ಕದನ ವಿರಾಮದ ನಂತರ ಮತ್ತೆ ಸಿಡಿದೆದ್ದ ಪುಟಿನ್ ಪಡೆ

Social Share

ಮಾಸ್ಕೋ,ಮಾ.6- ಉಕ್ರೇನ್ ಯುದ್ಧದ ನಡುವೆ ನಿನ್ನೆ ಕದನ ವಿರಾಮ ಘೋಷಿಸಿ ನಾಗರಿಕರ ಸ್ಥಳಾಂತರಕ್ಕೆ ಅವಕಾಶ ನೀಡಿದ್ದ ರಷ್ಯಾ, ಇದ್ದಕ್ಕಿದ್ದಂತೆ ರೊಚ್ಚುಗೆದ್ದಿದ್ದು, ಯುದ್ಧದ ಭೀಕರತೆ ಮತ್ತಷ್ಟು ಹೆಚ್ಚಾಗಿದೆ.ಮರಿಯಾಪೋಲ್, ಒಲೊನೊಓಖಾ ನಗರಗಳಲ್ಲಿನ ಜನ ಸುರಕ್ಷಿತ ಸ್ಥಳಗಳಿಗೆ ತೆರಳಲು ನಿನ್ನೆ 4 ಗಂಟೆಗಳ ಕಾಲ ಆಕ್ರಮಣವನ್ನು ತಡೆ ಹಿಡಿದು ಮಾನವ ಕಾರಿಡಾರ್‍ಗೆ ಅವಕಾಶ ಮಾಡಿಕೊಡಲಾಗಿತ್ತು.
ಮಾನವ ಕಾರಿಡಾರ್ ನಡುವೆ ರಷ್ಯಾ ಮಾತುತಪ್ಪಿ ಶೆಲ್ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಉಕ್ರೇನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತನ್ನ ಸ್ವಾರ್ಥಕ್ಕಾಗಿ ಉಕ್ರೇನ್ ವಿದೇಶಿಗರನ್ನು ಒತ್ತೆಯಾಳಾಗಿಟ್ಟುಕೊಂಡಿದೆ. ಕದನ ವಿರಾಮದ ನಡುವೆ ರಷ್ಯಾ ಪಡೆಗಳ ಮೇಲೆ ದಾಳಿ ನಡೆಸಿದೆ ಎಂದು ಟೀಕಿಸಿದೆ.
ವಾದ-ವಿವಾದಗಳು ತೀವ್ರಗೊಂಡ ಬೆನ್ನಲೆಯಲ್ಲಿ ಉಕ್ರೇನ್ ಅಧ್ಯಕ್ಷ ವಾಡ್ಲಿಮಿರ್ ಜೆಲೆನ್ಸ್ಕಿ ವಿಶ್ವ ಸಮುದಾಯ ಹಾಗೂ ನಾಟೋ ಪಡೆಯ ಸಹಾಯ ಯಾಚಿಸಿದ್ದಾರೆ. 11 ದಿನಗಳ ಯುದ್ಧದಲ್ಲಿ ಸಾಕಷ್ಟು ಸಾವುನೋವುಗಳಾಗಿವೆ. ಉಕ್ರೇನ್‍ನ ಮೂರು ಅಣುಸ್ಥಾವರಗಳನ್ನು ರಷ್ಯಾ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಜೆಲೆನ್ಸ್ಕಿ ಆರೋಪಿಸಿದ್ದಾರೆ. ಅದರ ಹೊರತಾಗಿ ಉಕ್ರೇನ್‍ನ ಪ್ರಮುಖ ನಗರಗಳು ತಮ್ಮ ಹಿಡಿತದಲ್ಲೇ ಇದೆ ಎಂದು ಪ್ರತಿಪಾದಿಸಿದ್ದಾರೆ.
