ಚಿನ್ನದ ಇಂಕ್‍ನಲ್ಲಿ ಬರೆದ ಕುರಾನ್ ಹಸ್ತಪ್ರತಿ ಲಭ್ಯ

Social Share

ನಾಗ್ಪುರ,ಜ.4- ಚಿನ್ನದ ಇಂಕ್‍ನಲ್ಲಿ ಬರೆಯಲಾಗಿರುವ ಪವಿತ್ರ ಕುರಾನ್‍ನ ಹಸ್ತ ಪ್ರತಿ ಸೇರಿದಂತೆ ಹಲವಾರು ಅಮೂಲ್ಯ ಜ್ಞಾನ ಸಂಪತ್ತು ಒಳಗೊಂಡ ದಸ್ತಾವೇಜುಗಳನ್ನು ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ (ಐಎಸ್‍ಸಿ) ಸಮಾವೇಶದಲ್ಲಿ ಪ್ರದರ್ಶನಕ್ಕಿಟ್ಟಿದೆ.

ಸಂಘ ಪರಿವಾರದ ಭಾಗವಾಗಿರುವ ಭಾರತೀಯ ಶಿಕ್ಷಣ ಮಂಡಲ್ ಬೆಂಬಲಿತ ನಾಗ್ಪುರದ ರಿಸರ್ಚ್ ಫಾರ್ ರಿಸುರ್ಜೆನ್ಸ್ ಫೌಂಡೇಷನ್ (ಆರ್‍ಎಫ್‍ಆರ್‍ಎಫ್) ಸ್ಥಾಪಿಸಿರುವ ಸ್ಟಾಲ್‍ನಲ್ಲಿ ಪುರಾತನವಾದ ಈ ಪ್ರತಿ ವಿಕ್ಷಣೆಗೆ ಲಭ್ಯವಿದೆ.

ಚಿನ್ನದ ಇಂಕ್‍ನಲ್ಲಿ ಬರೆಯಲಾಗಿರುವ ಕುರಾನ್‍ನ ನಾಲ್ಕು ಪ್ರತಿಗಳು ಮಾತ್ರ ವಿಶ್ವದಲ್ಲಿ ಲಭ್ಯ ಇವೆ. ಅವುಗಳಲ್ಲಿ ಒಂದು ಪುನರುತ್ಥಾನಕ್ಕಾಗಿ ಸಂಶೋಧನಾ ಪ್ರತಿಷ್ಠಾನ (ಆರ್‍ಎಫ್‍ಆರ್‍ಎಫ್) ಸ್ವಾಮ್ಯದಲ್ಲಿದೆ ಎಂದು ಸಂಸ್ಥೆಯ ನಿರ್ದೇಶಕ ಭುಜಂಗ್ ಬೋಬಡೆ ತಿಳಿಸಿದ್ದಾರೆ.

385 ಪುಟಗಳ ಪವಿತ್ರ ಕುರಾನ್ ಅನ್ನು ಒಂದು ತಪ್ಪಿಲ್ಲದಂತೆ ನಸ್ತಾಲಿಕ್ ಲಿಪಿಯ ಸಣ್ಣ ಅಕ್ಷರಗಳಲ್ಲಿ ಚಿನ್ನದ ಮಸಿ ಬಳಸಿ ಬರೆಯಲಾಗಿದೆ. ನಸ್ತಾಲಿಕ್ ಮತ್ತು ಖುಫಿ ಲಿಪಿಗಳನ್ನು ಪರ್ಷಿಯನ್‍ನ್ನರು ಬಳಸುತ್ತಾರೆ. ನಸ್ತಾಲಿಕ್ ವಿಶ್ವದ ಉತ್ತಮ ಲಿಪಿ ಎಂದು ಪರಿಗಣಿಸಲ್ಪಟ್ಟಿದೆ. 16ನೇ ಶತಮಾನದಲ್ಲಿ ರಚನೆ ಮಾಡಲಾಗಿರುವ ಈ ಪುಸ್ತಕದಲ್ಲಿ ಒಂದು ಸಣ್ಣ ತಪ್ಪು ಇಲ್ಲ ಎಂಬುದು ವಿಶೇಷ ಎಂದು ಹೇಳಿದರು.

