ಕನಕಪುರ : ತಲೆ ಮೇಲೆ ಕಲ್ಲು ಹಾಕಿ RTI ಕಾರ್ಯಕರ್ತನ ಭೀಕರ ಕೊಲೆ

Social Share

ಕನಕಪುರ,ಡಿ.23- ನರೇಗಾ ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯ್ತಿಗೆ ದೂರು ನೀಡಿದ್ದ ಆರ್‍ಟಿಐ ಕಾರ್ಯಕರ್ತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಲಸಿನಮರದೊಡ್ಡಿ ನಿವಾಸಿ ಮೂರ್ತಿ(27) ಕೊಲೆಯಾಗಿರುವ ಆರ್‍ಟಿಐ ಕಾರ್ಯಕರ್ತ. ಈ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ನರೇಗಾ ಕಾಮಗಾರಿಯಲ್ಲಿ ಅಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯ್ತಿಗೆ ಮೂರ್ತಿ ದೂರು ನೀಡಿದ್ದರು.

ದೂರಿನನ್ವಯ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಕಾಮಗಾರಿ ಪರಿಶೀಲನೆಗೆ ಬಂದಾಗ ಸ್ಥಳೀಯ ನಿವಾಸಿ ಚಂದನ್ ಇತರರೊಂದಿಗೆ ಸೇರಿಕೊಂಡು ಮೂರ್ತಿ ಮೇಲೆ ಹಲ್ಲೆ ನಡೆಸಿ ಗಲಾಟೆ ಮಾಡಿದ್ದರು. ಆ ಸಂದರ್ಭದಲ್ಲಿ ಮೂರ್ತಿ ಹಾಗೂ ಚಂದನ್‍ನನ್ನು ಠಾಣೆಗೆ ಕರೆಸಿ ರಾಜಿ ಪಂಚಾಯ್ತಿ ಮಾಡಿ ಬುದ್ದಿವಾದ ಹೇಳಿ ಕಳುಹಿಸಿದ್ದರು. ಆದರೆ ಚಂದನ್ ಇಷ್ಟಕ್ಕೆ ಸುಮ್ಮನಾಗದೆ ಮೂರ್ತಿ ಮೇಲೆ ದ್ವೇಷ ಸಾಧಿಸುತ್ತಿದ್ದನು.

ನಿನ್ನೆ ಸಂಜೆ 6.30ರ ಸುಮಾರಿನಲ್ಲಿ ಮೂರ್ತಿ ತಮ್ಮ ರಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಂದನ್ ಹಾಗೂ ತನ್ನ ಕುಟುಂಬದ ಇಬ್ಬರು ಸದಸ್ಯರು ಸೇರಿದಂತೆ ಗ್ರಾಮದ ಇನ್ನು ಹಲವರೊಂದಿಗೆ ಗುಂಪುಗೂಡಿಕೊಂಡು ರಾಗಿ ಹೊಲಕ್ಕೆ ನುಗ್ಗಿ ಹೊಲವನ್ನು ಧ್ವಂಸ ಮಾಡಿ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಗೋಮಾಂಸ ರಫ್ತು ಮಾಡುವ ಕಂಪನಿಗಳನ್ನೂ ನಿಷೇಧಿಸಲಿ : ನಸೀರ್ ಅಹ್ಮದ್

ಮೂರ್ತಿ ಅವರಿಂದ ತಪ್ಪಿಸಿಕೊಳ್ಳಲು ಓಡಿದರೂ ಬಿಡದೆ ಅಟ್ಟಾಡಿಸಿಕೊಂಡು ಹೋಗಿದ್ದು ಕುರುಬಳ್ಳಿದೊಡ್ಡಿ ಬಳಿ ಮೂರ್ತಿ ಸುಸ್ತಾಗಿ ಕೆಳಗೆ ಬಿದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಗ್ರಾಮಕ್ಕೆ ಹಿಂದಿರುಗಿದ್ದಾರೆ.

ಮೂರ್ತಿ ಸತ್ತಿರುವುದಿಲ್ಲ. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಮ್ಮ ಮೇಲೆ ಪೊಲೀಸರಿಗೆ ದೂರು ನೀಡುತ್ತಾನೆಂದು ಹೆದರಿ ಆತನಿಗಿಂತ ಮುಂಚೆ ನಾವೇ ಮೊದಲು ಪೆÇಲೀಸ್ ಠಾಣೆಗೆ ದೂರು ಕೊಡೋಣ ಎಂದು ಚಂದನ್ ರಾತ್ರಿ 8 ಗಂಟೆ ಸುಮಾರಿಗೆ ಠಾಣೆಗೆ ಹೋಗಿ ನಮ್ಮ ಕುಟುಂಬದವರಿಗೆ ಮೂರ್ತಿಯಿಂದ ಜೀವ ಬೆದರಿಕೆ ಇದೆ ಎಂದು ದೂರು ಕೊಟ್ಟಿದ್ದಾನೆ.

ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲು ಫೀಲ್ಡಿಗಿಳಿದ ಬಿಬಿಎಂಪಿ ಮಾರ್ಷಲ್‍ಗಳು

ಅಷ್ಟರಲ್ಲಾಗಲೇ ಪೊಲೀಸರಿಗೆ ಮೂರ್ತಿ ಕೊಲೆಯಾಗಿರುವ ವಿಷಯ ಗೊತ್ತಾಗಿತ್ತು. ಠಾಣೆಗೆ ಹೋಗಿ ತಾನೇ ಸಿಕ್ಕಿ ಹಾಕಿಕೊಂಡ ಚಂದನ್ ಅಲಿಯಾಸ್ ಕರಿಯನನ್ನು ಠಾಣೆಯಲ್ಲೇ ಕೂರಿಸಿ ನಂತರ ಆತನ ಕುಟುಂಬದ ಇಬ್ಬರು ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RTI activist, murder, Kanakapura,

Articles You Might Like

Share This Article