ಜಪೋರಿಝಾಜಿಯ ಅಣುಸ್ಥಾವರವನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಬಳಿಕ ಚರ್ನೊಬೊಲಿ ಮತ್ತು ಯುಜೋನೊಕ್ರೈನ್ಸ್ಕ್ ಅಣುಸ್ಥಾವರಗಳನ್ನು ರಷ್ಯಾ ಆಕ್ರಮಿಸಿಕೊಂಡಿದೆ. ಇದು ಅಪಾಯಕಾರಿ ಬೆಳವಣಿಗೆ. ರಷ್ಯಾದಿಂದ ಅಣುಸ್ಥಾವರಗಳ ವಿಮೋಚನೆಗಾಗಿ ನಾಟೋ ಪಡೆಗಳು ಸಹಾಯ ಮಾಡಬೇಕೆಂದು ಜೆಲೆನ್ಸ್ಕಿ ಆಗ್ರಹಿಸಿದ್ದಾರೆ.
ಉಕ್ರೇನ್‍ನ ನಿಕೋಲೆವ್, ಚರ್ನೀವ್ ಮತ್ತು ಸುಮಿನಗರಗಳನ್ನು ರಷ್ಯಾ ಪಡೆಗಳು ಸುತ್ತುವರೆದಿವೆ. ಉಕ್ರೇನ್ ಸೈನಿಕರು ಪ್ರಬಲ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿರುವುದರಿಂದ ಅವು ನಮ್ಮ ಹಿಡಿತದಲ್ಲೇ ಇವೆ.ಮೈಕೋಲೈವ್‍ನಿಂದ 75 ಕಿ.ಮೀ ದೂರದಲ್ಲಿರುವ ಯುಜೋನೊಕ್ರೈನ್ಸ್ಕ್ ಅಣುಸ್ಥಾವರಕ್ಕೆ ಅಪಾಯವಿದೆ.
ಒಂದು ವೇಳೆ ಇಲ್ಲಿ ಏನಾದರೂ ಘಟಿಸಿದರೆ ಜಾಗತಿಕವಾಗಿಯೇ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ. ಈವರೆಗೂ ಅಣುವಿಕಿರಣಗಳ ಮಟ್ಟ ರಕ್ಷಣಾ ಚೌಕಟ್ಟಿನಲ್ಲೇ ಇದೆ. ಆದರೆ ಆಕ್ರಮಣದ ವಾತಾವರಣದಲ್ಲಿ ಏನಾದರೂ ಆಗಬಹುದು ಎಂದು ಎಚ್ಚರಿಸಿದ್ದಾರೆ.ಕಳೆದ 10 ದಿನಗಳ ಯುದ್ಧದಲ್ಲಿ ರಷ್ಯಾದ ಸುಮಾರು 10 ಸಾವಿರ ಮಂದಿಯನ್ನು ನಾವು ಹತ್ಯೆ ಮಾಡಿದ್ದೇವೆ.
15ರಿಂದ 20 ವರ್ಷದ ಯುವಕರನ್ನು ರಷ್ಯಾ ಬಲವಂತವಾಗಿ ಯುದ್ಧಕ್ಕೆ ಕಳುಹಿಸುತ್ತಿದೆ. ಉಕ್ರೇನ್ ನಿನ್ನೆ ರಷ್ಯಾದ 5 ವಿಮಾನಗಳು, 4 ಹೆಲಿಕಾಪ್ಟರ್‍ಗಳನ್ನು ಹೊಡೆದುರುಳಿಸಿದೆ. ಈವರೆಗೂ 44 ವಿಮಾನಗಳು ಮತ್ತು 44 ಹೆಲಿಕಾಪ್ಟರ್‍ಗಳನ್ನು ಧ್ವಂಸ ಮಾಡಿರುವುದಾಗಿ ಹೇಳಿಕೊಂಡಿದೆ.ಅದರೆ ರಷ್ಯಾ ಅಧ್ಯಕ್ಷ ಪುಟೀನ್ ಸಣ್ಣ ಪ್ರಮಾಣದ ಕದನ ವಿರಾಮದ ಬಳಿಕ ಮತ್ತಷ್ಟು ತಂತ್ರಗಾರಿಕೆಯಿಂದ ಮುನ್ನುಗ್ಗಲು ಆರಂಭಿಸುತ್ತಿದ್ದಾರೆ. ಉಕ್ರೇನ್‍ನ ಬಹುತೇಕ ಭಾಗಗಳನ್ನು ರಷ್ಯಾ ಸೈನಿಕರು ಸುತ್ತುವರೆದಿದ್ದಾರೆ. ಶೆಲ್ ದಾಳಿ, ಗುಂಡಿನ ಹಾರಾಟಗಳು ನಿರಂತರವಾಗಿ ಮುಂದುವರೆದಿವೆ.
