ಮಾಸ್ಕೋವ್, ಮಾ.2- ಉಕ್ರೇನ್ ಮೇಲಿನ ದಾಳಿಯಲ್ಲಿ ಮೊದಲ ಯಶಸ್ಸು ಗಳಿಸಿರುವ ರಷ್ಯಾ, ಖೆಸ್ರನ್ ನಗರವನ್ನು ತನ್ನ ಕೈ ವಶ ಮಾಡಿಕೊಂಡಿರುವುದಾಗಿ ಹೇಳಿದೆ. ಏಳು ದಿನಗಳ ನಿರಂತರ ಯುದ್ಧದಿಂದ ಕ್ಯಿವ್, ಖರ್ಕಿವ್ ಸೇರಿದಂತೆ ಹಲವು ಪ್ರಮುಖ ನಗರಗಳನ್ನು ರಷ್ಯಾ ಪಡೆ ಸುತ್ತುವರೆದಿದೆ.
ಬ್ಲಾಕ್ ಸಿ ಭಾಗದಲ್ಲಿರುವ ಖೆಸ್ರನ್ ನಗರವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೆ ಇದನ್ನು ಖೆಸ್ರನ್ ನಗರದ ರಾಜ್ಯಪಾಲರು ತಳ್ಳಿ ಹಾಕಿದ್ದಾರೆ. ರಷ್ಯಾ ಪಡೆಗಳು ದಾಳಿ ಮಾಡಿವೆ, ನಗರವನ್ನು ಸುತ್ತುವರೆದಿವೆ, ನಮ್ಮ ಯೋಧರು ಬಲವಾದ ಪ್ರತಿರೋಧ ಒಡ್ಡುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.
