ಭಾರತದಲ್ಲಿ ಭೀಕರ ದಾಳಿಗೆ ಸಂಚು: ರಷ್ಯಾದಲ್ಲಿ ಉಗ್ರನ ಸೆರೆ

Social Share

ನವದೆಹಲಿ,ಆ.22- ಭಾರತದಲ್ಲಿ ಪ್ರವಾಸ ಕೈಗೊಂಡು ಆತ್ಮಹತ್ಯೆ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರನನ್ನು ರಷ್ಯಾದ ಭದ್ರತಾ ಸೇವೆಗಳ ಒಕ್ಕೂಟ(ಎಸ್‍ಎಸ್‍ಬಿ) ಬಂಧಿಸಿದೆ. ಈ ಮೂಲಕ ಭಾರೀ ಸಂಚೊಂದರ ಸುಳಿವು ದೊರೆತಿದ್ದು, ದೇಶೀಯ ರಕ್ಷಣೆ ಹಾಗೂ ತನಿಖಾ ತಂಡಗಳು ಎಚ್ಚೆತ್ತುಕೊಂಡಿವೆ.

ಭಾರತದ ಆಡಳಿತಾತ್ಮಕ ವೃತ್ತದಲ್ಲಿ ಪ್ರತಿನಿಧಿಯೊಬ್ಬರ ಮೇಲೆ ದಾಳಿ ನಡೆಸುವ ಸಂಚು ನಡೆದಿತ್ತು ಎಂದು ರಷ್ಯಾದ ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ. ಬಂಧಿತನನ್ನು ಇಸ್ಲಾಮಿಕ್ ಸ್ಟೇಟ್‍ನ ಕಾರ್ಯಕರ್ತ ಎಂದು ಹೇಳಲಾಗಿದೆ.

ರಷ್ಯಾದಲ್ಲಿ ನಿಷೇಧಗೊಂಡಿರುವ ಈ ಸಂಘಟನೆಯ ಬೆನ್ನತ್ತಿದ ಅಲ್ಲಿನ ತನಿಖಾಕಾಧಿರಿಗಳು ಆರೋಪಿಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಏಷ್ಯಾಖಂಡದಲ್ಲೇ ಪ್ರಭಾವಿ ಸ್ಥಾನ ಪಡೆಯುತ್ತಿರುವ ಭಾರತದಲ್ಲಿ ಅಸ್ಥಿರತೆಗೆ ಸಂಚು ರೂಪಿಸಿರುವುದು ತಿಳಿದು ಬಂದಿದೆ.

ಬಂಧಿತ ಆರೋಪಿಯಿಂದ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಪ್ರತಿಜ್ಞೆ ಮಾಡಿಸಿದ್ದು, ನಂತರ ದಾಳಿಯ ಜವಾಬ್ದಾರಿಯನ್ನು ಆತನಿಗೆ ವಹಿಸಲಾಗಿತ್ತು. ರಷ್ಯಾ ತೊರೆದು ಭಾರತಕ್ಕೆ ಪ್ರಯಾಣಿಸಲು ಅಗತ್ಯ ದಾಖಲೆಗಳನ್ನು ಸಜ್ಜುಗೊಳಿಸಲಾಗಿದೆ. ಒಂದು ವೇಳೆ ಈ ಸಂಚು ಯಶಸ್ವಿಯಾಗಿದ್ದರೆ ಭಾರತದಲ್ಲಿ ಹೈ ಪ್ರೊಫೈಲ್ ಉಗ್ರ ದಾಳಿ ಘಟಿಸುವುದರಲ್ಲಿತ್ತು ಎಂದು ಹೇಳಲಾಗಿದೆ.

ಬಂಧಿತ ಉಗ್ರ ಕೂಡ ಕೇಂದ್ರ ಏಷ್ಯಾ ಭಾಗದ ದೇಶಕ್ಕೆ ಸೇರಿದವನು ಎಂದು ಉಲ್ಲೇಖಸಲಾಗಿದೆ. ಸದ್ಯಕ್ಕೆ ಆತನ ಹೆಸರು ಮತ್ತು ಮಾಹಿತಿಗಳನ್ನು ರಹಸ್ಯವಾಗಿಡಲಾಗಿದೆ.

Articles You Might Like

Share This Article