ಹೈದರಾಬಾದ್‍ನ ದಿವಾನರಾಗಿದ್ದ ನಿಜಾಮರ ಕುಟುಂಬಸ್ಥರು ಈ ಪುಸ್ತಕವನ್ನು ಪ್ರತಿಷ್ಠಾನಕ್ಕೆ ನೀಡಿದ್ದಾರೆ. ಇರಾನ್ ಅಧ್ಯಕ್ಷರು ಆರ್‍ಎಫ್‍ಆರ್‍ಎಫ್ ಕಚೇರಿಗೆ ಭೇಟಿ ನಿಡಿ ಈ ಪ್ರಸ್ತಕವನ್ನು ವಿಕ್ಷಿಸಿದರು ಎಂದು ಅವರು ತಿಳಿಸಿದರು.

ಸಿಂಗಾರಗೊಂಡ ಸಿಎಂ ತವರು ಜಿಲ್ಲೆ ಹಾವೇರಿ, ಅಕ್ಷರ ಜಾತ್ರೆಗೆ ಕ್ಷಣಗಣನೆ

ಪ್ರತಿಷ್ಠಾನ ಶಿಕ್ಷಣ ಕ್ಷೇತ್ರದ ಪುನರುತ್ಥಾನಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಅದರ ವೆಬ್‍ಸೈಟ್‍ನಲ್ಲಿ ಮಾಹಿತಿ ಇದೆ. ದೆಹಲಿಯಲ್ಲಿರುವ ರಾಷ್ಟ್ರೀಯ ಮಾನವಹಸ್ತಪ್ರತಿಗಳ ಪ್ರಾಧಿಕಾರದ ಪ್ರಧಾನ ಸಂಶೋಧಕರಾಗಿಯೂ ಕೆಲಸ ಮಾಡುತ್ತಿರುವ ಭುಜಂಗ್ ಬೋಬಡೆ, ಆರ್‍ಎಫ್‍ಆರ್‍ಎಫ್ ಸಂಗ್ರಹಾಲಯದಲ್ಲಿ ಭಾರತೀಯ ಪ್ರಾಚೀನ ಇತಿಹಾಸ, ಧರ್ಮ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ 15 ಸಾವಿರ ಹಸ್ತಪ್ರತಿಗಳು ಲಭ್ಯ ಇವೆ ಎಂದು ತಿಳಿಸಿದ್ದಾರೆ.

ವಿಶ್ವವೇ ತಿಳಿದಿರುವಂತೆ ಅಬು ಫಝಲ್ ಎಂಬ ಸಾಹಿತಿ 1577ರಲ್ಲಿ ಬರೆದಿರುವ ಅಕ್ಬರ್‍ನಾಮ ಪುಸ್ತಕವನ್ನು ಆರ್‍ಎಫ್‍ಆರ್‍ಎಫ್ ಹೊಂದಿದೆ. ಜೊತೆಗೆ 17ನೇ ಶತಮಾನದಲ್ಲಿ ಬರೆಯಲಾದ ಪರ್ಸಿಯನ್ ಭಾಷೆಯ ತೈಬ್-ಇ-ಅಕ್ಬರ್ ಪುಸ್ತಕವೂ ನಮ್ಮ ಬಂಡಾರದಲ್ಲಿದೆ. ಇದು ಜಗತ್ತಿಗೆ ಗೊತ್ತಿಲ್ಲ. ತಾಜ್ ಮಹಲ್‍ನ ಇತಿಹಾಸ ವಿವರಿಸುವ ತಾರಿಖ್-ಇ-ತಾಜ್ ಸಂಗ್ರಹವೂ ಇದೆ.

