ಬೆಂಗಳೂರು, ಫೆ.17- ಹಣದ ಆಸೆಗಾಗಿ ಜಾಮೀನುದಾರರ ಆಸ್ತಿ ದಾಖಲಾತಿಗಳನ್ನು ತಿದ್ದುಪಡಿ ಮಾಡಿ ಮೋಸ ಮಾಡುತ್ತಿದ್ದ ವ್ಯಕ್ತಿ ಮತ್ತು ರೌಡಿಯೊಬ್ಬನನ್ನು ಯಶವಂತಪುರ ಠಾಣೆ ಪೊಲೀಸರು ಬಂಸಿದ್ದಾರೆ. ಆಸ್ತಿ ದಾಖಲಾತಿಗಳನ್ನು ಈಗಾಗಲೇ ಬೇರೊಂದು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೀಡಿರುವ ವಿಚಾರ ಗೊತ್ತಿದ್ದರೂ ಸಹ ಹಣದ ಆಸೆಗೆ ನ್ಯಾಯಾಲಯಕ್ಕೆ ಆ ದಾಖಲಾತಿಗಳನ್ನು ತಿದ್ದುಪಡಿ ಮಾಡಿ ಮೋಸ ಮಾಡುತ್ತಿದ್ದ ಈ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ವಿರುದ್ಧ ಸಬ್‍ಇನ್ಸ್‍ಪೆಕ್ಟರ್ ನಿತ್ಯಾನಂದಚಾರಿ ಅವರು ಸಿಆರ್‍ಪಿಸಿ ಅಡಿ ಪಿಎಆರ್ ಪ್ರಕರಣವನ್ನು ದಾಖಲಿಸಿ ವಿಶೇಷ ಕಾರ್ಯನಿರ್ವಾಹಕ ದಂಡಾಕಾರಿ ಹಾಗೂ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರ ಮುಂದೆ ಹಾಜರುಪಡಿಸಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡದಂತೆ ದುರ್ವರ್ತನೆ ತೋರದೆ ಸದ್ವರ್ತನೆಯಿಂದ ಇರುವಂತೆ ಮುಚ್ಚಳಿಕೆ ನೀಡಿ ಜಾಮೀನುದಾರರಿಂದ ಜಾಮೀನು ನೀಡಲು ತಿಳಿಸಿದ್ದರು.
ಅದರಂತೆ ಆರೋಪಿಯ ಪರವಾಗಿ ಬಂದ ವ್ಯಕ್ತಿಯೊಬ್ಬ ಜಾಮೀನುದಾರರು ಈ ಮೊದಲೇ ಬೇರೊಂದು ಪ್ರಕರಣದಲ್ಲಿ ಹಾಜರುಪಡಿಸಿದ್ದ ದಾಖಲೆಗಳನ್ನು ತಿದ್ದುಪಡಿ ಮಾಡಿ ನೀಡಿದ್ದರು. ಜಾಮೀನುದಾರರು ಹಾಜರುಪಡಿಸಿದ ಆಸ್ತಿ ದಾಖಲಾತಿಗಳನ್ನು ಪೊಲೀಸರು ಪರಿಶೀಲಿಸಿದಾಗ ನೈಜತೆ ಬಗ್ಗೆ ಅನುಮಾನ ಕಂಡುಬಂದಿದ್ದರಿಂದ ಜಾಮೀನುದಾರರ ಹಿನ್ನೆಲೆ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಯಶವಂತಪುರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್‍ಗೆ ಸೂಚಿಸಲಾಗಿತ್ತು.
ಇನ್ಸ್‍ಪೆಕ್ಟರ್ ಜಾಮೀನುದಾರರ ಹಿನ್ನೆಲೆ ಮತ್ತು ಅವರು ನೀಡಿರುವ ಆಸ್ತಿ ದಾಖಲಾತಿಗಳನ್ನು ಪರಿಶೀಲಿಸಿ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ಈ ವ್ಯಕ್ತಿಯು ರೌಡಿಗೆ ಪರಿಚಯ ಇಲ್ಲದಿರುವುದು ಗೊತ್ತಾಗಿದೆ. ಈ ವ್ಯಕ್ತಿಯನ್ನು ಹಣ ನೀಡಿ ಜಾಮೀನುದಾರರಾಗಲು ಕರೆತಂದಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಆಸ್ತಿ ದಾಖಲಾತಿಗಳನ್ನು ಪರಿಶೀಲಿಸಿ ದಾಗ ಜಾಮೀನುದಾರರು ಈ ಆಸ್ತಿ ದಾಖಲಾತಿಗಳನ್ನು ಈಗಾಗಲೇ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಆದೇಶದಂತೆ ಸ್ಥಿರ ಆಸ್ತಿ ಅಟ್ಯಾಚ್‍ಮೆಂಟ್ ಆಗಿರುವುದು ಕಂಡುಬಂದಿದೆ.
ಈ ವಿಷಯವನ್ನು ಮರೆಮಾಚಿ ಪಹಣಿಯ ಕಲಂ-11ರಲ್ಲಿ ತಿದ್ದುಪಡಿ ಮಾಡಿ ನಕಲು ಪಹಣಿಯನ್ನು ಹಾಜರುಪಡಿಸಿ ಜಾಮೀನುದಾರರು ಬಂದಿರು ವುದು ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಲು ಬಂದ ವ್ಯಕ್ತಿ ಮತ್ತು ರೌಡಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
