LIVE : ಸಿರಾ ಮತ್ತು ಆರ್.ಆರ್.ನಗರ ಉಪಚುನಾವಣೆ ರಿಸಲ್ಟ್

Spread the love

> ರಾಜರಾಜೇಶ್ವರಿ ನಗರ :
ಬಿಜೆಪಿ – ಮುನಿರತ್ನ ನಾಯ್ಡು  : ಗೆಲುವು – 124446
ಕಾಂಗ್ರೆಸ್ – ಕುಸುಮಾ               :  ಸೋಲು – 67405
ಜೆಡಿಎಸ್ – ಕೃಷ್ಣಮೂರ್ತಿ        :  ಸೋಲು – 10187
ಇತರೆ                                          :
ನೋಟಾ ಮತಗಳು                     : 2471

> ಸಿರಾ ವಿಧಾನಸಭಾ ಕ್ಷೇತ್ರ   :   
ಬಿಜೆಪಿ – ಡಾ.ರಾಜೇಶ್ ಗೌಡ       :  ಗೆಲುವು – 72739
ಕಾಂಗ್ರೆಸ್ – ಟಿ.ಬಿ. ಜಯಚಂದ್ರ  :  ಸೋಲು – 60321
ಜೆಡಿಎಸ್ – ಅಮ್ಮಾಜಮ್ಮ           :  ಸೋಲು – 34724
ಇತರೆ                                           :
ನೋಟಾ ಮತಗಳು                      : 622

0000 0000 0000 0000 0000

# ಬಿಹಾರ ವಿಧಾನಸಭಾ ಚುನಾವಣೆ : ಒಟ್ಟು ಸ್ಥಾನಗಳು – 243
NDA  : 127
MGB : 106
LJB : 02
others : 08

#HIGHLIGHTS : 

# ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಬೆಂಗಳೂರಿ ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಸಿದ್ದು, ಪ್ರತಿಪಕ್ಷಗಳಿಗೆ ಭಾರೀ ಮುಖಭಂಗ ಉಂಟಾಗಿದೆ.  ತುಮಕೂರು ಜಿಲ್ಲೆ ಶಿರಾದಲ್ಲೂ ಬಿಜೆಪಿ ಅಭ್ಯರ್ಥಿ 5 ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆ ಸಾಸಿದ್ದು, ಇಲ್ಲೂ ಕೂಡ ಕಮಲ ಅರಳುವ ಸಾದ್ಯತೆ ನಿಚ್ಚಳವಾಗಿದೆ.

# ಆರ್.ಆರ್.  ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಸುಮಾರು 30 ಸಾವಿರಕ್ಕೂ ಅಕ ಮತಗಳಿಂದ ಗೆಲುವು ಸಾಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್‍ಗೆ ತೀವ್ರ ಮುಖಭಂಗವಾಗಿದೆ.  ಶತಾಯಗತಾಯ ಮುನಿರತ್ನ ಅವರನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ ನಡೆಸಿದ ತಂತ್ರಗಳೆಲ್ಲವೂ ಕೈ ಕೊಟ್ಟಿದ್ದು, ಮುನಿರತ್ನಗೆ ಮತದಾರ ಗೆಲುವಿನ ಮುದ್ರೆ ಒತ್ತಿದ್ದಾರೆ.

# 2018ರ ಚುನಾವಣೆಯಲ್ಲಿ 60 ಸಾವಿರ ಮತ ಪಡೆದಿದ್ದ ಜೆಡಿಎಸ್ ಈ ಉಪಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದಲೂ ಹಲವು ಕಾರಣಗಳಿಂದ ರಾಜ್ಯದ ಗಮನ ಸೆಳೆದಿದ್ದ ಆರ್.ಆರ್.ನಗರದಲ್ಲಿ ಮುನಿರತ್ನ ಗೆಲುವು ನೇರವಾಗಿಯೇ ಡಿ.ಕೆ.ಸಹೋದರರಿಗೆ ಜಂಘಾಬಲವನ್ನೇ ಉಡುಗುವಂತೆ ಮಾಡಿದೆ.

# ಚುನಾವಣಾ ಪ್ರಾರಂಭದ ದಿನದಿಂದಲೂ ಒಂದಿಲ್ಲೊಂದು ಕಾರಣದಿಂದ ರಾಜ್ಯದ ಗಮನಸೆಳೆದ ಆರ್‍ಆರ್‍ನಗರದಲ್ಲಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಸಿದ್ದು, ಡಿ.ಕೆ.ಸಹೋದರರ ಯಾವುದೇ ರಾಜಕೀಯ ತಂತ್ರಗಳು ಕೈಹಿಡಿದಿಲ್ಲ.  ಅಂಚೆ ಮತಗಳಿಂದ ಹಿಡಿದು, ಪ್ರಾರಂಭದ ಸುತ್ತಿನಿಂದಲೂ ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡ ಮುನಿರತ್ನ ಎಲ್ಲರ ನಿರೀಕ್ಷೆಯನ್ನು ತಲೆಕೆಳಗೆ ಮಾಡಿ ವಿಜಯಲಕ್ಷ್ಮಿ ಒಲಿಸಿಕೊಂಡರು.

