ಮಾಸ್ಕೋ,ಮಾ.6- ಭಾರತ ಸೇರಿದಂತೆ ಆರು ದೇಶಗಳ ವೀಸಾ ಕಾರ್ಯ ವಿಧಾನಗಳನ್ನು ಸರಾಗಗೊಳಿಸುವ ಪ್ರಕ್ರಿಯೆಗೆ ರಷ್ಯಾ ಚಾಲನೆ ನೀಡಿದೆ. ಭಾರತ, ಸಿರಿಯಾ, ಇಂಡೋನೆಷ್ಯಾ, ಅಂಗೋಲಾ, ವಿಯೆಟ್ನಾಂ ಮತ್ತು ಫಲಿಫೈನ್ ರಾಷ್ಟ್ರಗಳ ನಾಗರೀಕರಿಗೆ ಅನುಕೂಲವಾಗುವಂತೆ ವೀಸಾ ಸರಳೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ರಷ್ಯಾ ಉಪ ವಿದೇಶಾಂಗ ಸಚಿವ ಎವ್ಗೆನಿ ಇವಾನೋವ್ ತಿಳಿಸಿದ್ದಾರೆ.
ಸೌದಿ ಅರೇಬಿಯಾ, ಬಾರ್ಬಡೋಸ್, ಹೈಟಿ, ಜಾಂಬಿಯಾ, ಕುವೈತ್, ಮಲೇಷ್ಯಾ, ಮೆಕ್ಸಿಕೊ ಮತ್ತು ಟ್ರಿನಿಡಾಡ್ ಸೇರಿದಂತೆ 11 ದೇಶಗಳೊಂದಿಗೆ ವೀಸಾ ಮುಕ್ತ ಪ್ರವಾಸಗಳ ಕುರಿತು ರಷ್ಯಾ ಅಂತರ್ ಸರ್ಕಾರಿ ಒಪ್ಪಂದಗಳನ್ನು ಸಹ ಸಿದ್ಧಪಡಿಸುತ್ತಿದೆ ಎಂದು ಇವನೊವ್ ಈ ಹಿಂದೆ ಹೇಳಿದ್ದರು ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿದ್ದವು.
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಲುಕ್‍ಔಟ್ ನೋಟಿಸ್
ಒಂದು ವರ್ಷದ ಹಿಂದೆ ಉಕ್ರೇನ್‍ನ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದಾಗಿನಿಂದ, ಇದು ಸಾವಿರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಸ್ಥಳಾಂತರಿಸಿ ನಂತರ ಮಾಸ್ಕೋ ಚೀನಾ, ಭಾರತ ಮತ್ತು ಆಫ್ರಿಕನ್ ರಾಷ್ಟ್ರಗಳ ಸ್ನೇಹ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಯುರೋಪಿಯನ್ ಯೂನಿಯನ್ ರಷ್ಯಾದ ಆಕ್ರಮಣವನ್ನು ಖಂಡಿಸಿ ನಿರ್ಬಂಧಗಳನ್ನು ವಿಧಿಸಿದರೆ, ಚೀನಾ ಮತ್ತು ಭಾರತ ತಟಸ್ಥ ನಿಲುವುಗಳನ್ನು ಹೊಂದಿದ್ದವು.
Russia, Working, Easing, Visa, Process, India,