ಲಾರಿ ಹಗ್ಗಕ್ಕೆ ಸಿಲುಕಿ ಗಾಳಿಯಲ್ಲಿ ತೂರಿ ಬಿದ್ದ ಬೈಕ್ ಸವಾರ

Social Share

ಚೆನೈ,ಡಿ.15- ಅಜಾಗರೂಕವಾಗಿ ಕಟ್ಟಲಾಗಿದ್ದ ಲಾರಿಯ ಹಗ್ಗ ಜಾರಿ, ಬೈಕ್ ಚಾಲಕನ ಕತ್ತಿಗೆ ಗಂಟು ಬಿದ್ದು ಅಪಾಯಕಾರಿ ಅಪಘಾತ ಸಂಭವಿಸಿದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.

ಸಿಸಿಟಿವಿಯಲ್ಲಿ ದುರ್ಘಟನೆ ಸಂಪೂರ್ಣ ಸೆರೆಯಾಗಿದ್ದು, ಅಪಘಾತಗಳ ಸ್ವರೂಪಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ರಸಗೊಬ್ಬರ ಸಾಗಾಣಿಕೆ ಮಾಡುತ್ತಿದ್ದ ಲಾರಿಯಿಂದ ಅಪಘಾತ ಸಂಭವಿಸಿದ್ದು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶ್ರೀವೈಕುಂಡಮ್ ನಗರದ ಮುತ್ತು ಗಾಯಗೊಂಡಿದ್ದಾರೆ.

ರಸಗೊಬ್ಬರಗಳ ಮೂಟೆಗಳನ್ನು ಹಿಡಿದಿಡಲು ಲಾರಿಯನ್ನು ಬಳಸಿ ಕಟ್ಟಲಾಗಿದ್ದ ಹಗ್ಗ ಇದ್ದಕ್ಕಿದ್ದಂತೆ ಜಾರಿದೆ. ಅದಕ್ಕೆ ಮೂಟೆಯೊಂದು ತಗುಲಿಕೊಂಡು ನೇತಾಡುವ ವೇಳೆಗೆ ಅದೇ ದಾರಿಯಲ್ಲಿ ಎದುರಿಗೆ ಬಂದ ಮುತ್ತು ಅವರ ಕತ್ತಿಗೆ ಸುತ್ತಿಕೊಂಡಿದೆ. ಕ್ಷಣ ಮಾತ್ರದಲ್ಲಿ ಮುತ್ತು ಗಾಳಿಯಲ್ಲಿ ಹಾರಿ ಚೆಂಡಿನಂತೆ ಕೆಳಗೆ ಬಿದಿದ್ದಾರೆ. ಆತ ಓಡಿಸುತ್ತಿದ್ದ ಬೈಕ್ ಸ್ವಲ್ಪ ದೂರ ಹೋಗಿ ಬಿದಿದ್ದೆ.

ಇದ್ದಕ್ಕಿದ್ದಂತೆ ಮುತ್ತು ಹಾರಿ ಬೀಳಲು ಕಾರಣ ತಿಳಿಯದೆ ಸ್ಥಳದಲ್ಲಿದ್ದ ಕೆಲವರು ಕಕ್ಕಾಬಿಕ್ಕಿಯಾಗಿದ್ದಾರೆ. ಆ ಪ್ರದೇಶದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಲಾರಿಯ ಮತ್ತೊಂದು ಮಗ್ಗಲಿನಲ್ಲಿ ಹಗ್ಗ ಜೋತು ಬಿದ್ದಿರುವುದು ಅನಾವುತಕ್ಕೆ ಕಾರಣ ಎಂದು ಸ್ಪಷ್ಟವಾಗಿದೆ.

ಅಂತರ್ಜಾತಿ ವಿವಾಹವಾದವರ ಮಾಹಿತಿ ಸಂಗ್ರಹಕ್ಕೆ ಮುಂದಾದ ಮಹಾರಾಷ್ಟ್ರ

ಸ್ಥಳದಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಮುತ್ತು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲವಾರು ಸ್ವರೂಪದ ಅಪಘಾತಗಳು ವರದಿಯಾಗುತ್ತಲೇ ಇದ್ದು, ತೂತುಕುಡಿಯ ಅಪಘಾತ ಮತ್ತೊಂದು ಸ್ವರೂಪದ್ದಾಗಿದೆ. ಸರಕು ಸಾಗಾಣಿಕೆಯ ಟ್ರಕ್‍ಗಳಲ್ಲಿ ಅಜಾಗರೂಕತೆಯಿಂದ ಕಟ್ಟಲಾಗುವ ಹಗ್ಗಗಳು ಎಷ್ಟು ಅಪಾಯಕಾರಿ ಎಂಬುದು ಸಿಸಿಟಿವಿ ದೃಶ್ಯಗಳು ತೋರಿಸಿವೆ.

truck, wraps, biker neck, Tamil Nadu,

Articles You Might Like

Share This Article