ದ್ವೇಷಭಾಷಣ ಖಂಡನಾರ್ಹ, ಶಿಕ್ಷಾರ್ಹ : ಇಂದ್ರೇಶ್‍ ಕುಮಾರ್

Social Share

ನವದೆಹಲಿ,ಫೆ.3- ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಧರ್ಮಸಂಸದ್‍ನಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷಭಾಷಣ ಮಾಡಿದರೆನ್ನಲಾದವರನ್ನು ಆರ್‌ಎಸ್‌ಎಸ್‌ ಹಿರಿಯ ಧುರೀಣ ಇಂದ್ರೇಶ್‍ಕುಮಾರ್ ಖಂಡಿಸಿದ್ದಾರೆ. ಈ ಬಗೆಯ ಪ್ರಚೋದನಕಾರಿ ಮತ್ತು ಒಡಕನ್ನುಂಟು ಮಾಡುವ ಭಾಷಣಗಳನ್ನು ಮಾಡುವವರನ್ನು ಯಾವುದೇ ನಿನಾಯಿತಿ, ಮುಲಾಜಿಲ್ಲದೆ ಶಿಕ್ಷಿಸಬೇಕು ಎಂದು ಅವರು ಹೇಳಿದ್ದಾರೆ.
ದ್ವೇಷ ರಾಜಕಾರಣ ಭ್ರಷ್ಟಾಚಾರಕ್ಕೆ ಸಮಾನ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನುಡಿದ ಅವರು ಎಲ್ಲಾ ರಾಜಕೀಯ ಪಕ್ಷಗಳು ಹಗೆತನ ಬೆಳೆಸುವ ಕಾರ್ಯನಿಲ್ಲಿಸಬೇಕು ಮತ್ತು ಸಮಾಜದ ಒಂದು ವರ್ಗವನ್ನು ಮತ್ತೊಂದರ ಮೇಲೆ ಎತ್ತಿಕಟ್ಟುವ ಕೆಲಸ ಬಿಡಬೇಕು ಎಂದು ಕರೆ ನೀಡಿದರು.
ಯಾವುದೇ ಸಮುದಾಯ, ಜಾತಿ ಅಥವಾ ಗುಂಪಿನ ವಿರುದ್ಧ ಪ್ರಚೋದನಕಾರಿ ಮತ್ತು ವಿಭಜಕ ಮಾತುಗಳನ್ನಾಡುವ ಬದಲು ಭ್ರಾತೃತ್ವ ಮತ್ತು ಅಭಿವೃದ್ಧಿಯ ರಾಜಕೀಯವನ್ನು ದೇಶದ ಮತ್ತು ಅದರ ಜನತೆಯ ಹಿತದೃಷ್ಟಿಯಿಂದ ಅಭ್ಯಾಸ ಮಾಡಬೇಕು ಎಂದು ಆರ್‍ಎಸ್‍ಎಸ್‍ನ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಸಲಹೆ ಮಾಡಿದರು.
ಉತ್ತರಾಖಂಡ್‍ನ ಹರಿದ್ವಾರ ಮತ್ತು ಛತ್ತೀಸ್‍ಗಢದ ರಾಜಧಾನಿ ರಾಯ್‍ಪುರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮಗಳಲ್ಲಿ ನಡೆಯಿತೆನ್ನಲಾದ ದ್ವೇಷಭಾಷಣ ಖಂಡನಾರ್ಹ ಎಂದು ಅವರು ನುಡಿದರು.

Articles You Might Like

Share This Article