ರಷ್ಯಾ ರೋಷಾವೇಶಕ್ಕೆ ಚಲ್ಲಾಪಿಲ್ಲಿಯಾದ ಉಕ್ರೇನ್ ನಗರಗಳು..!

Social Share

ಕೀವ್, ಫೆ.26- ಸಂವಿದಾನದ ಮಾತುಕತೆಯ ಔಪಚಾರಿಕ ಭರವಸೆಗಳು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿರೋಧದ ಹೊರತಾಗಿಯೂ ರಷ್ಯಾ ತನ್ನ ಆಕ್ರಮಣಶೀಲತೆಯನ್ನು ಮುಂದುವರೆಸಿದ್ದು, ನಿರಂತರ ದಾಳಿಯಿಂದ ಉಕ್ರೇನ್ ನಲುಗಿ ಹೋಗಿದೆ. ದೇಶದ ರಾಜಧಾನಿ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ವಿಧ್ವಂಸಕ ಪರಿಸ್ಥಿತಿ ನಿರ್ಮಾಣವಾಗಿದೆ.
ಪುನಾವರ್ತಿತ ಕೊರಿಕೆಯ ಬಳಿಕವೂ ಬಹುತೇಕ ರಾಷ್ಟ್ರಗಳು ಉಕ್ರೇನ್ ಗೆ ನಿರೀಕ್ಷಿತ ಬೆಂಬಲ ವ್ಯಕ್ತ ಪಡಿಸಿಲ್ಲ. ಆದರೂ ಜಗ್ಗದ ಉಕ್ರೇನ್ ಸ್ವರಕ್ಷಣಾ ಹೋರಾಟವನ್ನು ಮುಂದುವರೆಸಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಬೆಂಬಲಕ್ಕೆ ನಿಲ್ಲದ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲ್ಡೊಮಿರ್ ಝೆಲೆನ್ಕ್ಸಿ ಟ್ವಿಟರ್ ನಲ್ಲಿ ಎಲ್ಲರನ್ನೂ ಅನ್ ಫಾಲೋ ಮಾಡಿ ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಿದ್ದಾರೆ.
ಈ ಮೂಲಕ ತಾವು ಒಂಟಿ ಎಂಬ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ನಿನ್ನೆಯವರೆಗು ಬ್ರಿಟನ್, ಅಮೆರಿಕಾ, ಜರ್ಮನಿ, ಪ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಿ ಅವರ ಜೊತೆ ಮಾತನಾಡಿರುವುದಾಗಿ ಹೇಳಿಕೊಳ್ಳುತ್ತಿದ್ದ ಝೆಲೆನ್ಕ್ಸಿ ಪೊಲೆಂಡ್ ಹೊರತು ಪಡಿಸಿ ಉಳಿದ ದೇಶಗಳಿಂದ ಯಾವುದೇ ನೆರವು ಬರದಿರುವ ಬಗ್ಗೆ ಅಸಮದಾನ ವ್ಯಕ್ತ ಪಡಿಸಿದ್ದಾರೆ.
ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಣೆ ಮಾಡಿದ ರಷ್ಯಾ ಉಕ್ರೇನ್ ನ ಜನವಸತಿ ಮತ್ತು ನಾಗರೀಕರ ಮೇಲೆ ದಾಳಿ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿತ್ತು.
ಆದರೆ ಕ್ಷಿಪಣಿ ದಾಳಿಗಳಿಂದ ಹಲವು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಉಕ್ರೇನ್ ರಷ್ಯಾ ನಮ್ಮ ದೇಶದ ನಾಗರೀಕರನ್ನು ಹತ್ಯೆ ಮಾಡುತ್ತಿದೆ, ಉಕ್ರೇನ್ ಭೂ ಭಾಗವನ್ನು ವಶ ಪಡಿಸಿಕೊಳ್ಳಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದೆ. ಇದಕ್ಕೆ ಪ್ರತ್ಯಾರೋಪ ಮಾಡಿರುವ ರಷ್ಯಾದ ಸೇನಾ ವಕ್ತಾರರು, ಉಕ್ರೇನ್ ಯುದ್ಧ ಕಾಲದಲ್ಲಿ ತನ್ನ ಪ್ರಜೆಗಳನ್ನು ಕವಚವನ್ನಾಗಿ ಬಳಕೆ ಮಾಡುತ್ತಿದೆ ಎಂದು ಅಸಮದಾನ ವ್ಯಕ್ತ ಪಡಿಸಿದ್ದಾರೆ.

Articles You Might Like

Share This Article