ರಷ್ಯಾ ವಿರುದ್ಧ ಬ್ಲಿಂಕೆನ್ ಟೀಕೆ

Social Share

ವಾಷಿಂಗ್ಟನ್, ಫೆ.22- ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್‍ಗಳನ್ನು ಸ್ವತಂತ್ರ ರಾಷ್ಟ್ರಗಳು ಎಂದು ಗುರುತಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿರ್ಧಾರ ಉಕ್ರೇನ್‍ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಮೇಲಿನ ನಿಖರ ದಾಳಿಯಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಟೋನಿ ಬ್ಲಿಂಕೆನ್ ಟೀಕಿಸಿದರು. ಪುಟಿನ್ ಅವರು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ಸ್‍ಗಳನ್ನು ಸ್ವತಂತ್ರ ದೇಶಗಳು ಎಂದು ಗುರುತಿಸುವ ಡಿಕ್ರೀಗಳಿಗೆ ಸಹಿ ಮಾಡಿದ್ದಾರೆ.
ಈ ಕ್ರಮವನ್ನು ಅಮೆರಿಕ ಬಲವಾಗಿ ಖಂಡಿಸಿದೆ. ಇದು ರಷ್ಯಾದ ಮಿನ್ಸ್ಕ್ ಒಪ್ಪಂದದ ಬದ್ಧತೆಯ ಉಲ್ಲಂಘನೆ ಮತ್ತು ರಷ್ಯಾ ಪ್ರತಿಪಾದಿತ ರಾಜತಾಂತ್ರಿಕತೆಯ ವಿರುದ್ಧ ಕ್ರಮವಾಗಿದೆ ಎಂದು ಅಮೆರಿಕ ಹೇಳಿದೆ.
ರಾಷ್ಟ್ರಗಳಿಗೆ ಬೆದರಿಕೆ ಅಥವಾ ಬಲಪ್ರಯೋಗದ ಮೂಲಕ ಹೊಸ ರಾಷ್ಟ್ರಗಳನ್ನು ಗುರುತಿಸದಿರುವ ಬದ್ಧತೆ ಇರುತ್ತದೆ ಮತ್ತು ಮತ್ತೊಂದು ದೇಶದ ಗಡಿಭಾಗದಲ್ಲಿ ತೊಂದರೆ ಮಾಡದಿರುವ ಹೊಣೆಗಾರಿಕೆ ಇರುತ್ತದೆ ಎಂದು ಬ್ಲಿಂಕೆನ್ ನುಡಿದಿದ್ದಾರೆ.

Articles You Might Like

Share This Article