ತಮಿಳುನಾಡಿನಲ್ಲಿ ನಾಳೆ ನಡೆಯಬೇಕಿದ್ದ RSS ಪಥಸಂಚಲನ ಮುಂದೂಡಿಕೆ

Social Share

ಚೆನ್ನೈ,ನ.5- ಹೈಕೋರ್ಟ್‍ನಿಂದ ವಿಸಲಾದ ಹಲವು ರೀತಿಯ ಷರತ್ತುಗಳ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಪಥ ಸಂಚಲನವನ್ನು ಕೈಬಿಟ್ಟಿರುವುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಿಳಿಸಿದೆ.
ಮದ್ರಾಸ್ ಹೈಕೋರ್ಟ್ ಆರ್‍ಎಸ್‍ಎಸ್ ಪಥ ಸಂಚಲನ ಕುರಿತು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ ನಿನ್ನೆ ತೀರ್ಪು ನೀಡಿದೆ.

ಪಥಸಂಚಲನ ಒಳಾಂಗಣ ಕ್ರೀಡಾಂಗಣದಲ್ಲಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ. ಇದು ಸ್ವೀಕಾರ್ಹವಲ್ಲ. ಹೀಗಾಗಿ ನಾವು ಪಥಸಂಚಲನವನ್ನು ಕೈಬಿಟ್ಟಿದ್ದೇವೆ ಎಂದು ಆರ್‍ಎಸ್‍ಎಸ್ ದಕ್ಷಿಣ ವಲಯ ಪ್ರಮುಖರಾದ ಆರ್.ವಾಣಿರಾಜನ್ ತಿಳಿಸಿದ್ದಾರೆ.

ಕೇರಳ, ಪಶ್ಚಿಮ ಬಂಗಾಳ, ಜಮ್ಮುಕಾಶ್ಮೀರದಂತಹ ರಾಜ್ಯಗಳಲ್ಲೇ ಮುಕ್ತವಾಗಿ ಸಂಘಪರಿವಾರದ ಪಥಸಂಚಲನ ನಡೆಯುತ್ತಿದೆ. ಆದರೆ ತಮಿಳುನಾಡಿನಲ್ಲಿ ಅದಕ್ಕೆ ಷರತ್ತು ವಿಧಿಸಲಾಗುತ್ತಿದೆ.

ಕರಾವಳಿ ಭಾಗದಲ್ಲಿ ಹಂದಿಜ್ವರ ಹಾವಳಿ, ಎಚ್ಛೆತ್ತುಕೊಂಡ ಜಿಲ್ಲಾಡಳಿತ

ಹೈಕೋರ್ಟ್ ಆದೇಶವನ್ನು ನಾವು ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನೆ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ಪಥಸಂಚಲನ ಹಾಗೂ ಬಹಿರಂಗ ಸಭೆಗಳನ್ನು ಮುಂದೂಡುವುದಾಗಿ ತಿಳಿಸಿದರು.

Articles You Might Like

Share This Article