ಕ್ಯಿವ್, ಮಾ-7- ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪ್ರಮುಖ ಘಟ್ಟ ತಲುಪಿದ್ದು, ಎರಡೂ ಕಡೆಗಳ ಸೇನಾ ಯೋಧರು, ಟ್ಯಾಂಕರ್ಗಳು, ಫೈಟರ್ ಜೆಟ್ಗಳು, ಸಮರ ವಿಮಾನಗಳು ಸೇರಿದಂತೆ ವಾಹನಗಳು ನಾಶಗೊಂಡಿವೆ. ಇದರ ನಡುವೆ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಮುಗಿಸಲು ರಷ್ಯಾ ಸೇನೆ ಸ್ಕೆಚ್ ರೂಪಿಸಿದೆ. ಯುದ್ಧ ಆರಂಭಗೊಂಡು 12ನೇ ದಿನಕ್ಕೆ ತಲುಪುತ್ತಿದ್ದು, ರಷ್ಯಾ ಹೊಡೆತಕ್ಕೆ ತತ್ತರಿಸಿದ್ದು, ಶರಣಾಗತಿಯೊಂದೇ ಮಾರ್ಗ ಎಂಬಂತೆ ಕಂಡುಬರುತ್ತಿದೆ.
ಈ ನಡುವೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್, ಹೊಸ ತಂತ್ರ ಹೆಣೆದಿದ್ದು, ಇಂದು ಮಧ್ಯಾಹ್ನದಿಂದ ಪ್ರಮುಖ ನಾಲ್ಕು ನಗರಗಳಾದ ಕ್ಯಿವ್, ಕಾರ್ಕೀವ್, ಮೈಕೋಲೈವಾ ಸೇರಿದಂತೆ ಹಲವೆಡೆ ಕದನ ವಿರಾಮ ಘೋಷಿಸಿದೆ. ನಾಗರಿಕರು ಸ್ಥಳ ಬಿಟ್ಟು ತೆರಳಲು ಅವಕಾಶ ಕಲ್ಪಿಸಲಾಗುತ್ತಿದೆ
ಎಂದು ತಿಳಿದುಬಂದಿದೆ. ದೇಶದ ಅಣು ವಿದ್ಯುತ್ ಸ್ಥಾವರಗಳನ್ನು ರಷ್ಯಾ ಬಹುತೇಕ ತನ್ನ ವಶಕ್ಕೆ ಪಡೆದಿದ್ದು, ಇಡೀ ರಾಷ್ಟ್ರ ಕತ್ತಲಲ್ಲಿ ಮುಳುಗುವ ಭೀತಿ ಆವರಿಸಿದೆ. ಕತ್ತಲ ಯುದ್ಧ ಸಂದೇಶದೊಂದಿಗೆ ಮುಂದೆ ಭಾರೀ ದಾಳಿಯ ಮುನ್ಸೂಚನೆ ನೀಡಲಾಗುತ್ತಿದೆ.
ಉಕ್ರೇನ್ ಪಡೆ ರಷ್ಯಾದ ವಿಮಾನವೊಂದನ್ನು ಹೊಡೆದುರುಳಿಸಿದೆ. ಉಕ್ರೇನ್ನ ಸಾವಿರಕ್ಕೂ ಹೆಚ್ಚು ಸೇನಾ ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಉಕ್ರೇನ್ನ ಮೈಕೋಲೈವಾ ಪ್ರಾಂತ್ಯದ ಮೇಲೆ ಹಲವಾರು ರಾಕೆಟ್ ದಾಳಿಗಳು ನಡೆದಿದ್ದು, ಸಾವುನೋವಿನ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ದೊರೆತಿಲ್ಲ. ವಿನಿಸ್ಟಾದ ಲಿವಿಯಸ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸಿ ಸಂಪೂರ್ಣ ಧ್ವಂಸಗೊಳಿಸಲಾಗಿದೆ.
ಲೂವಾಂಸ್ಕಾದಲ್ಲಿ ಪ್ರಬಲ ಬಾಂಬ್ ಸೋಟಗೊಂಡಿದೆ. ಸುತ್ತಮುತ್ತಲ ಪ್ರದೇಶಗಳು ಭಾರೀ ಹಾನಿಗೊಳಗಾಗಿವೆ. ಕರ್ಮಾಟರೋಸ್ಕ್ ತಾಂತ್ರಿಕ ಸಂಪರ್ಕ ಕೇಂದ್ರದ ಮೇಲೆ ಕ್ಷಿಪಣಿ ಅಪ್ಪಳಿಸಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ.
