ಮಾಸ್ಕೋ, ಸೆ 27 -ರಷ್ಯಾದ ಶಾಲೆಯೊಂದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 17 ಮಂದಿ ಸಾವು, 24 ಮಂದಿ ಗಾಯಗೊಂಡಿದ್ದಾರೆ. ರಷ್ಯಾದ ರಾಜಾಧಾನಿ ಮಾಸ್ಕೋದಿಂದ ಪೂರ್ವಕ್ಕೆ 960 ಕಿಲೋಮೀಟರ್ ದೂರದಲ್ಲಿರು ಉಡ್ಮುಟಿರ್‍ಯಾ ಪ್ರದೇಶದ ಇಝೆವ್ಸಲ್ಕನಲ್ಲಿರುವ ಸ್ಕೂಲ್ ನಂ. 88 ರಲ್ಲಿ ಶೂಟಿಂಗ್ ನಡೆದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆಸಿದ ಬಂದೂಕುಧಾರಿಯನ್ನು ಅದೇ ಶಾಲೆಯ ಪದವೀಧರನಾದ 34 ವರ್ಷದ ಆರ್ಟಿಯೋಮ್ ಕಜಾಟ್ಸೆವ್ ಎಂದು ತನಿಖೆ ವೇಳೆ ತಿಳಿದುಬಂದಿದ್ದು ಆತನೂ ಕೂಡ ದಾಳಿಯ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡಿನ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ 17 ಜನರು ಸಾವನ್ನಪ್ಪಿದ್ದಾರೆ ಎಂದು ಉಡ್ಮುರ್ಟಿಯಾ ರಾಜ್ಯ ಸರ್ಕಾರ ತಿಳಿಸಿದೆ.
ದಾಳಿಯಲ್ಲಿ ಗಾಯಗೊಂಡಿರುವ 22 ಮಕ್ಕಳು ಹಾಗು 24 ಜನರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ
ಈ ಗುಂಡಿನ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ತನಿಖಾ ತಂಡಗಳು ಹೇಳುತ್ತಿದ್ದು ಘಟನೆ ಬಗ್ಗೆ ಅಧ್ಯಕ್ಷ ಪುಟಿನ್ ತೀವ್ರವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಶಾಲೆಯಲ್ಲಿ ಒಂದರಿಂದ 11 ನೇ ತರಗತಿಯವರೆಗಿನ ಮಕ್ಕಳಿಗೆ ಶಿಕ್ಷಣ ನೀಡುತ್ತದೆ ಕಳೆದ ಹಲವು ದಿನದಿಂದ ಅದನ್ನು ಇತರೆ ಶಾಲಾ ಕ್ಯಾಂಪಸ್‍ಗೆ ಸ್ಥಳಾಂತರಿಸಲಾಗತ್ತಿತ್ತು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ರಷ್ಯಾದಲ್ಲಿ ಇತ್ತೀಚೆಗೆ ನಡೆದ ಘೋರ ಘಟನೆ ಇದಾಗಿದ್ದು ವಿಷಯ ತಿಳಿದು ಸ್ಥಳೀಯರು ಕೂಡ ಬೆಚ್ಚಿಬಿದ್ದಿದ್ದಾರೆ