ಸಮಲ್ಖಾ ,ಮಾ.12- ಹರ್ಯಾಣದ ಸಮಲ್ಖಾದಲ್ಲಿ ಇಂದಿನಿಂದ ಆರಂಭವಾದ ಆರ್‍ಎಸ್‍ಎಸ್‍ನ ವಾರ್ಷಿಕ ಮಹಾಸಭೆಯಲ್ಲಿ ಸಮಾಜವಾದಿ ಪಕ್ಷದ (ಎಸ್‍ಪಿ) ದಿವಂಗತ ನಾಯಕ ಮುಲಾಯಂ ಸಿಂಗ್ ಯಾದವ್, ಸಮಾಜವಾದಿ ನಾಯಕ ಶರದ್ ಯಾದವ್ ಮತ್ತು ಹಿರಿಯ ವಕೀಲ ಶಾಂತಿ ಭೂಷಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಮೂರು ದಿನಗಳ ವಾರ್ಷಿಕ ಮಹಾಸಭೆಯ ಆರಂಭದಲ್ಲಿ ಕಳೆದ ಒಂದು ವರ್ಷದಲ್ಲಿ ನಿಧನರಾದ ರಾಜಕೀಯ ನಾಯಕರು ಮತ್ತು ಹೆಸರಾಂತ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.
ರಾಜ್ಯದ ಮತದಾರರಿಗೆ ನ್ಯಾ.ಸಂತೋಷ್ ಹೆಗ್ಡೆ ಸಂದೇಶ : ವಿಶೇರ್ಷ ಸಂದರ್ಶನ
ಆ ಪಟ್ಟಿಯಲ್ಲಿ ಮುಲಾಯಂ ಸಿಂಗ್ ಯಾದವ್, ಶರದ್ ಯಾದವ್ ಮತ್ತು ಭೂಷಣ್ ಸೇರಿದಂತೆ 100 ಕ್ಕೂ ಹೆಚ್ಚು ಹೆಸರುಗಳಿವೆ. ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್, ಇತ್ತೀಚೆಗಷ್ಟೆ ನಿಧನರಾದ ನಟ-ಚಿತ್ರ ನಿರ್ಮಾಪಕ ಸತೀಶ್ ಕೌಶಿಕ್ ಅವರ ಹೆಸರೂ ಇವೆ.
ಆರ್‍ಎಸ್‍ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಒಂದು ವರ್ಷದಲ್ಲಿ ನಿಧನರಾದ ಎಲ್ಲ ಪ್ರಮುಖರ ಹೆಸರಗಳನ್ನು ಓದಿದರು. ಆರ್‍ಎಸ್‍ಎಸ್ ಪ್ರತಿವರ್ಷ ತನ್ನ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದು, 2020ಕ್ಕಿಂತಲೂ ಪ್ರಸಕ್ತ ಸಾಲಿಗೆ ಶೇ.32ರಷ್ಟು ವಾರದ ಸಭೆಗಳನ್ನು ಹೆಚ್ಚಿಸಲಾಗಿದೆ. ಅದೇ ರೀತಿ ಶಾಖೆಗಳಲ್ಲೂ ಗಣನೀಯ ಏರಿಕೆ ಕಂಡಿದೆ ಎಂದು ಸಂಘಟನೆಯ ಜಂಟಿ ಕಾರ್ಯದರ್ಶಿ ಡಾ.ಮನ್‍ಮೋಹನ್ ವಿದ್ಯಾ ತಿಳಿಸಿದ್ದಾರೆ.
ದೇಶದ 42,613 ಸ್ಥಳಗಳಲ್ಲಿ 68,651 ದೈನಂದಿನ ಶಾಖೆಗಳು ನಡೆಯುತ್ತಿವೆ. 26,877 ವಾರದ ಸಭೆಗಳು ಆಯೋಜನೆಗೊಳ್ಳುತ್ತಿವೆ. 10,412 ಸಂಘ ಮಂಡಳಿಗಳಿವೆ.
ಅಕ್ರಮ ಸಿಲಿಂಡರ್ ದಾಸ್ತಾನು- ರೀಫಿಲ್ಲಿಂಗ್ ಮಾಡುತ್ತಿದ್ದ ಮನೆಮೇಲೆ ಸಿಸಿಬಿ ದಾಳಿ
2020ರಿಂದಿಚೆಗೇ 6,160 ಶಾಖೆಗಳು ಹೆಚ್ಚಾಗಿದ್ದು, ವಾರದ ಸಭೆಗಳ ಸಂಖ್ಯೆ 6,543 ಹೆಚ್ಚಾಗಿವೆ. ಸಂಘ ಮಂಡಳಿಗಳು ಶೇ.20ರಷ್ಟು ಹೆಚ್ಚಾಗಿದ್ದು, ಒಟ್ಟು 71,355 ಸ್ಥಳಗಳಲ್ಲಿ ಕೆಲಸ ಮಾಡುತ್ತಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.
RSS, annual, meeting, commences, Haryana,