ರಷ್ಯಾದ ಜೆಟ್ ವಿಮಾನಗಳು ಉಕ್ರೇನ್ನ ಕೆಲವು ಸಿಟಿಗಳ ಮೇಲೆ ಹಾರಾಟ ನಡಸಿದ್ದು, ಸುಮಾರು 2800ಕ್ಕೂ ಹೆಚ್ಚು ಸೈಬರ್ ದಾಳಿಗಳು ನಡೆದಿವೆ. ಯುದ್ದ ತೀವ್ರತೆ ಪಡೆಯುತ್ತಿದ್ದಂತೆ ಅಮೆರಿಕ ಎಚ್ಚೆತ್ತುಕೊಂಡು, ರಷ್ಯಾದ ಮಾಸ್ಕೋದಲ್ಲಿದ್ದ 50ಕ್ಕೂ ಹೆಚ್ಚು ರಾಯಭಾರಿ ಅಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ.
ರಷ್ಯಾ ಪಡೆಗಳಿಗೆ ಪ್ರಬಲ ಪ್ರತಿರೋಧವೊಡ್ಡಿರುವ ಉಕ್ರೇನ್ ಕರ್ಕೀವ್ ನಗರದ ಮೇಲೆ ಹಾರಾಟ ನಡೆಸಿದ್ದ ರಷ್ಯಾ ವಿಮಾನವನ್ನು ಹೊಡೆದುರುಳಿಸಿದ್ದು, ಅದರಲ್ಲಿದ್ದ ಪೈಲೆಟ್ ಹೊರ ಬರಲಾಗದೆ ಸಾವನ್ನಪ್ಪಿದ್ದಾರೆ ಎಂದು ಕರ್ಕೀವ್ ವಲಯದ ರಕ್ಷಣಾ ಕೇಂದ್ರ ಕಚೇರಿ ತಿಳಿಸಿದೆ.
ಉಕ್ರೇನ್ ಮಿಲಿಟರಿ ಕಾರ್ಯಚರಣೆಯಲ್ಲಿ ದಾಳಿಗೊಳಗಾದ ವಿಮಾನ ಕರ್ಕೀವ್ ಹೊರವಲಯ ಕುಲಿಣಿಚಿವ್ ಬಳಿ ಪತನಗೊಂಡಿದೆ. ಜೊತೆಯಲ್ಲಿ ಮೈಕೊಲೈವ್ನಲ್ಲಿ ಉಕ್ರೇನ್ ಪಡೆಗಳು ರಷ್ಯಾದ ಯುದ್ಧ ವಾಹನಗಳನ್ನು ಜಪ್ತಿ ಮಾಡಿರುವುದಾಗಿ ಹೇಳಿಕೊಂಡಿವೆ.
ಈ ನಡುವೆ ರಾಷ್ಟ್ರ ರಾಜಧಾನಿ ಕ್ಯಿವ್ನ್ನು 64 ಕಿಲೋ ಮೀಟರ್ ನಷ್ಟು ಸುತ್ತುವರೆದಿದ್ದ ರಷ್ಯಾ ಪಡೆ ಅಲ್ಲೆಯೇ ನಿಂತಿದೆ. ಬಹುಶಃ ಕೆಸರಿನಲ್ಲಿ ಸಿಲುಕಿರಬೇಕು ಅಥವಾ ವಾಹನಗಳ ಇಂಧನ ಮುಗಿದು ಮುಂದೆ ಚಲಿಸಲಾಗದೆ ತಟಸ್ಥವಾಗಿರಬಹುದೆಂದು ಅಂದಾಜಿಸಲಾಗಿದೆ.
ರಷ್ಯಾ ಆಕ್ರಮಣದ ದಿನದಿಂದ ಈವರೆಗೆ ಉಕ್ರೇನ್ನಲ್ಲಿ 38 ಮಕ್ಕಳು ಸಾವನ್ನಪ್ಪಿದ್ದು, 71 ಮಕ್ಕಳು ಗಾಯಗೊಂಡಿದ್ದಾರೆ ಎಂದು ಮಾನವಹಕ್ಕುಗಳ ಸಂಸದೀಯ ಆಯುಕ್ತರಾದ ಲ್ಯುಮ್ಡಿಲ ಡೆನಿಸೋವಾ ತಿಳಿಸಿದ್ದಾರೆ.
ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ಸಹಾಯ ಮಾಡಬೇಕು ಮತ್ತು ಆಕ್ರಮಣಕಾರಿ ರಷ್ಯಾ ವಿರುದ್ಧ ಆರ್ಥಿಕ ದಿಗ್ಭಂದನಗಳನ್ನು ವಿಸಬೇಕು ಎಂದು ಒತ್ತಾಯಿಸಿ ಉಕ್ರೇನ್ ನ ವಿದೇಶಾಂಗ ಸಚಿವ ಡ್ಯಾಂಟ್ರೋ ಕುಲೆಬ, ಯೂರೋಪಿಯನ್ ಒಕ್ಕೂಟ ಹಾಗೂ ಜಿ-7ರಾಷ್ಟ್ರಗಳಿಗೆ ಪತ್ರ ಬರೆದಿದ್ದಾರೆ.
ಕುಲೆಬ ಸಹಿ ಮಾಡಿರುವ ಪತ್ರ ಎಲ್ಲಾ ನಿರ್ದಿಷ್ಟ ರಾಷ್ಟ್ರಗಳಿಗೆ ರವಾನೆಯಾಗಿದೆ. ಅದರಲ್ಲಿ ಆರ್ಥಿಕ ನಿರ್ಬಂಧ ಹೇರಬೇಕಾದ ವಿಷಯಗಳ ಪಟ್ಟಿಯನ್ನು ನಮೂದಿಸಲಾಗಿದೆ. ಕೊನೆಯ ಹಂತವಾಗಿ ಯುದ್ಧವನ್ನು ತಡೆಯಲು ಈ ಕ್ರಮ ಸೂಕ್ತವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಪೆÇರಿಝೀಯ ಅಣುಸ್ಥಾವರವನ್ನು ವಶಕ್ಕೆ ಪಡೆದಿರುವ ರಷ್ಯಾ ಪಡೆಗಳು ಅಲ್ಲಿನ ಸಂಪರ್ಕಗಳನ್ನು ಕಡಿತಗೊಳಿಸಿದ್ದು, ಹೊರಗಿನಿಂದ ಯಾರೂ ತಲುಪಲು ಸಾಧ್ಯವಾಗದಂತಹ ಕಠಿಣ ಪರಿಸ್ಥಿತಿ ನಿರ್ಮಿಸಿವೆ. ಇಂಟರ್ ನೆಟ್, ಟೆಲಿಫೋನ್ ಸೇರಿದಂತೆ ಎಲ್ಲ ಸಂಪರ್ಕಗಳು ಬಂದಾಗಿದ್ದು, ರಷ್ಯಾದ ಕಮಾಂಡರ್ನಿಂದ ಅಣುಸ್ಥಾವರ ನಿಯಂತ್ರಿಸಲ್ಪಡುತ್ತಿದೆ.
ಮೊಬೈಲ್ ನೆಟ್ವರ್ಕ್ಗಳನ್ನು ಅಮಾನತ್ತಿನಲಿಡಲಾಗಿದೆ ಎಂದು ಅಂತಾರಾಷ್ಟ್ರೀಯ ಅಣು ಇಂಧನ ಶಕ್ತಿ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ರಷ್ಯಾ ಪಡೆಗಳು ಈವರೆಗೂ 1119 ಉಕ್ರೇನ್ ಮಿಲಿಟರಿ ಸೇನಾ ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಳ್ಳುತ್ತಿವೆ. ಜೊತೆ ಜೊತೆಯಾಗಿ ಉಕ್ರೇನ್ನ ಜನವಸತಿ ಪ್ರದೇಶಗಳ ಮೇಲೂ ದಾಳಿ ಮುಂದುವರೆಸುವುದಾಗಿ ಆರೋಪಗಳು ಕೇಳಿಬಂದಿವೆ.
ಒಡಿಸ್ಸಾ ಓಬ್ಲಾಸ್ಟ್ ಪ್ರಾಂತ್ಯದ ಹಿಜುಲಾ ಗ್ರಾಮದ ಮೇಲೆ ನಿನ್ನೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಇದರಿಂದ ಗ್ರಾಮದ ಬಹುಮುಖ್ಯ ಮೂಲಸೌಕರ್ಯ ನಾಶವಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಆಗಿಲ್ಲ.ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿರುವುದಾಗಿ ಸ್ಥಳೀಯ ಆಡಳಿತ ತಿಳಿಸಿದೆ.
