ನವದೆಹಲಿ,ಜ.6- ಕಳೆದ ನವೆಂಬರ್‍ನಲ್ಲಿ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಕರ್ನಲ್ ಮತ್ತು ಅವರ ಕುಟುಂಬವನ್ನು ಹತ್ಯೆ ಮಾಡಿದ ಬಂಡುಕೋರರ ಬಗ್ಗೆ ಪ್ರಮುಖ ಸುಳಿವು ಅಥವಾ ಮಾಹಿತಿ ನೀಡುವವರಿಗೆ 4 ರಿಂದ 8 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐವಿ) ಘೋಷಿಸಿದೆ.
2021ರ ನವೆಂಬರ್ 13ರಂದು ನಡೆದಿದ್ದ ಈ ದಾಳಿಯಲ್ಲಿ ಪಾಲ್ಗೊಂಡಿದ್ದರೆನ್ನಲಾದ ಹತ್ತು ಬಂಡುಕೋರರು ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಮತ್ತು ಮಣಿಪುರ ನಾಗಾ ಪೀಪಲ್ಸ್ ಫ್ರಂಟ್(ಎಂಎನ್‍ಪಿಎಫ್)ಗೆ ಸೇರಿದವರಾಗಿದ್ದಾರೆ.
ಘಟನೆಗೆ ಸಂಬಂಸಿದಂತೆ ಸ್ವಯಂ ಘೋಷಿತ ಲೆಫ್ಟಿನೆಂಟ್ ಕರ್ನಲ್ ಚಾವೋಯಾಯಿ ಮತ್ತು ಲೆಫ್ಟಿನಂಟ್ ಕರ್ನಲ್ ಸಾಗೋಲ್ಸೆಂ ಇನಾವೊಚ ಬೇಕಾಗಿದ್ದಾರೆ ಎಂದು ಎನ್‍ಐಎ ತಿಳಿಸಿದೆ.
