ರೌಡಿಗಳಿಗೆ ಪಿಸ್ತೂಲ್ ಮಾರಾಟ, ಇಬ್ಬರ ಸೆರೆ

Social Share

ಬೆಂಗಳೂರು,ನ.8- ಮುಂಬೈನಿಂದ ಪಿಸ್ತೂಲು ಖರೀದಿಸಿ ನಗರದಲ್ಲಿ ರೌಡಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ರೌಡಿ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ ನಾಡ ಪಿಸ್ತೂಲು ಹಾಗೂ ನಾಲ್ಕು ಜೀವಂತ ಗುಂಡುಗಳನ್ನು ವಶಪಡಿಸಿ ಕೊಂಡಿದ್ದಾರೆ.

ಹೆಣ್ಣೂರು ಪೊಲೀಸ್ ಠಾಣೆಯ ರೌಡಿ ಮಹಮ್ಮದ್ ಅರಾಫರ್ ಮತ್ತು ಮಹಮ್ಮದ್ ಸಾದತ್ ಮಾಝ್ ಬಂಧಿತ ಆರೋಪಿಗಳು. ರೌಡಿ ಮಹಮ್ಮದ್ ಅರಾಫತ್ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣವಿದ್ದು, ನ್ಯಾಯಲಯದಲ್ಲಿ ವಿಚಾರಣೆ ಹಂತದಲ್ಲಿರುತ್ತದೆ.

ಈತ ಮಹಮ್ಮದ್ ಸಾದತ್ ಮಾಝ್ ಜೊತೆ ನಾಡಪಿಸ್ತೂಲು ಹಾಗೂ ನಾಲ್ಕು ಜೀವಂತ ಗುಂಡುಗಳನ್ನು ಗಿರಾಕಿಯೊಬ್ಬರಿಗೆ ಮಾರಾಟಮಾಡಲು ಆರ್‍ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಯುತ್ತಿದ್ದನು.

ಕೊಡಗಿನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಸಂಘಟಿತ ಅಪಾರಾಧ ದಳ (ಪೂರ್ವ) ವಿಭಾಗದ ಅಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಸಿ ನಾಡಪಿಸ್ತೂಲು ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ರೌಡಿ ಮಹಮ್ಮದ್ ಅರಾಫರ್ ಮತ್ತು ಮಹಮ್ಮದ್ ಸಾದತ್ ಮಾಝ್ ನಾಡಪಿಸ್ತೂಲು ಮತ್ತು ಗುಂಡುಗಳನ್ನು ಬೆಂಗಳೂರಿನಲ್ಲಿ ರೌಡಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಮುಂಬೈನಿಂದ ಖರೀದಿ ಮಾರಾಟ ಮಾಡಲು ಬಂದಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಆನ್‍ಲೈನ್ ಡೆಲಿವರಿ ರೀತಿ ಗಾಂಜಾ ಮಾರಾಟ: ಪೆಡ್ಲರ್ ಬಂಧನ

ಆರೋಪಿಗಳ ವಿರುದ್ಧ ಆರ್‍ಟಿ ನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿರುತ್ತದೆ.

Articles You Might Like

Share This Article