ಈ ನಡುವೆ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ನಾಗರಿಕರ ಮೇಲೆ ಬಾಂಬ್ ಹಾಕುತ್ತಿದ್ದಾರೆ. ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಜನವಸತಿ ಪ್ರದೇಶಗಳನ್ನು ನಾಶಪಡಿಸುತ್ತಿದ್ದಾರೆ. ನಮ್ಮ ರಕ್ಷಣೆಗಾಗಿ ನಾವು ಕೂಡ ಪ್ರತಿದಾಳಿ ಮಾಡಬೇಕಿದೆ. ಆದರೆ ರಷ್ಯಾ ಪಡೆಗಳಿಗೆ ನಾಗರಿಕರನ್ನು ಕೊಲ್ಲಲು ಆದೇಶ ನೀಡಿರುವವರು ಯಾರು? ಈ ರೀತಿಯ ದುರಹಂಕಾರದ ನಡವಳಿಕೆಗೆ ಜಗತ್ತು ಮೌನ ಪ್ರತಿಕ್ರಿಯೆ ನೀಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ ಮರಿಯಪೆÇಲ್ ಪ್ರದೇಶದಿಂದ 2ನೇ ಹಂತದಲ್ಲಿ ನಾಗರಿಕರ ಸ್ಥಳಾಂತರ ಪ್ರಕ್ರಿಯೆ ಇಂದು ನಡೆಯುತ್ತಿದೆ. ಹಲವಾರು ಬಸ್ಗಳನ್ನು ಸಜ್ಜುಗೊಳಿಸಲಾಗಿದ್ದು, ಕದನ ವಿರಾಮ ಘೋಷಣೆಯಾದ ಬಳಿಕ ಸ್ಥಳಾಂತರ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದು ಹೇಳಿದೆ.
ಉಕ್ರೇನ್ ರಷ್ಯಾದ ಮೇಲೆ ತೀವ್ರ ನಿಗಾ ಇಟ್ಟಿರುವ ಅಮೆರಿಕ, ರಷ್ಯಾ ಈವರೆಗೂ ಉಕ್ರೇನ್ ಮೇಲೆ 600ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ. ತನ ಶಸ್ತ್ರಸ್ತ ಪಡೆಯ ಶೇ.95ರಷ್ಟನ್ನು ಉಕ್ರೇನ್ ಯುದ್ಧಕ್ಕಾಗಿ ಬಳಕೆ ಮಾಡಿದೆ ಎಂದು ಹೇಳಿದೆ.
ಆಘಾತಕಾರಿ ಮಾಹಿತಿಯೊಂದನ್ನು ಅಮೆರಿಕ ಹೊರ ಹಾಕಿದ್ದು, ನಿರಂತರ ಯುದ್ಧದಲ್ಲಿ ಪರಿಣಿತಿ ಪಡೆದಿರುವ ಸಿರಿಯನ್ ಯೋಧರನ್ನು ರಷ್ಯಾ ಉಕ್ರೇನ್ನ ಮೇಲಿನ ಯುದ್ಧಕ್ಕೆ ಬಳಕೆ ಮಾಡುತ್ತಿದೆ. ಕ್ಯೀವ್ ಮತ್ತು ಇತರ ನಗರಗಳನ್ನು ವಶಪಡಿಸಿಕೊಳ್ಳಲು ಈ ಯೋಧರನ್ನು ಬಳಸಲಾಗಿದ್ದು, ಅಕೃತವಾಗಿ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಯುದ್ಧ ಮಾಡುತ್ತಿದ್ದವರಲ್ಲಿ ಕೆಲವು ಸಿರಿಯಾ ಮೂಲದವರು ಎಂದು ಗುರುತಿಸಿರುವುದಾಗಿ ಅಮೆರಿಕ ತಿಳಿಸಿದೆ.
