ಶಿವಸೇನೆ ಪಕ್ಷದ ಶಿರ್ಷಿಕೆ, ಚಿನ್ಹೆ ಖರೀದಿಗೆ 2 ಸಾವಿರ ಕೋಟಿ ಒಳ ಒಪ್ಪಂದ

Social Share

ಮುಂಬೈ,ಫೆ.19- ಶಿವಸೇನೆ ಪಕ್ಷದ ಚಿನ್ಹೆಯಾದ ಬಿಲ್ಲು ಮತ್ತು ಬಾಣ ಹೆಗ್ಗುರತನ್ನು ಖರೀದಿಸಲು ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ಒಳ ಒಪ್ಪಂದ ನಡೆದಿದೆ ಎಂದು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಗಂಭೀರ ಆರೋಪ ಮಾಡಿದ್ದಾರೆ.

ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಬಣದ ನಾಯಕರೂ ಆಗಿರುವ ಸಂಜಯ್ ರಾವುತ್‍ರ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣದ ಶಾಸಕ ಸದಾ ಸರ್ವಂಕರ್ ತಳ್ಳಿ ಹಾಕಿದ್ದಾರೆ. ಅಷ್ಟು ದೊಡ್ಡ ಮೊತ್ತದ ಹಣಕ್ಕೆ ಸಂಜಯ್ ರಾವುತ್ ಕ್ಯಾಷಿಯರ್? ಆಗಿದ್ದರೆ ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್ ಮಾಡಿರುವ ಸಂಜಯ್ ರಾವತ್, 2,000 ಕೋಟಿ ರೂ.ಗಳು ಪ್ರಾಥಮಿಕ ಅಂಕಿ ಅಂಶವಾಗಿದೆ. ಇದು ಶೇ.100 ರಷ್ಟು ಸತ್ಯ ಎಂದಿದ್ದಾರೆ. ಮುಂದುವರೆದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರಕ್ಕೆ ಹತ್ತಿರವಿರುವ ಬಿಲ್ಡರ್ ಒಬ್ಬರು ಈ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಈ ಕುರಿತು ತಮ್ಮ ಬಳಿ ಪುರಾವೆಗಳಿವೆ, ಶೀಘ್ರದಲ್ಲೇ ಅವುಗಳನ್ನು ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.

IAS vs IPS : ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಗಂಭೀರ ಆರೋಪ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನಿನ್ನೆ ವಾಗ್ದಾಳಿ ನಡೆಸಿದರು. ಉದ್ಧವ್ ಠಾಕ್ರೆ ಶಿವಸೇನೆಗೆ ವಿರುದ್ಧವಾದ ಸಿದ್ಧಾಂತ ಹೊಂದಿರುವ ಪಕ್ಷಗಳ ತಳಭಾಗವನ್ನು ನೆಕ್ಕುತ್ತಾರೆ ಎಂದು ಕಿಡಿಕಾರಿದ್ದರು.

ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರಾವತ್, ಈಗಿನ ಮುಖ್ಯಮಂತ್ರಿ ಏನನ್ನು ನೆಕ್ಕುತ್ತಿದ್ದಾರೆ? ಮಹಾರಾಷ್ಟ್ರ ರಾಜ್ಯ ಅಮಿತ್ ಶಾ ಹೇಳುವುದಕ್ಕೆ ಮಹತ್ವ ನೀಡುವುದಿಲ್ಲ. ಪ್ರಸ್ತುತ ಮುಖ್ಯಮಂತ್ರಿಗೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ತೆಗೆದುಕೊಳ್ಳುವ ನೀತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಮೊದಲು ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ಚಾಲ್ತಿಯಲ್ಲಿತ್ತು. 2019 ರ ವಿಧಾನಸಭಾ ಚುನಾವಣೆ ಬಳಿಕ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದು, ಭಾರತೀಯ ಜನತಾ ಪಕ್ಷದೊಂದಿಗಿನ ಮೈತ್ರಿಯನ್ನು ಕಡಿದುಕೊಂಡು ಕಾಂಗ್ರೆಸ್, ಎನ್‍ಸಿಪಿ ಸೇರಿ ಇತರ ಜಾತ್ಯತೀತ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿತ್ತು, ಮಹಾವಿಕಾಸ ಅಘಾಡಿ ಸರ್ಕಾರವನ್ನು ರಚಿಸಿತ್ತು.

ಸಂಪುಟದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂಧೆ ಕಳೆದ ವರ್ಷ ರಾಜ್ಯಸಭೆ ಚುನಾವಣೆಯ ವೇಳೆ ಬಂಡಾಯ ಸಾರಿದರು. ಅವರೊಂದಿಗೆ 40ಕ್ಕೂ ಹೆಚ್ಚು ಶಿವಸೇನೆಯ ಶಾಸಕರು ಅಸ್ಸಾಂನಲ್ಲಿ ರೆಸಾರ್ಟ್ ವಾಸ ಮಾಡಿದ್ದರು. ಈ ಮೂಲಕ ಮಹಾವಿಕಾಸ ಅಘಾಡಿ ಸರ್ಕಾರ ಪತನವಾಯಿತು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಏಕನಾಥ್ ಸಿಂಧೆ ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿಯಾದರು.

ಪಾಕಿಸ್ತಾನ ದಿವಾಳಿಯಾಗಿದೆ : ಒಪ್ಪಿಕೊಂಡ ರಕಣಾ ಸಚಿವ

ಈಗ ಶಿವಸೇನೆ ಪಕ್ಷದ ಶೀರ್ಷಿಕೆ ಮತ್ತು ಚಿನ್ಹೆ ಕುರಿತ ವಿವಾದವನ್ನು ಸುದೀರ್ಘ ವಿಚಾರಣೆ ನಡೆಸಿದ ಚುನಾವಣಾ ಆಯೋಗವು ಶುಕ್ರವಾರ ತೀರ್ಪು ಪ್ರಕಟಿಸಿದ್ದು, ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ಗುರುತಿಸಿದೆ. ಬಿಲ್ಲು ಮತ್ತು ಬಾಣದ ಚುನಾವಣಾ ಚಿಹ್ನೆಯನ್ನು ಶಿಂಧೆ ಬಣಕ್ಕೆ ಉಳಿಸಿದೆ. ಆಯೋಗ ತನ್ನ 78 ಪುಟಗಳ ಆದೇಶದಲ್ಲಿ, ಉದ್ಧವ್ ಠಾಕ್ರೆ ಬಣವು ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಉಪಚುನಾವಣೆ ಪೂರ್ಣಗೊಳ್ಳುವವರೆಗೆ ಈಗಾಗಲೇ ನೀಡಿರುವ ಟಾರ್ಚ್ ಅನ್ನು ಬಳಸಿಕೊಳ್ಳಲು ಅವಕಾಶ ನೀಡಿದೆ.

Rs 2000 crore, deal, purchase, Shiv Sena, name, ,symbol, claims, Sanjay Raut,

Articles You Might Like

Share This Article