ಪ್ರಮುಖ ಬೆಳವಣಿಗೆಯಲ್ಲಿ ಇಸ್ರೇಲ್ ಅಧ್ಯಕ್ಷ ಹಿಸಾಕ್ ಐರ್‍ಜೋಗ್ ವಾಡ್ಲಿಮಿರ್ ಪುಟೀನ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಯುದ್ಧವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆಯಾದರೂ ಸಂಘರ್ಷ ಸಮಯದಲ್ಲಿ ತಾಂತ್ರಿಕವಾಗಿ ಸಬಲವಾಗಿರುವ ಎರಡು ರಾಷ್ಟ್ರಗಳ ಮುಖ್ಯಸ್ಥರ ಭೇಟಿ ಗಮನಸೆಳೆದಿದೆ.
ಈ ನಡುವೆ ಯುದ್ಧದಲ್ಲಿ ನೇರವಾಗಿ ಭಾಗವಹಿಸದ ಬ್ರಿಟನ್, ಅಮೆರಿಕ, ಫ್ರಾನ್ಸ್ ಹಾಗೂ ಇತರ ರಾಷ್ಟ್ರಗಳು ರಷ್ಯಾದ ಮೇ¯ ಆರ್ಥಿಕ ದಿಗ್ಬಂಧನ ವಿಸಿ ಹಂತಹಂತವಾಗಿ ಒತ್ತಡ ತರುವ ಪ್ರಯತ್ನ ಮಾಡುತ್ತಿದ್ದಾರೆ.ವೀಸಾ ಮತ್ತು ಮಾಸ್ಟರ್ ಕಾರ್ಡ್ ಸಂಸ್ಥೆ ರಷ್ಯಾದಲ್ಲಿನ ತನ್ನ ಕಾರ್ಯಾಚರಣೆಯನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟಿದೆ.
ಅಮೆರಿಕದ ಮೂಲದ ಈ ಕಂಪನಿಯ ಡಿಜಿಟಲ್ ಪೇಮೆಂಟ್ ಮತ್ತು ಆರ್ಥಿಕ ವಹಿವಾಟಿನಲ್ಲಿ ದೈತ್ಯ ಪಾಲುದಾರನಾಗಿದ್ದು, ರಷ್ಯಾದಲ್ಲಿ ವಹಿವಾಟು ಸ್ಥಗಿತಗೊಳಿಸಿರುವುದರಿಂದ ಆರ್ಥಿಕ ವ್ಯವಸ್ಥೆ ವಿಚಲಿತವಾದಂತಾಗಿದೆ.ಆದರೂ ರಷ್ಯಾ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತಮ್ಮ ಧೋರಣೆಯನ್ನು ಪುಟೀನ್ ಮುಂದುವರೆಸಿದ್ದು, ಉಕ್ರೇನ್ ಮತ್ತು ರಷ್ಯಾ ನಡುವೆ ವಾಯುಮಾರ್ಗದ ವಿಷಯಕ್ಕೆ ಯಾರಾದರೂ ತಲೆ ಹಾಕಿದರೆ ಅದರ ಪರಿಣಾಮ ಘೋರವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

Articles You Might Like

Share This Article