ಬಿಜೆಪಿಗೆ ಕಗ್ಗಂಟಾದ ರೌಡಿ ಶೀಟರ್ ಗಳ ಸೇರ್ಪಡೆ ವಿವಾದ

Social Share

ಬೆಂಗಳೂರು,ಡಿ.5- ರೌಡಿಗಳ ಜೊತೆಗಿನ ಸಂಪರ್ಕ ವಿವಾದ ಇದೀಗ ರಾಜ್ಯ ಬಿಜೆಪಿ ಪಾಲಿಗೆ ತಲೆನೋವಾಗಿದ್ದು, ನಾಯಕರ ನಡೆಗೆ ಪಕ್ಷದ ಆಂತರಿಕ ವಲಯದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ರೌಡಿಶೀಟರ್‍ಗಳ ಪಕ್ಷ ಸೇರ್ಪಡೆ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿವಾದ ಪಕ್ಷಕ್ಕೆ ಹಾನಿ ಉಂಟುಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ರೌಡಿ ಶೀಟರ್ ಸೈಲೆಂಟ್ ಸುನೀಲ ಜೊತೆಗೆ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಹಾಗೂ ಶಾಸಕ ಉದಯ್ ಗರುಡಾಚಾರ್ ಚಾಮರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು.

ಮತ್ತೊಂದು ಕಡೆಯಲ್ಲಿ ವೈಯಾಲಿಕಾವಲ್ ರೌಡಿಶೀಟರ್ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿಯನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ನಡುವೆ ಸಚಿವ ವಿ.ಸೋಮಣ್ಣ ನಿವಾಸಕ್ಕೆ ರೌಡಿಶೀಟರ್ ವಿಲ್ಸನ್‍ಗಾರ್ಡನ್ ನಾಗ ಭೇಟಿ ನೀಡಿರುವುದು ಕೂಡ ವಿವಾದ ಸೃಷ್ಟಿಸಿದೆ.

ಕ್ರಿಕೆಟ್ ಬೆಟ್ಟಿಂಗ್ : ಮೂವರು ಬುಕ್ಕಿಗಳ ಸೆರೆ, 10.5 ಲಕ್ಷ ನಗದು, 3 ಮೊಬೈಲ್‍ಗಳ ವಶ

ಈ ವಿವಾದಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೊತ್ತಲ್ಲೇ ಆನೇಕಲ್ ಪುರಸಭೆಗೆ ರೌಡಿಶೀಟರ್ ಮಂಜುನಾಥ್.ಎಸ್ ಎಂಬಾತನನ್ನು ನಾಮನಿರ್ದೇಶನ ಮಾಡಲಾಗಿದ್ದು, ಈ ವ್ಯಕ್ತಿ ಸದ್ಯವೇ ಬಿಜೆಪಿ ಸೇರ್ಪಡೆಯಾಗಲಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ.

ಬಿಜೆಪಿ ನಾಯಕರು ರೌಡಿ ರಾಜಕಾರಣದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಪದೇ ಪದೇ ಟೀಕೆ ಮಾಡುತ್ತಿದ್ದರು. ಕಾಂಗ್ರೆಸ್ ರೌಡಿಗಳನ್ನು ತಯಾರಿಸುವ ಕಾರ್ಖಾನೆ ಎಂದೂ ಜರೆಯುತ್ತಾ ಬಂದಿದ್ದಲ್ಲದೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ವರ್ತನೆ ವಿರುದ್ಧ ಬಿಜೆಪಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದೆ. ಇಂಥಹ ಪಾರ್ಟಿ ವಿಥ್ ಡಿಫರೆಂಟ್ ಎಂದು ಕರೆಸಿಕೊಳ್ಳುವ ಬಿಜೆಪಿ ಪಕ್ಷ ಈಗ ರೌಡಿಗಳಿಗೆ ಮಣೆ ಹಾಕುತ್ತಿರುವುದು ವಿವಾದ ಸೃಷ್ಟಿಸಿದೆ.

ರೌಡಿಗಳ ಪಕ್ಷ ಸೇರ್ಪಡೆ ಹಾಗೂ ಕಾರ್ಯಕ್ರಮದಲ್ಲಿ ಭಾಗಿ ವಿಚಾರ ಬಿಜೆಪಿ ಪಕ್ಷದೊಳಗೆ ಸಾಕಷ್ಟು ಚರ್ಚೆಯನ್ನು ಸೃಷ್ಟಿಸಿದೆ. ವಿವಾದವನ್ನು ಮುಕ್ತಾಯಗೊಳಿಸಲು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ.

ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸ್ಪಷ್ಟೀಕರಣ ನೀಡಿದ್ದಾರೆ. ಕೆಲವು ಹಿರಿಯ ಸಚಿವರು ಕೂಡ ರೌಡಿಗಳ ಸೇರ್ಪಡೆ ಕುರಿತಾಗಿ ಆಕ್ಷೇಪ ಎತ್ತಿದ್ದಾರೆ. ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸದೇ ಇದ್ದರೂ ಆಂತರಿಕವಾಗಿ ಪಕ್ಷದ ಕೆಲವು ಶಾಸಕರು ಹಾಗೂ ಮುಖಂಡರ ನಡೆಯನ್ನು ವಿರೋಧಿಸುತ್ತಿದ್ದಾರೆ.

ಸಿದ್ರಾಮುಲ್ಲಾಖಾನ್ ಅಲ್ಲದೆ ಮತ್ತಿನ್ನೇನು : ಬಿಜೆಪಿ

ಪ್ರಭಾವಿ ಸಚಿವರೊಬ್ಬರು ಆಂತರಿಕ ಸಂವಹನದ ವೇಳೆ ಈ ವಿಚಾರದಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೌಡಿಗಳ ಸೇರ್ಪಡೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಇದು ಸರಿಯಾದ ನಡೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೈಲೆಂಟ್ ಸುನೀಲ, ಫೈಟರ್ ರವಿ, ವಿಲ್ಸನ್ ಗಾರ್ಡನ್ ನಾಗಾ, ಮಂಜುನಾಥ್.ಎನ್ ಆಲಿಯಾಸ್ ಕುಟ್ಟಿ ಮುಂತಾದ ಹೆಸರುಗಳು ಬಿಜೆಪಿ ಮುಖಂಡರ ಸುತ್ತ ಸುತ್ತುತ್ತಿರುವುದು ಪಕ್ಷಕ್ಕೆ ಹಾನಿ ಉಂಟು ಮಾಡುತ್ತಿದೆ.

ಮೂವರು ಆರೋಪಿಗಳ ಬಂಧನ, 5 ಲಕ್ಷ ಮೌಲ್ಯದ ಮಾಲು ಜಪ್ತಿ

ಚುನಾವಣಾ ಸಂದರ್ಭದಲ್ಲಿ ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದ್ದು, ನಿರಂತರ ಹೇಳಿಕೆಗಳು ಹಾಗೂ ಟ್ವೀಟ್‍ಗಳ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯುತ್ತಿದೆ.

#Rowdy, #Sheeters, #Controversy, #Problem, #BJP,

Articles You Might Like

Share This Article