903 ಕೋಟಿ ರೂ.ವಂಚನೆ : ಚೀನಿ, ತೈವಾನ್ ಪ್ರಜೆ ಸೇರಿದಂತೆ 10 ಮಂದಿ ಸೆರೆ

Social Share

ಹೈದರಾಬಾದ್,ಅ.13- ಮತ್ತೊಂದು ಚೀನಾ ಆನ್‍ಲೈನ್ ಹೂಡಿಕೆ ವಂಚನೆ ಬಯಲಾಗಿದೆ. ಭಾರತ, ಚೀನಾ, ತೈವಾನ್, ಕಾಂಬೋಡಿಯಾ ಮತ್ತು ಯುಎಇಯಲ್ಲಿ ಚೀನಾ ಆಪ್ ಮೂಲಕ 903 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಬೇಧಿಸಿರುವ ಹೈದರಾಬಾದ್ ಪೊಲೀಸರು ಹತ್ತು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚೀನಾ ಮೂಲದ ಲಿ ಜಾಂಗ್‍ಜುನ್ ಹಾಗೂ ತೈವಾನ್ ಪ್ರಜೆ ಚು ಚುನ್ ಯೂ ಪ್ರಕರಣದ ಪ್ರಮುಖ ರೂವಾರಿಗಳೆಂದು ಗುರುತಿಸಲಾಗಿದೆ. ಈ ವಂಚಕರಿಂದ ದೇಶದಾದ್ಯಂತ ಲಕ್ಷಗಟ್ಟಲೆ ಹೂಡಿಕೆದಾರರು ವಂಚನೆಗೆ ಒಳಗಾಗಿರಬಹುದು ಎಂದು ನಾವು ಅನುಮಾನಿಸುತ್ತೇವೆ. ದೆಹಲಿಯಲ್ಲಿಯೇ 10,000 ಕೋಟಿ ರೂ.ವಂಚನೆ ನಡೆದಿರಬಹುದು ಎಂದು ಪೊಲೀಸ್ ಆಯುಕ್ತ ಸಿವಿ ಆನಂದ್ ತಿಳಿಸಿದ್ದಾರೆ.

ಜುಲೈನಲ್ಲಿ ಹೈದರಾಬಾದ್ ನಿವಾಸಿಯೊಬ್ಬರು ಲೋಕ್ಸಮ್ ಎಂಬ ಇನ್ವೆಸ್ಟ್‍ಮೆಂಟ್ ಆ್ಯಪ್‍ನಲ್ಲಿ 1.6 ಲಕ್ಷ ಹೂಡಿಕೆ ಮಾಡಿದ್ದೆ ಅದರೆ, ನನಗೆ ವಂಚನೆಯಾಗಿದೆ ಎಂದು ದೂರು ನೀಡಿದ್ದರು. ಈ ದೂರನ್ನಾಧರಿಸಿ ಕಾರ್ಯಚರಣೆ ನಡೆಸಿ ವಂಚಕರನ್ನು ಬಂಧಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಕ್ಸಿಂಡೈ ಟೆಕ್ನಾಲಜೀಸ್ ಸಂಸ್ಥೆ ಮೂಲಕ 38 ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿ ಅಂತಿಮವಾಗಿ ಅಧಿಕೃತ ಹಣ ಬದಲಾವಣೆ ಸಂಸ್ಥೆಗಳಾದ ರಂಜನ್ ಮನಿ ಕಾರ್ಪ್ ಮತ್ತು ನವೀನ್ ಕೌಶಿಕ್ ಮಾಲೀಕತ್ವದ ಕೆಡಿಎಸ್ ಫಾರೆ ಪ್ರೈವೇಟ್ ಲಿಮಿಟೆಡ್‍ಗೆ ಬಂದಿತು. ಅವರು ಹಣವನ್ನು ವಿದೇಶೀ ವಿನಿಮಯ ಕೇಂದ್ರಗಳಿಗೆ ಕಳುಹಿಸಿದರು,

ರೂಪಾಯಿಗಳನ್ನು ಡಾಲರ್‍ಗೆ ಪರಿವರ್ತಿಸಿದರು ಮತ್ತು ಅವುಗಳನ್ನು ಇತರ ಇಬ್ಬರಿಗೆ ಹಸ್ತಾಂತರಿಸುವ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ಹವಾಲಾ ಮೂಲಕ ವಿದೇಶಗಳಿಗೆ ಸಾಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇವಲ ಏಳು ತಿಂಗಳಲ್ಲಿ ರಂಜನ್ ಮನಿ ಕಾರ್ಪ್ 441 ಕೋಟಿ ಹಾಗೂ ಕೆಡಿಎಸ್ ಫಾರೆಕ್ಸ ಸಂಸ್ಥೆ 38 ದಿನಗಳಲ್ಲಿ 462 ಕೋಟಿ ವಹಿವಾಟು ನಡೆಸಿದೆ ಎಂದು ಅವರು ಹೇಳಿದ್ದಾರೆ.

Articles You Might Like

Share This Article