ಮುಂಬೈ.ಜ.27- ನಕಲಿ ನೋಟುಗಳ ಮುದ್ರಣ ಮತ್ತು ವಿತರಣೆಯಲ್ಲಿ ತೊಡಗಿದ್ದ ಅಂತಾರಾಜ್ಯ ತಂಡವನ್ನು ಭೇದಿಸಿದ ಮುಂಬೈ ಪೊಲೀಸರು ಏಳು ಜನರನ್ನು ಬಂಧಿಸಿ 7 ಕೋಟಿ ಮುಖ ಬೆಲೆಯ ನಕಲಿ ಭಾರತೀಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಿರ್ದಿಷ್ಟ ಮಾಹಿತಿಯ ಮೇರೆಗೆ ಮುಂಬೈ ಅಪರಾಧ ವಿಭಾಗದ ಘಟಕ ಪೋಲೀಸರ ತಂಡ ಉಪನಗರದ ದಹಿಸರ್ ಚೆಕ್ ಪೋಸ್ಟ್‍ನಲ್ಲಿ ಕಾರನ್ನು ತಡೆದು ಪರಿಶಿಲಿಸಿದಾಗ ದಂಧೇ ಬೆಳಕಿಗೆ ಬಂದಿದೆ.
ಕಾರಿನ್ನು ಪರಿಶಿಲಿಸಿದಾಗ 5 ಕೋಟಿ ಮುಖಬೆಲೆಯ 2,000 ಮುಖಬೆಲೆಯ 250 ಕಟ್ಟುಗಳ ನಕಲಿ ನೋಟುಗಳನ್ನು ತುಂಬಿದ್ದ ಚೀಲವನ್ನು ಪತ್ತೆ ಯಾಗಿದೆ. ನಾಲ್ವರಣ್ನು ವಿಚಾರಣೆಗೆ ಒಳಪಡಿಸಿದಾಗ ಅವರ ಇನ್ನೂ ಮೂವರು ಸಹಾಯಕರ ಬಗ್ಗೆಮಾಹಿತಿ ಸಿಕಿದ್ದು ಅದರಂತೆ, ಪೊಲೀಸ್ ತಂಡವು ಅಂಧೇರಿ ಹೋಟೆಲ್‍ನಲ್ಲಿ ದಾಳಿ ನಡೆಸಿ 2 ಕೋಟಿ ನಕಲಿ ನೋಟುಗಳು ಸಿಕ್ಕಿವೆ ಇಲ್ಲಿ ಮೂವರನ್ನು ಬಂಸಿದೆ ಎಂದು ಅಕಾರಿ ತಿಳಿಸಿದ್ದಾರೆ.
ನಕಲಿ ನೋಟುಗಳ ಜೊತೆಗೆ ಒಂದು ಲ್ಯಾಪ್‍ಟಾಪï, ಏಳು ಮೊಬೈಲ್ ಫೋನ್ 28,170 ನಗದು ಹಣ ಆಧಾರ ಮತ್ತು ಪ್ಯಾನ್ ಕಾರ್ಡ್ ಮತ್ತು ಚಾಲನಾ ಪರವಾನಗಿ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
