ನವದೆಹಲಿ,ಜು.15- ಜಾಗತಿಕ ಮಾರು ಕಟ್ಟೆಗಳ ಏರಿಳಿತದಿಂದಾಗಿ 80ರೂ. ಗಡಿಗೆ ತಲುಪಿದ್ದ ಡಾಲರ್ ಮೌಲ್ಯ ಇಂದು ಚೇತರಿಕೆ ಕಂಡಿದ್ದು, ವಿದೇಶಿ ವಿನಿಮಯ ವಹಿವಾಟು ನಿಟ್ಟುಸಿರು ಬಿಡುವಂತಾಗಿದೆ.
ನಿನ್ನೆ ದಿನದ ಅಂತ್ಯಕ್ಕೆ ಡಾಲರ್ ಮೌಲ್ಯ 79.99 ರೂ. ವಹಿವಾಟಿಗೆ ಕೊನೆಗೊಂಡಿತ್ತು. ಇಂದು ಬೆಳಗ್ಗೆ 79.95ರೂ.ನಿಂದ ಮಾರುಕಟ್ಟೆ ತೆರೆದುಕೊಂಡಿದ್ದು, ನಿಧಾನ ಚೇತರಿಕೆ ಪರಿಣಾಮ 7 ಪೈಸೆ ಗಳಿಕೆ ಕಂಡಿದೆ. ಒಟ್ಟು 79.92 ರೂ. ವಹಿವಾಟು ನಡೆಸುವ ಮೂಲಕ ದೇಶೀಯ ಮಾರುಕಟ್ಟೆ ಮತ್ತು ವಿದೇಶಿ ವಿನಿಮಯ ವಹಿವಾಟು ಸುಧಾರಣೆಯಾಗಿದೆ.
ನಿನ್ನೆಯ ವೇಗದ ಅಂದಾಜಿನ ಪ್ರಕಾರ ಇಂದು ಡಾಲರ್ ಮೌಲ್ಯ 80 ರೂ. ಗಡಿ ದಾಟಿ ಸಾರ್ವತ್ರಿಕ ದಾಖಲೆ ನಿರ್ಮಾಣವಾಗಲಿದೆ ಎಂಬ ಆತಂಕಗಳಿದ್ದವು. ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ರೂಪಾಯಿ ತುಸು ಚೇತರಿಕೆ ಕಂಡು ಜಾಗತಿಕವಾಗಿ ದೇಶದ ಮರ್ಯಾದೆ ಕಾಪಾಡಿದೆ.