ಜಗತ್ತಿಗೆ ತಾಜ್ ಮಹಲ್ ಬಗ್ಗೆ ಗೋತ್ತು. ಆದರೆ ಮುಮ್ತಾಜ್ ಮಹಲ್ ನಿಧನದ ನಿಖರ ದಿನಾಂಕ ಮತ್ತು ಸಮಯದ ಬಗ್ಗೆ ಅರಿವಿಲ್ಲ. ತಾರಿಖ್-ಇ-ತಾಜ್ ಪ್ರಕಾರ ಮುಮ್ತಾಜ್ 1631ರ ಜೂನ್ 17ರಂದು ರಾತ್ರಿ 9.30ಕ್ಕೆ ಮೃತಪಟ್ಟರು. ಜೊತೆಗೆ ತಾಜ್ ಮಹಲ್ ಕಟ್ಟುವಾಗ ಕೆಲಸ ಮಾಡಿದವರ ವಿವರ, ತಾಜ್ ಮಹಲ್‍ಗೆ ಬಳಸಲಾಗಿರುವ ಕಲ್ಲುಗಳು ಮತ್ತು ಮಾರ್ಬಲ್‍ಗಳನ್ನು ಯಾವ ಸ್ಥಳದಿಂದ ತರಲಾಗಿತ್ತು ಎಂಬ ವಿವರಗಳು ಇವೆ.

9 ತಿಂಗಳ ಹಿಂದೆ ಯುವಕನ ಕೊಲೆ, ಚಾರ್ಮುಡಿ ಘಾಟ್‍ನಲ್ಲಿ ಶವಕ್ಕಾಗಿ ಹುಡುಕಾಟ

ಬೀಡ್ ಜಿಲ್ಲೆಯ ಮಂಜರಾತ್ ಗ್ರಾಮದಲ್ಲಿ ರಾಮಚಂದ್ರ ದಿಕ್ಷಿತ್‍ರವರು ಚತ್ರಪತಿ ಶಿವಾಜಿ ಮಹಾರಾಜ್‍ರಿಗಾಗಿ ಬರೆದ ಮೊದಲ ಹಸ್ತ ಪ್ರತಿ ಹಾಗೂ 17ನೇ ಶತಮಾನದಲ್ಲಿನ ಮಹಾರಾಜ್ ಶಿವಾಜಿಯ ಕೊನೆಯ ಪತ್ರದ ಮೂಲ ಪ್ರತಿಯೂ ನಮ್ಮ ಸಂಗ್ರಹಾಲಯದಲ್ಲಿದೆ.

ಸಾವಿರಾರು ವರ್ಷಗಳ ಹಿಂದೆ ಬರೆಯಲಾಗಿರುವ ಗರುಡಪುರಾಣ, ವಿಷ್ಣುಪುರಾಣದ ತಾಳೆ ಪ್ರತಿಗಳು. ಒಂದುವರೆ ಲಕ್ಷ ಹಸ್ತ ಪ್ರತಿಯ 5 ಕೋಟಿ ಪುಟಗಳನ್ನು ಸಂಸ್ಥೆ ಹೊಂದಿದೆ. ಇವುಗಳು ಸಂಶೋಧನೆಗೆ ಲಭ್ಯ ಇವೆ. 3441 ವಸ್ತು ಸಂಗ್ರಹಾಲಯದಿಂದ 25 ಲಕ್ಷ ಹಸ್ತಪ್ರತಿಗಳ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಯಾರದರೂ ಅಧ್ಯಯನ ನಡೆಸಲು ಬಯಸಿದರೆ ಅವುಗಳನ್ನು ನಾವು ಒದಗಿಸುತ್ತೇವೆ. ಕಳೆದ 16 ವರ್ಷಗಳಿಂದಲೂ ನಾವು ಪ್ರಾಚೀನ ಹಸ್ತಪ್ರತಿಗಳ ಸಂಗ್ರಹ ಮತ್ತು ಸಂರಕ್ಷಣಾ ಕಾರ್ಯ ನಡೆಸುತ್ತಿದ್ದೇವೆ ಎಂದು ಹೇಳಿದರು.

RSS, inspired, Body Displays, Gold Ink, Quran, Indian Science Congress,

Articles You Might Like

Share This Article