ಸತತ 3ನೇ ದಿನವೂ ನಡೆಯದ ಸಂಸತ್ ಕಲಾಪ, ಅಮೂಲ್ಯ ಸಮಯ ವ್ಯರ್ಥ

Social Share

ನವದೆಹಲಿ,ಮಾ.15- ವಿದೇಶದಲ್ಲಿ ರಾಹುಲ್‍ಗಾಂಧಿ ಭಾರತೀಯ ಪ್ರಜಾಪ್ರಭತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿ ಆಡಳಿತಾರೂಢ ಬಿಜೆಪಿ ನಡೆಸುತ್ತಿರುವ ವಾಗ್ದಾಳಿ ಮೂರನೇ ದಿನವೂ ಮುಂದುವರೆದಿದ್ದು ಆಡಳಿತ ಮತ್ತು ವಿರೋಧ ಪಕ್ಷಗಳ ಹಗ್ಗ ಜಗ್ಗಾಟದಿಂದ ಸತತ ಮೂರನೇ ದಿನವೂ ಸಂಸತ್ ಉಭಯ ಸದನಗಳಲ್ಲಿ ಯಾವುದೇ ಚರ್ಚೆ ನಡೆಯದೇ ಕಲಾಪ ವ್ಯರ್ಥವಾಗಿದೆ.

ಆಡಳಿತ ಪಕ್ಷದ ಸದಸ್ಯರು ಲಂಡನ್‍ನಲ್ಲಿ ರಾಹುಲ್‍ಗಾಂಧಿ ತಾವು ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರೆ, ಪ್ರತಿಪಕ್ಷಗಳ ಸಂಸದರು ಆಡಳಿತ ಪಕ್ಷದ ಸದಸ್ಯ ಧೋರಣೆಯನ್ನು ಖಂಡಿಸಿ ಸದನದ ಅಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿ ಘೋಷಣೆ ಕೂಗಿದ್ದಾರೆ. ಹೀಗಾಗಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳು ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಿಕೆಯಾಗಿವೆ.

ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಮುಖ್ಯ ಶಿಕ್ಷಕ ಬಂಧನ

ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ರಾಹುಲ್‍ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷದ ಸದಸ್ಯರು ತಮ್ಮ ಕೈಯಲ್ಲಿ ಕೆಲವು ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು, ಅದಾನಿ ಗ್ರೂಪ್‍ನ ಷೇರು ಮೌಲ್ಯ ಹಗರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಪದೇ ಪದೇ ಮನ ವಿ ಮಾಡಿದರು. ಎರಡು ಕಡೆಯ ಸಂಸದರ ಪಟ್ಟು ಬಿಡದೆ ಗದ್ದಲ ಮುಂದುವರೆಸಿದ ಕಾರಣ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

H3N2 ಸೋಂಕಿಗೆ ಮತ್ತಿಬ್ಬರು ಬಲಿ

ಇತ್ತ ರಾಜ್ಯಸಭೆಯಲ್ಲೂ ಇದೇ ರೀತಿಯ ದೃಶ್ಯಗಳು ಪುನಾರಾವರ್ತನೆಯಾದವು. ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಗಿದೆ.

Row, Parliament, Rahul Gandhi, remarks, London,

Articles You Might Like

Share This Article