ಚಂಡೀಗಢ,ನ.12– ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೋಹ್ಟಕ್‌ನಲ್ಲಿ ಪೊಲೀಸರು ತಪಾಸಣೆಯ ಸಮಯದಲ್ಲಿ ಕಾರಿನಿಂದ 1 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಲ್ಲಿ ಕಾರು ಸ್ಫೋಟದ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ ವಾಹನಗಳ ತಪಾಸಣೆ ಸಂರ್ಭದಲ್ಲಿ ಈ ಹಣ ಪತ್ತೆಯಾಗಿದೆ ಎಂದು ರೋಹ್ಟಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಸ್. ಭೋರಿಯಾ ಹೇಳಿದ್ದಾರೆ.
ಶಿವಾಜಿ ಕಾಲೋನಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್‌್ಸಪೆಕ್ಟರ್‌ರಾಕೇಶ್ ಸೈನಿ ನೇತೃತ್ವದ ಪೊಲೀಸ್ ತಂಡವು ಜಜ್ಜರ್‌ನಿಂದ ಕಾರಿನಲ್ಲಿ ಬರುತ್ತಿದ್ದ ನಾಲ್ವರು ಪುರುಷರೊಂದಿಗೆ ತಡೆದಿದ್ದರೆ.
ಪರಿಶೀಲಿಸಿದಾಗ, ಹಿಂದೆ ಕುಳಿತಿದ್ದ ಇಬ್ಬರು ಪ್ರಯಾಣಿಕರು ಹೊಂದಿದ್ದ ಬಾಗ್ ನಲ್ಲಿ ತಲಾ 500, 100 ಮತ್ತು 200 ರೂಪಾಯಿ ನೋಟುಗಳ ಬಂಡಲ್‌ಗಳು ಪತ್ತೆಯಾಗಿದೆ ಒಟ್ಟು ನಗದು 1 ಕೋಟಿ ರೂ ಇಒತ್ತು ಎಂದಿದ್ದರೆ. ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿ ಹೇಳಿದರು.