# ಬಿಜೆಪಿಯ ವ್ಯವಸ್ಥಿತ ಪ್ರಚಾರ, ತಳಮಟ್ಟದ ಸಂಘಟನೆ, ಒಗ್ಗಟ್ಟು, ಬಿಬಿಎಂಪಿ ಸದಸ್ಯರು ಕೊನೆ ಕ್ಷಣದಲ್ಲಿ ಮುನಿರತ್ನ ಕೈಹಿಡಿದಿದ್ದು, ಗೆದ್ದರೆ ಸಚಿವರಾಗುತ್ತಾರೆ ಎಂಬ ಸಿಎಂ ಯಡಿಯೂರಪ್ಪನವರ ಆಶ್ವಾಸನೆ ಗೆಲುವಿಗೆ ಪೂರಕವಾಗಿದೆ.
ಶತಾಯಗತಾಯ ಉಪಸಮರದಲ್ಲಿ ಮುನಿರತ್ನ ಸೋಲಿಸಲೇಬೇಕೆಂದು ಪಣತೊಟ್ಟಿದ್ದ ಡಿ.ಕೆ.ಶಿವಕುಮಾರ್, ಜ್ಯೋತಿಷಿ ಒಬ್ಬರ ಸಲಹೆಯಂತೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಮತದಾರ ಕಾಂಗ್ರೆಸ್ ಅಭ್ಯರ್ಥಿಯನ್ನು ಕೈ ಹಿಡಿದಿಲ್ಲ.

# ಮುನಿರತ್ನ ಅವರ ರಾಜಕೀಯ ತಂತ್ರದ ಮುಂದೆ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಭಾವನಾತ್ಮಕವಾಗಿ ಕಣ್ಣೀರು ಸಫಲವಾಗಿಲ್ಲ. ಬಹುತೇಕ ಎಲ್ಲಾ ವಾರ್ಡ್‍ಗಳಲ್ಲೂ ಬಿಜೆಪಿ ಮುನ್ನಡೆ ಸಾಸಿದೆ. ಕುಸುಮಾ ಅಭ್ಯರ್ಥಿಯಾಗಿದ್ದರೂ ಸಂಸದ ಡಿ.ಕೆ.ಸುರೇಶ್ ತಾನೇ ಅಭ್ಯರ್ಥಿ ಎಂಬಂತೆ ಪ್ರಚಾರ ನಡೆಸಿದ್ದರೂ ಇವಾವೂ ಮತದಾರರನ್ನು ಆಕರ್ಷಿಸಿಲ್ಲ.

# ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಗೆದ್ದಿದ್ದ ಮುನಿರತ್ನ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದರಿಂದ ಉಪಚುನಾವಣೆ ಎದುರಾಗಿತ್ತು.  ಈವರೆಗೂ ನಡೆದ ಚುನಾವಣೆಗಳಲ್ಲಿ ಠೇವಣಿಯನ್ನೇ ಪಡೆಯಲು ಸಾಧ್ಯವಾಗದಿದ್ದ ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅರಳುವ ಮುನ್ಸೂಚನೆ ಸಿಕ್ಕಿದೆ.

# ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‍ಗೌಡ ಅವರು ಕಾಂಗ್ರೆಸ್‍ನ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರನ್ನು ಪರಾಭವಗೊಳಿಸಿ ಸ್ರ್ಪಸಿದ್ದ ಮೊದಲ ಚುನಾವಣೆಯಲ್ಲಿ ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ.  ಅನುಕಂಪದ ಅಲೆ ಕೈ ಹಿಡಿಯಲಿದೆ ಎಂಬ ನಂಬಿಕೆ ಮೇಲೆ ಸ್ರ್ಪಗಿಳಿದಿದ್ದ ದಿವಂಗತ ಸತ್ಯನಾರಾಯಣ ಅವರ ಪತ್ನಿ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರಿಗೂ ಹಿನ್ನಡೆಯಾಗಿದೆ.

