ಮುಂಬೈ, ಮಾ. 13- ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‍ನಲ್ಲಿ ಆಡಿರುವ 4 ಪಂದ್ಯಗಳಲ್ಲೂ ಹೀನಾಯ ಸೋಲು ಕಂಡಿರುವ ಸ್ಮೃತಿ ಮಂಧಾನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲನ್ನು ಎದುರಿಸುತ್ತಿದ್ದು ಟೂರ್ನಿಯಲ್ಲಿ ಉಳಿಯಲು ಆರ್‌ಸಿಬಿಗೆ ನಿರ್ಣಾಯಕ ಪಂದ್ಯವಾಗಿದೆ.
ಈ ಹಿಂದೆ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‍ಸಿಬಿ ತಂಡವು 60 ರನ್‍ಗಳ ಅಂತರದಿಂದ ಹೀನಾಯ ಸೋಲು ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಬ್ಯಾಟ್‍ವುಮೆನ್ಸ್‍ಗಳಾದ ನಾಯಕಿ ಮೆಕ್‍ಲ್ಯಾಗೆನ್ ( 72 ರನ್) ಹಾಗೂ ಶೆಫಾಲಿ ವರ್ಮಾ (84)ರವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ನಂತರ ಬ್ಯಾಟಿಂಗ್ ನಡೆಸಿದ ಆರ್‍ಸಿಬಿ ಬ್ಯಾಟರ್‍ಗಳ ವೈಫಲ್ಯದಿಂದ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಶಕ್ತವಾಗಿ 60 ರನ್‍ಗಳಿಂದ ಸೋಲೊಪ್ಪಿಕೊಂಡಿತು.
ನೈಸ್ ರಸ್ತೆಯ ಅತಿ ಹೆಚ್ಚು ಟೋಲ್ ಸಂಗ್ರಹಕ್ಕೆ ಲಾರಿ ಮಾಲೀಕರ ಆಕ್ರೋಶ
ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಸ್ಮೃತಿ ಮಂಧಾನಾ ಪಡೆ ಮೊದಲ ಗೆಲುವಿಗಾಗಿ ಹುಡುಕಾಟ ನಡೆಸುತ್ತಿದ್ದು, ಇಂದು ನಡೆಯಲಿರುವ ಮುಂಬೈನ ಡಿ.ವೈ.ಪಾಟೀಲ್ ಅಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ಬೌಲರ್‍ಗಳಿಗೆ ನೆರವಾಗಬೇಕು.
ಮೆಂಟಲ್ ಗಿರಾಕಿಗಳ ಬಗ್ಗೆ ಪ್ರತಿಕ್ರಿಯೆ ನೀಡಲ್ಲ : ಡಿಕೆಶಿ
ಡೆಲ್ಲಿ ಕ್ಯಾಪಿಟಲ್ಸ್‍ನ ಆಟಗಾರ್ತಿ ಯರಾದ ಮೆಕ್ ಲ್ಯಾಗೆನ್, ಶೆಫಾಲಿ ವರ್ಮಾ, ಜೆಮಿಯಾ ರೊಡಿಗಾಸ್, ಮರಿಜಾನಾ ಕ್ಯಾಪ್‍ರ ರನ್ ದಾಹಕ್ಕೆ ಬ್ರೇಕ್ ಹಾಕುವುದು ಆರ್‍ಸಿಬಿ ಬೌಲರ್‍ಗಳ ಮುಂದಿರುವ ಸವಾಲಾಗಿದೆ.
Royal Challengers Bangalore, Women, Delhi Capitals, Women,