ಪಾಟ್ನಾ,ಜ.28- ರೈಲ್ವೆ ನೇಮಕಾತಿ ಮಂಡಳಿ(ಆರ್‌ಆರ್‌ಬಿ ) ತಾಂತ್ರಿಕೇತರ ಜನಪ್ರಿಯ ವರ್ಗದ ಪರೀಕ್ಷಾ ಪ್ರಕ್ರಿಯೆ ಸಮಪರ್ಕವಾಗಿಲ್ಲ ಎಂದು ಆರೋಪಿ ವಿದ್ಯಾರ್ಥಿ ಸಂಘಗಳು ಕರೆ ನೀಡಿದ್ದ ಮತ್ತು ಪ್ರತಿಪಕ್ಷಗಳ ಬೆಂಬಲ ಪಡೆದಿದ್ದ ಬಿಹಾರ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆಯೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕರೆ ನೀಡಲಾಗಿದ್ದ ಬಂದ್‍ನ ಬೆಂಬಲಿಗರು ಆರ್‌ಆರ್‌ಬಿ ಯ ವಿರುದ್ಧ ಬೆಳಗ್ಗೆಯೇ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರವು ಪರಿಸ್ಥಿತಿ ಕೈಮೀರುವ ಮುನ್ನ ಮಧ್ಯ ಪ್ರವೇಶಿಸಲಿಲ್ಲ ಮತ್ತು ರಾಜ್ಯ ಸರ್ಕಾರವು ಕಳೆದ ಕೆಲವು ದಿನಗಳಿಂದ ನಡೆದಿರುವ ವ್ಯಾಪಕ ದೊಂಬಿ ಮತ್ತು ಗಲಭೆಗಳ ಹಿನ್ನೆಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವಿರುದ್ದ ಮೊಕದ್ದಮೆ ಹೂಡಿದೆ.
ಪಾಟ್ನಾದಲ್ಲಿ ಬಂದ್ ಬೆಂಬಲಿಗರು ಅಶೋಕ್ ರಾಜ್‍ಪಥ್‍ನಲ್ಲಿ ಟೈರ್‍ಗಳನ್ನು ಸುಟ್ಟರು. ಈ ರಸ್ತೆ ರಾಜ್ಯದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ, ರಾಜ್ಯದ ಅತ್ಯಂತ ಪ್ರತಿಷ್ಠಿತ ಶಾಲಾಕಾಲೇಜುಗಳು.. ಹೀಗೆ ಅತ್ಯಂತ ಚಟುವಟಿಕೆಯಿಂದ ಕೂಡಿರುತ್ತದೆ. ಆದರೆ ಇಂದು ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲಿಲ್ಲ.
