RSS ದೇಶಭಕ್ತ ಸಂಘಟನೆ : ಸಿದ್ದುಗೆ ಸಿ.ಟಿ.ರವಿ ಗುದ್ದು

Social Share

ಹಾಸನ.ಸೆ.29- ಆರ್‌ಎಸ್‌ಎಸ್‌ ಒಂದು ದೇಶ ಭಕ್ತ ಸಂಘಟನೆಯಾಗಿದೆ. ಭಾರತ ಭಾರತವಾಗಿ ಉಳಿಯಬೇಕೆಂದು ಬಯಸುತ್ತದೆ. ಆದರೆ, ದೇಶ ಭಕ್ತನ ಜೊತೆ ದೇಶ ದ್ರೋಹಿಗಳಿಗೆ ಓಲಿಸೋದು ಅಕ್ಷಮ್ಯ ಅಪರಾಧ. ತಲೆ ಸರಿ ಇದ್ದವರು ಹೋಲಿಕೆ ಮಾಡುತ್ತಾರೆಯೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಬೇಲೂರು ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತವನ್ನು ಮೊಘಲ್ ಇಸ್ಲಾಮ್ ಮಾಡಿ ಹಿಂದುಗಳನ್ನೆಲ್ಲ ಸರ್ವನಾಶ ಮಾಡಬೇಕೆಂದು ಬಯಸೋದು ಪಿಎಫ್‌ಐ ಎಂದು ಎಲ್ಲರಿಗೂ ಗೊತ್ತು. ಆದರೆ, ಆರ್‍ಎಸ್‍ಎಸ್ ಅನ್ನು ಅದಕ್ಕೆ ಹೋಲಿಕೆ ಮಾಡುವವರಿಗೆ ಏನು ಹೇಳಬೇಕು ? ಆರ್‍ಎಸ್‍ಎಸ್ ಬೈದರೆ ವೋಟು ಸಿಗುತ್ತೆ ಅನ್ನುವ ದುರಾಸೆ ಇರಬೇಕು ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.

ಪಿಫ್‍ಐ ಕೂಡ ಆರ್‍ಎಸ್‍ಎಸ್ ಟಾರ್ಗೆಟ್ ಮಾಡುತ್ತದೆ, ಅದೇ ರೀತಿ ಕಾಂಗ್ರೆಸ್‍ನವರು ಆರ್‍ಎಸ್‍ಎಸ್ ಅನೇ ಟಾರ್ಗೆಟ್ ಮಾಡುತ್ತಿದ್ದಾರೆ. ಹಾಗದರೆ ಇವರಿಬ್ಬರಿಗು ಒಳ ಹೊಂದಾಣಿಕೆ ಇರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಮೊಘಲ್ ಸ್ತಾನ್ ಮಾಡಲು ನೀವು ನಮಗೆ ಸಹಾಯ ಮಾಡಿ, ನಿಮಗೆ ನಾವು ವೋಟು ಹಾಕ್ತಿವಿ ಅಂತ ಒಳಒಪ್ಪಂದ ಮಾಡಿಕೊಂಡಿದ್ದಾರೆ. ದುರಾಸೆಗೆ ಭಾರತ ವಿಭಜನೆ ಮಾಡೋ ಕೆಲಸ ಮಾಡಲಾಗುತಿದೆ ಎಂಬ ಅನುಮಾನ ಮೂಡುತ್ತಿದೆ ಎಂದರು.

ಇನ್ನೊಂದು ವಿಭಜನೆಗೆ ತಡೆಗೋಡೆ ಆಗಿರುವುದು ಆರ್‍ಎಸ್‍ಎಸ್ ಮುಗಿಸಿದ್ರೆ ಅವರು ಮೊಘಲ್ ಸ್ತಾನ್ ಮಾಡೋದು ಬಹಳ ಸುಲಭ. ಇದಕ್ಕೆ ಸಿದ್ದರಾಮಯ್ಯನವರೇ ನೀವು ರೆಡಿನಾ ಎಂದು ಪ್ರಶ್ನಿಸಿದರು. ದಸರಾ ನಡೆಯುತ್ತಿದೆ ದುರ್ಗ ತಾಯಿ ವರವನ್ನು ಕೊಡ್ತಾಳೆ. ಹಾಗೇಯೆ ದುಷ್ಟ ನಿಗ್ರಹಿಸುವಂತ ದುರ್ಗೆಯು ಹೌದು. ಆಕೆಯ ಬಳಿ ಶಸ್ತ್ರವೂ ಇದೆ. ಶಾಸ್ತ್ರವೂ ಇದೆ. ಯಾರೂ ಶಾಸ್ತ್ರದ ಮೂಲಕ ಸಂಧಾನಕ್ಕೆ ಬರ್ತಾರೆ, ಯಾರೂ ಶಸ್ತ್ರದ ಮೂಲಕ ಬರ್ತಾರೆ ಅವರ ಸಂಹಾರ ಎಂದು ಹೇಳಿದರು.

Articles You Might Like

Share This Article