್ನೋರ ಲ್ಯಾಂಡ್ ಎಷ್ಟೋ ಜನರ ಹೆಸರಲ್ಲಿದೆ ತಗೋಬಹುದಾ ಎಂದು ಒಪಿನಿಯನ್ ಕೇಳಿದ್ದಾಳೆ.

ನಮ್ಮವರನ್ನು ಬಳಸಿಕೊಂಡು ಲ್ಯಾಂಡ್ ಡೀಲ್ ಮಾಡಿದ್ದಾರೆ. ಗಂಡನ ರಿಯಲ್ ಎಸ್ಟೇಟ್ ಪ್ರಮೋಟ್ ಮಾಡಲು ಮಾಹಿತಿ ಸಂಗ್ರಹಿಸಿದ್ದಾರೆ ನಮ್ಮವರಿಂದ ರೋಹಿಣಿ ಸಿಂಧೂರಿ ಮಾಹಿತಿ ಪಡೆಯುತ್ತಿದ್ದಾರೆ ಎಂದಿದ್ದಾರೆ.

ಆಯಮ್ಮನ ದಿಸೆಯಿಂದ ನಮ್ಮ ಕುಟುಂಬ ಚೆನ್ನಾಗಿಲ್ವಲ್ಲ ಈಗ. ನಾನು ಅವರನ್ನ ಅಲ್ಲಿ ಇರೋಕೆ ಬಿಡಲ್ಲ. ನಾನೇ ಟ್ರಾನ್ಸ್‍ಫರ್‍ಗೆ ರಿಕ್ವೆಸ್ಟ್ ಮಾಡಿದ್ದೀನಿ. ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ ಎಲ್ಲರನ್ನೂ ಬುಟ್ಟಿಗೆ ಹಾಕ್ಕೋಳ್ತಾಳೆ. ಡಿ.ಕೆ.ರವಿ ವಿಷಯದಲ್ಲೂ ಆಗಿದ್ದು ಹಾಗೆನೇ. ನಾವು ನೋಡಿದ್ದೀವಲ್ಲ ಎಂದು ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಸಂಭಾಷಣೆ ವೇಳೆ ಆರೋಪ ಮಾಡಿದ್ದಾರೆ.

ರಾಜಕೀಯ ಪ್ರವೇಶಕ್ಕೆ ಚಿಂತನೆ: ಇನ್ನು ಆಡಿಯೋದಲ್ಲಿ ರೂಪ ಅವರು ರೋಹಿಣಿ ಸಿಂಧೂರಿಯವರು ತಮ್ಮ ಪ್ರಭಾವ ಬಳಸಿಕೊಂಡು ತಮ್ಮ ಪತಿಯ ಅಣ್ಣನನ್ನು ಬಿಜೆಪಿಗೆ ಸೇರಿಸುವ ಸಿದ್ಧತೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮೈಸೂರು ಡಿಸಿಯಾಗಿದ್ದಾಗ ಕೇಳಿಬಂದ ಅಕ್ರಮ ಆರೋಪಗಳಿಂದ ಖುಲಾಸೆ ಪಡೆಯಲು ಶಾಸಕ ಸಾ.ರಾ.ಮಹೇಶ್ ಅವರು ನೀಡಿರುವ ಕೇಸನ್ನು ವಾಪಸ್ ಪಡೆಯಲು ಸಂಧಾನ ಮಾಡಲು ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ .ದೇವೇಗೌಡ, ಐಎಎಸ್ ರಮಣರೆಡ್ಡಿ ಮತ್ತು ಮಣಿವಣ್ಣನ್ ಮೂಲಕವೂ ಒತ್ತಡ ಹಾಕುವ ಕೆಲಸ ಮಾಡಿದ್ದಾರೆ ಎಂದು ಆಡಿಯೊದಲ್ಲಿ ರೂಪಾ ಆರೋಪಿಸಿದ್ದಾರೆ.

