ರಷ್ಯಾ – ಬೆಲಾರಸ್ ಶೂಟರ್ ಗಳ ನಿಷೇಧ

Social Share

ಮ್ಯೂನಿಚ್, ಮಾ 2- ಜಾಗತಿಕ ಆಕ್ರೋಶಕ್ಕೆ ಕಾರಣವಾಗಿರುವ ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ರಷ್ಯಾ ಮತ್ತು ಬೆಲಾರಸ್ ಶೂಟರ್‍ಗಳನ್ನು ನಿಷೇಧಿಸಿದೆ.ಈಜಿಪ್‍ನ ಕೈರೋದಲ್ಲಿ ನಡೆಯುತ್ತಿರುವ ವಿಶ್ವಕಪ್‍ನಲ್ಲಿ ರಷ್ಯಾದ ಶೂಟರ್‍ಗಳು ಸ್ರ್ಪಸುತ್ತಿದೆ ನಿಷೇಧಿಸಿದ ಹೇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಕಾರ್ಯಕಾರಿ ಮಂಡಳಿಯ ನಿರ್ಧಾರವನ್ನು ಅನುಸರಿಸಿ ಮತ್ತು ಐಒಸಿ ಅಧ್ಯಕ್ಷರೊಂದಿಗಿನ ಸಭೆಯ ನಂತರ, ಐಎಸïಎಸïಎಫ್‍ವು ರಷ್ಯಾ ಮತ್ತು ಬೆಲಾರಸ್‍ಅಥ್ಲೀಟ್‍ಗಳನ್ನು ಐಎಸïಎಸïಎಫ್ ಚಾಂಪಿಯನ್‍ಷಿಪ್‍ಗಳಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ ಎಂದು ನಿರ್ಧರಿಸಿದೆ
ಈ ನಿರ್ಧಾರವು ಮಾರ್ಚ್ 1, 2022 ರಂದು ಅ,ಸ,16.00 ಗಂಟೆ ಜಾರಿಗೆ ಬಂದಿದೆ ಮತ್ತು ಮುಂದಿನ ಸೂಚನೆಯವರೆಗೂ ಮಾನ್ಯವಾಗಿರುತ್ತದೆ ಇನ್ನು ಮುಂದೆ ಸ್ಪರ್ಧೆಗಳು ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಗಿದೆ.
ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಂದ ರಷ್ಯಾದ ಕ್ರೀಡಾಪಟುಗಳು ಮತ್ತು ಅಧಿಕಾರಿಗಳನ್ನು ಹೊರಗಿಡಲು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ನಿರ್ದೇಶನಕ್ಕೆ ಅನುಗುಣವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಜಾಗತಿಕ ಕ್ರೀಡಾ ಸ್ಪರ್ಧೆಗಳ ಸಮಗ್ರತೆಯನ್ನು ರಕ್ಷಿಸಲು ಮತ್ತು ಸುರಕ್ಷತೆಗಾಗಿ ಈ ಕ್ರಮದ ಅಗತ್ಯವಿದೆ ಎಂದು ಹೇಳಿದೆ.
ಆಗಸ್ಟ್‍ನಲ್ಲಿ ಮಾಸ್ಕೋದಲ್ಲಿ ನಡೆಯಬೇಕಿದ್ದ 2022 ಯುರೋಪಿಯನ್ ಶೂಟಿಂಗ್ ಚಾಂಪಿಯನ್‍ಷಿಪ್ ಹಕ್ಕುನ್ನು ರಷ್ಯಾದಿಂದ ಈಗಾಗಲೇ ಕಸಿದುಕೊಳ್ಳಲಾಗಿದೆ ಅನಿಶ್ಚಿತತೆ ನಡುವೆ ಸ್ಪರ್ಧೆ 2023 ಆಗಸ್ಟ್ ಗೆ ಮುಂದೂಡಲಾಗಿದೆ.

Articles You Might Like

Share This Article