ಐರ್ಲೆಂಡ್ ಕರಾವಳಿಯಲ್ಲಿ ರಷ್ಯಾ ನೌಕಾ ವ್ಯಾಯಾಮ

Social Share

ಮಾಸ್ಕೋ, ಜ-30-ಉಕ್ರೇನ್ ಮೇಲೆ ಆಕ್ರಮಣ ಮಾಡಲು ತಯಾರಿ ನಡೆಸುತ್ತಿದೆ ಎಂಬ ಆರೋಪ ಮತ್ತು ಆತಂಕದ  ರಷ್ಯಾ ಐರ್ಲೆಂಡ್ ಕರಾವಳಿಯಲ್ಲಿ ನೌಕಾ ವ್ಯಾಯಾಮಗಳನ್ನು ಸ್ಥಳಾಂತರಿಸುವುದಾಗಿ ಹೇಳಿದೆ. ಮುಂದಿನ ಫೆಬ್ರವರಿ 3ರಿಂದ 8 ರವರೆಗೆ ನೈಋತ್ಯ ಐರ್ಲೆಂಡ್‍ನಿಂದ 240 ಕಿಲೋಮೀಟರ್ ದೂರದ ಅಂತರಾಷ್ಟ್ರೀಯ ಕಡಲಲ್ಲಿ ನೌಕಾ ವ್ಯಾಯಾಮ ನಡೆಸುವುದಾಗಿ ಹೇಳಿದೆ .
ಇದಕ್ಕೆ ಐರಿಶ್ ವಿದೇಶಾಂಗ ಸಚಿವ ಸೈಮನ್ ಕೊವೆನಿ ವಿರೋಧಿಸಿದ್ದಾರೆ, ಉಕ್ರೇನ್‍ನಲ್ಲಿ ಏನು ನಡೆಯುತ್ತಿದೆ ಎಂಬುದರ ಗೊತ್ತಿದೆ ಮಿಲಿಟರಿ ಚಟುವಟಿಕೆ ನಡೆಸಿ ಉದ್ವಿಗ್ನತೆಯನ್ನು ಹೆಚ್ಚಿಸಲು ಇದು ಸಮಯವಲ್ಲ ಎಂದಿದ್ದಾರೆ. ಐರ್ಲೆಂಡ್‍ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಯೂರಿ ಫಿಲಾಟೊವ್ ಅವರ ಪತ್ರವನ್ನುಕಳುಹಿಸಿದ್ದಾರೆ. ಉಕ್ರೇನ್‍ ಗಡಿಯ ಬಳಿ ಅಂದಾಜು 100,000 ಸೈನಿಕರನ್ನು ರಷ್ಯಾ ಒಟ್ಟುಗೂಡಿಸಿದೆ ಇದರಿಮದ ಸುತ್ತಲಿನ ಪ್ರದೇಶ ಉದ್ವಿಗ್ನತೆ ಉಂಟಾಗಿದೆ.
ಪಾಶ್ಚಿಮಾತ್ಯ ಪ್ರತಿಕ್ರಿಯೆಯ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯಾವುದೇ ಸಾರ್ವಜನಿಕ ಟೀಕೆಗಳನ್ನು ಮಾಡಿಲ್ಲ. ರಷ್ಯಾಯುದ್ಧವನ್ನು ಬಯಸುವುದಿಲ್ಲ ಎಂದು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಹೇಳುತ್ತಿದ್ದರೂ, ಒಪ್ಪಂದಕ್ಕೆ ಬರಲು ಇದು ಕಡಿಮೆ ಅವಧಿಕಾ± ಎಮದು ಹೇಳಿದರು .
ಪೂರ್ವ ಉಕ್ರೇನ್‍ನ ಎರಡು ಪ್ರದೇಶಗಳು 2014 ರಿಂದ ರಷ್ಯಾ ಬೆಂಬಲಿತ ಬಂಡುಕೋರರ ನಿಯಂತ್ರಣದಲ್ಲಿದೆ. ಇಲ್ಲಿ ವಾಸಿಸುವವರು ರಷ್ಯಾದ ನಾಗರಿಕರು ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಲು ಬಯಸಿದರೆ ರಶಿಯಾ ಪ್ರಾಂತ್ಯಗಳಲ್ಲಿ 5ಲಕ್ಷ ಕ್ಕೂ ಹೆಚ್ಚು ಜನರಿಗೆ ಪಾಸ್ಪೋರ್ಟ್‍ಗಳನ್ನು ನೀಡಿದೆ.

Articles You Might Like

Share This Article