ಮಾಸ್ಕೋ, ಜ.6- ಕಜಕಿಸ್ತಾನಕ್ಕೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವುದಾಗಿ ರಷ್ಯಾ ತಿಳಿಸಿದೆ. ದೇಶದಲ್ಲಿ ಇಂಧನ ಬೆಲೆ ಏರಿಕೆಯಿಂದ ಹೊತ್ತದ ಕಿಡಿ ಹಲವು ವಿಷಯ ಮುಂದಿಟ್ಟುಕೊಂಡು ಹಿಂಸಾಚಾರ ಪ್ರತಿಭಟನೆ ಶುರುವಾಗಿದೆ. ಪ್ರತಿಭಟನಾಕಾರರು ಬುಧವಾರ ಅಧ್ಯಕ್ಷೀಯ ನಿವಾಸ ಮತ್ತು ಮೇಯರ್ ಕಚೇರಿಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಭಟನಾಕಾರರೊಂದಿಗೆ ಪದೇ ಪದೇ ಘರ್ಷಣೆ ನಡೆಸಿದ್ದಾರೆ, ಎಂಟು ಪೊಲೀಸ್ ಅಧಿಕಾರಿಗಳು ಮತ್ತು ರಾಷ್ಟ್ರೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಕಝಕ್ ಆಂತರಿಕ ಸಚಿವಾಲಯ ತಿಳಿಸಿದೆ.
ಅಧ್ಯಕ್ಷ ಕಾಸಿಮïಅವರು ಸಹಾಯಕ್ಕಾಗಿ ಮನವಿ ಮಾಡಿದ 1 ಗಂಟೆಗಳ ನಂತರ, ರಷ್ಯಾ ಕೌನ್ಸಿಲ್ ಸಭೆ ನಡೆಸಿ ಅನಿರ್ದಿಷ್ಟ ಸಂಖ್ಯೆಯ ಸೇನೆಯ ಶಾಂತಿಪಾಲಕರನ್ನು ಕಳುಹಿಸಲು ಅನುಮೋದಿಸಿತು ಎಂದು ಕೌನ್ಸಿಲ್ ಅಧ್ಯಕ್ಷರಾದ ಅರ್ಮೇನಿಯನ್ ಪ್ರಧಾನಿ ನಿಕೋಲ್ ಪಶಿನ್ಯಾನ್ ತಿಳಿಸಿದ್ದಾರೆ.
ವಿಶ್ವದ ಒಂಬತ್ತನೇ ಅತಿದೊಡ್ಡ ರಾಷ್ಟ್ರವಾದ ಕಝಾಕಿಸ್ತಾನ್ ಉತ್ತರಕ್ಕೆ ರಷ್ಯಾ ಮತ್ತು ಪೂರ್ವಕ್ಕೆ ಚೀನಾದ ಗಡಿಯನ್ನು ಹೊಂದಿದೆ ಮತ್ತು ವ್ಯಾಪಕವಾದ ತೈಲ ನಿಕ್ಷೇಪಗಳನ್ನು ಹೊಂದಿದ್ದು ಅದು ಕಾರ್ಯತಂತ್ರವಾಗಿ ಮತ್ತು ಆರ್ಥಿಕವಾಗಿ ಪ್ರಮುಖವಾಗಿದೆ. ಆ ನಿಕ್ಷೇಪಗಳು ಮತ್ತು ಖನಿಜ ಸಂಪತ್ತಿನ ಹೊರತಾಗಿಯೂ, ದೇಶದ ಕೆಲವು ಭಾಗಗಳಲ್ಲಿ ಕಳಪೆ ಜೀವನ ಪರಿಸ್ಥಿತಿಗಳ ಬಗ್ಗೆ ಅಸಮಾಧಾನವು ಪ್ರಬಲವಾಗಿದೆ.