ರಾಜಧಾನಿ ಕೀವ್ನಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಕರ್ಕೀವ್ ಪ್ರಾಂತ್ಯದ ರೈಲ್ವೆ ನಿಲ್ದಾಣದಲ್ಲಿ ಸುಮಾರು 1 ಲಕ್ಷಕೂ ಅಕ ಮಂದಿ ವಲಸೆ ಹೋಗುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ನೂಕುನುಗ್ಗಲು, ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿ ಮತ್ತಷ್ಟು ಆತಂಕಕಾರಿ ಪರಿಸ್ಥಿತಿಗಳು ನಿರ್ಮಾಣವಾಗಿವೆ. ಹೊರುಚ್ ನಗರದ ಮೇಲೆ ಶೆಲ್ ದಾಳಿ ನಡೆದಿದ್ದು, ಎರಡು ಜನವಸತಿ ಕಟ್ಟಡಗಳು ಧ್ವಂಸಗೊಂಡಿವೆ. ಜೊತೆಗೆ ಉದ್ಯೋಗ ಕೇಂದ್ರವು ಹಾನಿಗೊಳಗಾಗಿವೆ.
ಈ ನಡುವೆ ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿ ರಷ್ಯಾದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. 56 ನಗರಗಳಲ್ಲಿ ಯುದ್ಧ ವಿರೋ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶಗೊಂಡು ಪ್ರತಿಭಟನೆ ವ್ಯಕ್ತಪಡಿಸಿದ್ದು, ಅವರಲ್ಲಿ 34 ಮಂದಿ ಮುಖಂಡರನ್ನು ಬಂಸಲಾಗಿದೆ.
ರಷ್ಯಾದ ದಾಳಿಯನ್ನು ವಿರೋಸಿ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯದ ಮೆಟ್ಟಿಲು ಹತ್ತಿರುವ ಕೆಲವರು ಉಕ್ರೇನ್ ದಾಳಿ ನಿಲ್ಲಿಸುವಂತೆ ತುರ್ತು ಆದೇಶ ನೀಡಬೇಕೆಂದು ಮನವಿ ಮಾಡಿದೆ. ಹೊಸ ಬೆಳವಣಿಗೆಯಲ್ಲಿ ಇರ್ಪಿನ್ ನಗರಗಳ ಮೇಲೂ ಭೀಕರ ದಾಳಿಯಾಗುತ್ತಿದ್ದು, ಅಲ್ಲಿನ ಕುಟುಂಬಗಳು, ಮಕ್ಕಳೊಂದಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ನ್ಯಾಟೋ ಪಡೆಗಳು ಈವರೆಗೂ ನೇರವಾಗಿ ಉಕ್ರೇನ್ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಆದರೆ ಅಂತಾರಾಷ್ಟ್ರೀಯ ಸಮುದಾಯ ರಷ್ಯಾ ದಾಳಿಯ ಬಗ್ಗೆ ಕಳವಳ ಮುಂದುವರೆಸಿದೆ.
ಅಂತಾರಾಷ್ಟ್ರೀಯ ಸಮುದಾಯ ಹಂತ ಹಂತವಾಗಿ ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ಹೇರುತ್ತಿದೆ. ಕೆಪಿಎಂಜಿ ಮತ್ತು ಪಿಡಬ್ಲುಜಿ ವಾಣಿಜ್ಯ ಸಂಸ್ಥೆಗಳು ರಷ್ಯಾ ಮತ್ತು ಬೆಲರೋಸ್ ಪ್ರದೇಶಗಳಲ್ಲಿ ತಮ್ಮ ವಹಿವಾಟು ಸ್ಥಗಿತಗೊಳಿಸಿವೆ.
ಅಮೆರಿಕ ರಷ್ಯಾದಿಂದ ಇಂಧನ ಹಾಗೂ ಇತರ ಶಕ್ತಿ ಮೂಲಗಳ ಆಮದನ್ನು ನಿಷೇಸುವ ಕರಡು ಮಸೂದೆಯನ್ನು ತಯಾರಿಸಿದೆ.
ಯುದ್ಧ ಪ್ರಮುಖ ಘಟ್ಟ ತಲುಪಿದ್ದು, ಒಂದು ವೇಳೆ ಅಧ್ಯಕ್ಷ ಜೆಲೆನ್ಸ್ಕಿ ಮೃತಪಟ್ಟರೆ ಸರ್ಕಾರವನ್ನು ಮುಂದುವರೆಸಲು ರಷ್ಯಾ ಸಿದ್ದವಿದೆ ಎಂಬ ಕಾರ್ಯದರ್ಶಿ ಹೇಳಿಕೆ ನೀಡಿರುವ ವರದಿಯನ್ನು ರಷ್ಯಾ ಸರ್ಕಾರದ ಅಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.