2024ರ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ವಿವೇಕ್ ರಾಮಸ್ವಾಮಿ ಬಿಡ್

ಅದಲ್ಲದೆ ಆಡಿಯೊದಲ್ಲಿ ಗಂಗರಾಜು ಮೇಲೆ ರೂಪಾ ಹರಿಹಾಯ್ದಿದ್ದಾರೆ. ನೀವು ರೋಹಿಣಿ ಸಿಂಧೂರಿಯನ್ನು ಸಪೋರ್ಟ್ ಮಾಡುತ್ತಿದ್ದೀರಾ, ಊಸರವಳ್ಳಿ ಆಕೆ, ತನ್ನ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು ಹಲವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾಳೆ, ನೀವು ಫೈಲ್ ಹಿಡ್ಕೊಂಡು ಪದೇ ಪದೇ ಅವರ ಬಳಿ ಹೋಗುವುದೇನಿದೆ, ನನಗೆ ಬರುತ್ತಿರುವ ಕೋಪಕ್ಕೆ ಎದ್ದು ಹೋಗಿ ಅಲ್ಲಿಂದ ಆಚೆಗೆ ಎಂದು ಒಂದು ಹಂತದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಅವಾಚ್ಯ ಶಬ್ದಗಳಿಂದ ಸಂಭಾಷಣೆ ವೇಳೆ ರೂಪಾ ನಿಂದಿಸಿದ್ದಾರೆ.

ಇನ್ನು ಆಡಿಯೋ ವೈರಲ್ ಬಗ್ಗೆ ಗಂಗರಾಜು ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ತಿಂಗಳು 30ರಂದು ರೂಪಾ ನನಗೆ ಫೋನ್ ಮಾಡಿದ್ದರು. ಐಪಿಎಸ್ ಅಧಿಕಾರಿ ಡಿ.ರೂಪ ನನ್ನ ಜತೆ 25 ನಿಮಿಷ ಮಾತಾಡಿದ್ದಾರೆ. ಡಿ.ರೂಪಾ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಐಪಿಎಸ್ ಅಧಿಕಾರಿ ಡಿ.ರೂಪ ವಿರುದ್ಧ ದೂರು ನೀಡುತ್ತೇನೆ ಎಂದು ಗಂಗರಾಜು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.

ಅಧಿಕಾರದ ವ್ಯಾಪ್ತಿ ಬಿಟ್ಟು ನನ್ನ ಜತೆ ರೂಪಾ ಮಾತಾಡಿದ್ದಾರೆ. ರೋಹಿಣಿ ಅಕ್ರಮದ ಬಗ್ಗೆ ಮಾಧ್ಯಮಗಳ ಬಳಿ ಹೇಳಿ ಎಂದ್ರು. ನನಗೆ ಫೋಟೋಗಳನ್ನು ಕಳಿಸಿ ಮಾಧ್ಯಮಗಳ ಮುಂದೆ ಇಡಿ ಎಂದ್ರು. ರೂಪಾ ಹೇಳಿಕೆಯನ್ನು ನಾನು ನಿರಾಕರಿಸಿದೆ. ಬೇರೆಯರ ಬಗ್ಗೆ ತೇಜೋವಧೆ ಮಾಡುವುದಿಲ್ಲ ಎಂದು ಹೇಳಿದೆ. ರೋಹಿಣಿ ಬಗ್ಗೆ ದೂರು ನೀಡುವಂತೆ ನನಗೆ ರೂಪಾ ಹೇಳಿದ್ದರು.

ರೋಹಿಣಿ ಅಕ್ರಮದ ಬಗ್ಗೆ ನನ್ನ ಬಳಿ ಸಾಕಷ್ಟು ದಾಖಲೆ ಇದೆ. ಅನ್ಯಾಯ ಮಾಡಿದವರ ವಿರುದ್ಧ ನಾನು ಹೋರಾಟ ಮಾಡುತ್ತಿದ್ದೇನೆ ಎಂದು ರೂಪಾ ಹೇಳಿದರು. ಆದರೆ ರೂಪಾ ಹಾಗಂದ ಮಾತ್ರಕ್ಕೆ ನಾನು ದೂರು ನೀಡಲಾಗುತ್ತಾ? ಎಂದು ಅವರು ತಿಳಿಸಿದ್ದಾರೆ.

Roopa Moudgil, IPS, Rohini Sindhuri, IAS,

Articles You Might Like

Share This Article