ಮಾಸ್ಕೋವಾ,ಮಾ.4-ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯ ಹಾಗೂ ವಿದೇಶಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು 130ಕ್ಕೂ ಹೆಚ್ಚು ಬಸ್‍ಗಳನ್ನು ಸಜ್ಜುಗೊಳಿಸುತ್ತಿರುವುದಾಗಿ ರಷ್ಯಾ ತಿಳಿಸಿದೆ.
ಯುದ್ಧಪೀಡಿತ ಪ್ರದೇಶದಲ್ಲಿ ಉಕ್ರೇನ್ ಸೈನಿಕರು ಭಾರತೀಯ ಹಾಗೂ ಸುಮಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅವಕಾಶ ನೀಡುತ್ತಿಲ್ಲ. ಜೀವ ಉಳಿಸಿಕೊಳ್ಳಲು ರಾಜಧಾನಿ ಕೀವ್‍ನಿಂದ ಹೊರ ಹೋಗಲು ಯತ್ನಿಸುವ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗುತ್ತಿದೆ ಎಂಬ ಆರೋಪವಿದೆ.
ಹೀಗಾಗಿ ಚೀನಾ, ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ತಮ್ಮ ದೇಶದ ಪ್ರಜೆಗಳು ಹಾಗೂ ವಿದ್ಯಾರ್ಥಿಗಳ ಬಗ್ಗೆ ಆತಂಕಗೊಂಡಿವೆ.
ರಷ್ಯಾ ವಿದೇಶಿಗರನ್ನು ಸುರಕ್ಷಿತವಾಗಿ ಯುದ್ದಪೀಡಿತ ಕೀವ್, ಕರ್ಕೀವ್ ಹಾಗೂ ಇತರೆ ಪ್ರದೇಶಗಳಿಂದ ಹೊರತರಲು 130 ಬಸ್‍ಗಳ ವ್ಯವಸ್ಥೆ ಮಾಡಿದೆ ಎಂದು ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮಿಖಾಲಿ ಮೆಜಿಂತ್‍ಸ್ಟೇವ್ ಪ್ರಕಟಿಸಿದ್ದಾರೆ.