# ಸಚಿವ ಶ್ರೀರಾಮುಲು ಪ್ರತಿಕ್ರಿಯೆ :
ಮುಖ್ಯಮಂತ್ರಿ ಮತ್ತು ಅವರ ಆಡಳಿತದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಆ ಕಾರಣದಿಂದ ಇವತ್ತು ನಾವು ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ಕಡೆ ಹೆಜ್ಜೆ ಇಟ್ಟಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.  ಕಾವೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಬಳಿಕ ಮಾತನಾಡಿದ ಸಚಿವರು ನಮ್ಮ ಯುವ ನಾಯಕ ವಿಜಯೇಂದ್ರ ಮುಂದಾಳತ್ವದಲ್ಲಿ ಗೆಲುವಾಗ್ತಿದೆ.

ನಾನು ಹಿಂದೆ ಒಂದು ಮಾತು ಹೇಳಿದ್ದೆ ವಿಜಯೇಂದ್ರ ಎಲ್ಲೇ ಹೋದ್ರು ಗೆಲ್ತಾರೆ ಅಂತ. ಅದ್ರಂತೆಯೇ ಆಗ್ತಿದೆ ಈಗ ಎಂದರು. ವಿಜಯೇಂದ್ರ ಬಿಜೆಪಿ ಪಾರ್ಟಿಗೆ ಬಾಹುಬಲಿ ಇದ್ದಂತೆ. ಅವರು ಹೋದ ಕಡೆ ಎಲ್ಲಾ ಕಡೆ ಗೆಲ್ಲಿಸಿಕೊಂಡು ಬರುತ್ತಾರೆ ಎಂದು ಶ್ರೀರಾಮುಲು ವಿಜಯೇಂದ್ರರನ್ನು ಹೊಗಳಿದ್ದಾರೆ.

ವಿರೋಧ ಪಕ್ಷದವರಿಗೆ ಮಾತನಾಡೋಕೆ ಏನೂ ಇಲ್ಲ. ಸಿಎಂ ಕುರ್ಚಿನಾ ಮ್ಯೂಸಿಕಲ್ ಚೇರ್ ಅನ್ನುವ ಥರ ಮಾತನಾಡಿದ್ದರು. ಈಗ ಫಲಿತಾಂಶ ಬಂದಿದೆ ಅವರು ಹೇಳಿದ್ದು ಎಲ್ಲಾ ಸುಳ್ಳಾಗಿದೆ ಎಂದು ಅಪಹಾಸ್ಯ ಮಾಡಿದರು. ಬಿಹಾರದಲ್ಲಿ ಕೂಡ ಜನ ಬಿಜೆಪಿ ಪರ ಒಲವು ತೋರಿದ್ದಾರೆ ಎಂದು ಶ್ರೀರಾಮುಲು ಹರ್ಷ ವ್ಯಕ್ತಪಡಿಸಿದರು.

# ‘ಬಂಡೆ’ ಛಿದ್ರ : ಕಟೀಲ್ ಪ್ರತಿಕ್ರಿಯೆ :
ಜನತೆಯ ಮುಂದೆ ಅಹಂಕಾರ, ದರ್ಪ ನಡೆಯುವುದಿಲ್ಲ ಎಂಬುದಕ್ಕೆ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರತಿಪಕ್ಷದ ವಿಧಾನಸಭೆ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಕ್ಕ ಪಾಠ ಕಲಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಯಾವ ರೀತಿ ಮಾತನಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ದರ್ಪ ಮತ್ತು ಅಹಂಕಾರಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಹುಲಿಯ ಈಗ ಕಾಡಿಗೆ ಹೋದರೆ, ಬಂಡೆಯನ್ನು ಜನ ಛಿದ್ರ ಮಾಡಿದ್ದಾರೆ. ಜನತೆಯ ಮುಂದೆ ನಮ್ಮ ಆಟಗಳು ನಡೆಯುವುದಿಲ್ಲ ಎಂಬುದಕ್ಕೆ ಈ ಉಪಚುನಾವಣೆಯ ಫಲಿತಾಂಶ ಎಲ್ಲರಿಗೂ ಎಚ್ಚರಿಕೆಯ ಗಂಟೆ ಎಂದು ಹೇಳಿದರು.

ಇಂದು ಮುಂದಾದರೂ ಪ್ರಚಾರದ ವೇಳೆ ಹೇಗೆ ಮಾತನಾಡಬೇಕೆಂಬ ಸಾಮಾನ್ಯಜ್ಞಾನವನ್ನು ಇಟ್ಟುಕೊಂಡು ಸಿದ್ದರಾಮಯ್ಯ ಮಾತನಾಡಲಿ. ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ಏನೇನೊ ಮಾತನಾಡಬಾರದು ಎಂದು ಟಾಂಗ್ ನೀಡಿದರು.

ಎರಡು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಮತದಾರರ ನಮ್ಮನ್ನು ಕೈಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ನಾವು ಆಡಳಿತ ನಡೆಸಬೇಕು ಎಂದು ಹೇಳಿದರು.

Sri Raghav

Admin