ಮತ್ತೆ ಸದ್ದು ಮಾಡಿದ ಪೊಲೀಸರ ರಿವಾಲ್ವರ್ : ರೌಡಿಗೆ ಗುಂಡೇಟು

Social Share

ನೆಲಮಂಗಲ, ನ.25- ಪೊಲೀಸರ ರಿವಾಲ್ವರ್ ಮತ್ತೆ ಸದ್ದು ಮಾಡಿದ್ದು, ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಕೊಲೆ ಆರೋಪಿಯೂ ಆಗಿರುವ ರೌಡಿ ಮಾದನಾಯಕನಹಳ್ಳಿ ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ.ರಾಜ ರಾಜನ್ ಅಲಿಯಾಸ್ ಸೇಟು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಶೀಟರ್.

ಘಟನೆ ವಿವರ: ದಾಸನಪುರ ಹೋಬಳಿ ಮಾಚೋಹಳ್ಳಿಯ ಗೋಡೌನ್ ಒಂದರ ಬಳಿ ನ.14ರಂದು ನಡೆದ ರೌಡಿ ಶೀಟರ್ ನಟರಾಜ ಅಲಿಯಾಸ್ ಮುಳ್ಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜನ್ ಅಲಿಯಾಸ್ ಮುಳ್ಳು, ಕುಮಾರ್ ಸೇರಿದಂತೆ ಮೂವರು ಆರೋಪಿಗಳನ್ನು ಎರಡು ದಿನಗಳ ಹಿಂದೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಟರಾಜನ ಕೊಲೆಗೆ ಹಳೇ ವೈಷಮ್ಯವೇ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ. ಬಂಧಿತ ಪ್ರಮುಖ ಆರೋಪಿ ರಾಜರಾಜನ್ ನನ್ನು ಮಾದನಾಯಕನಹಳ್ಳಿ ಪೊಲೀಸ್ ತಂಡ ಇಂದು ಮುಂಜಾನೆ ಸ್ಥಳ ಮಹಜರ್‍ಗಾಗಿ ನೈಸ್ ಜಂಕ್ಷನ್ ಬಳಿಯ ನವಿಲೆ ಲೇಔಟ್ ಬಳಿ ಕರೆದೊಯ್ದ ಸಂದರ್ಭದಲ್ಲಿ ಕೊಲೆಗೆ ಬಳಸಿದ ಲಾಂಗ್ ನ್ನು ಹುಡುಕಿ ತೆಗೆದಿದ್ದಾನೆ.

ಅಮಾನತುಗೊಂಡ ಟ್ವಿಟರ್ ಖಾತೆಗಳು ಮರು ಸ್ಥಾಪನೆಯಾಗಲಿವೆ

ಆರೋಪಿ ರಾಜರಾಜನ್ ಏಕಾಏಕಿ ಪೊಲೀಸರ ಮೇಲೆ ಅದೇ ಲಾಂಗ್ ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾನ್‍ಸ್ಟೇಬಲ್ ಹಾಜ ನಾಮ್ದಾರ್ ಎಡಗೈಗೆ ತೀವ್ರತರವಾದ ಗಾಯವಾಗಿದೆ.

ತಕ್ಷಣ ಪೊಲೀಸ್ ಇನ್ಸ್ ಪೆಕ್ಟರ್ ಬಿ ಎಸ್ ಮಂಜುನಾಥ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರೂ ಆರೋಪಿ ರಾಜರಾಜನ್ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಎಡಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.

ಮತದಾರರಿಗೆ ತೀರ್ಥಯಾತ್ರೆ, ಪ್ರವಾಸ, ಭರ್ಜರಿ ಉಡುಗೊರೆಗಳ ಭಾಗ್ಯ

ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಕಾನ್‍ಸ್ಟೇಬಲ್ ಹಾಜ ನಾಮ್ದಾರ್ ಅವರು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ.

rowdy, shot, Nelamangala, police,

Articles You Might Like

Share This Article