ಐಎಎಸ್ ಅಧಿಕಾರಿ ನಗ್ನ ಚಿತ್ರಗಳನ್ನು ಕಳಿಸಬಹುದಾ..? : ರೂಪಾ ಪ್ರಶ್ನೆ

Social Share

ಬೆಂಗಳೂರು,ಫೆ.20 – ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಂದು ಸಹ ಆರೋಪ ಮುಂದುವರೆಸಿರುವ ಐಪಿಎಸ್ ಅಧಿಕಾರಿ ರೂಪಾ ಅವರು ತಮ್ಮ ಫೇಸ್‍ಬುಕ್‍ನಲ್ಲಿ ತಿರುಗೇಟು ನೀಡಿದ್ದಾರೆ.

ಸಿಂಧೂರಿ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, 3 ನೇ ಬಾರಿ ರಿಮೈಂಡರ್
ಬಂದಿದ್ದರೂ ಅವರು ಏಕೆ ಉತ್ತರ ಕೊಡಲಿಲ್ಲ ಎಂದು ಐಪಿಎಸ್ ಅಧಿಕಾರಿ ರೂಪಾ ಅವರು ಪ್ರಶ್ನಿಸಿದ್ದು, ತಾವು ಮಾಡಿರುವ ಆರೋಪಗಳಿಗೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರೂಪಾ ಅವರು, ಕಾನೂನು ಹೋರಾಟ ಎಲ್ಲರೂ ಮಾಡ್ತಾರೆ, ಮಾಧ್ಯಮದವರ ಸವಾಲು ಎದುರಿಸಲು ಧೈರ್ಯವಿಲ್ಲ. ಅವರ ಪತಿ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.

ಸಿಂಧೂರಿ ಅವರ ಫೋನ್ ಹ್ಯಾಕ್ ಮಾಡಲಾಗಿದೆ ಎಂದು ಅವರ ಪತಿ ಹೇಳಿದ್ದಾರೆ. ಅದು ನಂಬುವ ಮಾತೇ, ಅವರ ಪತ್ನಿ ಮಾನ ಹರಾಜಾಗಿದೆ ಎಂದು ಹೇಳಿದ್ದಾರೆ. ಆದರೆ ಖಾಸಗಿ ಫೋಟೋಗಳನ್ನು ಬೇರೆಯವರಿಗೆ ಕಳುಹಿಸುವ ಅಗತ್ಯವೆನಿತ್ತು. ಈ ರೀತಿಯ ಫೋಟೋಗಳು ಯಾರ್ಯಾರಿಗೆ, ಏಕೆ ಕಳುಹಿಸುತ್ತಾರೆಂದು ಅವರೇ ಹೇಳಿಕೆ ನೀಡಲಿ. ಅದರ ಹಿಂದಿನ ಉದ್ಧೇಶವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಅಸಾಧ್ಯ : ರಮೀಜ್ ರಾಜಾ

ರೋಹಿಣಿ ಸಿಂಧೂರಿ ಅವರು ಗೆಟ್ ವೆಲ್ ಸೂನ್ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ರೂಪಾ ಅವರು ಫೇಸ್‍ಬುಕ್‍ನಲ್ಲಿ ಡಿಲೀಟ್ ಆಗಿರುವ ಫೋಟೋಗಳ ಫೋಸ್ಟ್ ಮಾಡಿ ಐಎಎಸ್ ಅಧಿಕಾರಿ ನಗ್ನ ಚಿತ್ರಗಳನ್ನು ಕಳಿಸಬಹುದಾ?. ಈ ರೀತಿಯ ಫೋಟೋಗಳನ್ನು ಕಳುಹಿಸಿರುವುದು ಯಾವ ಕಾರಣಕ್ಕಾಗಿ? ಸಂಧಾನಕ್ಕೆ?. ಅವರ ಮೇಲಿನ ಆರೋಪಗಳಿಗೆ ಶಿಕ್ಷೆ ಆಗದಂತೆ ತಡೆಯಲೇ? ಅವರೇ ಉತ್ತರಿಸಬೇಕು ಎಂದು ಹೇಳಿದ್ದಾರೆ.

ಕಾನೂನು ಹೋರಾಟದ ಬಗ್ಗೆ ಅವರು ಮಾತನಾಡಿದ್ದಾರೆ. ನಾನು ಸಹ ನ್ಯಾಯಾಲಯದಲ್ಲಿ ಎದುರಿಸಲು ಸಿದ್ಧ ಎನ್ನುವ ಮೂಲಕ ರೂಪಾ ಅವರು ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Row, between, IAS, Rohini Sindhuri, IPS, Roopa,

Articles You Might Like

Share This Article