ಸೆರೆಸಿಕ್ಕ ರಷ್ಯನ್ ಯೋಧರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿರುವ ಉಕ್ರೇನ್

Social Share

ಕ್ಯಿವ್,ಫೆ.27-ಯುದ್ಧಪೀಡಿತ ಉಕ್ರೇನ್‍ನಲ್ಲಿ ಹಲವು ಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿದ್ದು, ಕರುಳು ಹಿಂಡುವಂತಿವೆ.
ಸಂಘರ್ಷದಲ್ಲಿ ಸೆರೆ ಹಿಡಿಯಲಾದ ರಷ್ಯನ್ ಯೋಧರನ್ನು ಉಕ್ರೇನ್ ಸೇನೆ ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದು ಅವರಿಗೆ ಅಗತ್ಯ ಚಿಕಿತ್ಸೆ, ಊಟೋಪಚಾರಗಳನ್ನು ನೀಡಿ ಉಪಚರಿಸುತ್ತಿದೆ.
ಯುದ್ಧ ಕೈದಿಗಳನ್ನು ಹಿಂಸಿಸುವುದು ನಮ್ಮ ಧರ್ಮವಲ್ಲ. ಅದು ರಷ್ಯಾದ ವಿಕೃತಿ ಎಂದು ಬಹಳಷ್ಟು ಮಂದಿ ತಿರುಗೇಟು ನೀಡಿದ್ದಾರೆ.ಸುಮಾರು 2 ಲಕ್ಷ ಯೋಧರ ಸೇನೆ ಹೊಂದಿರುವ ಉಕ್ರೇನ್ 8 ಲಕ್ಷಕ್ಕೂ ಅಕ ಜನರಿರುವ ರಷ್ಯನ್ ಪಡೆಯನ್ನು ಎದುರಿಸಲು ಆತ್ಮವಿಶ್ವಾಸದಿಂದ ಹೋರಾಟ ನಡೆಸುತ್ತಿದೆ.
ಈ ನಡುವೆ ಆಸಕ್ತರು ಮತ್ತು ಅರ್ಹರು ಸೇನೆಗೆ ಸೇರುವಂತೆ ಉಕ್ರೇನ್ ಅಧ್ಯಕ್ಷ ಕರೆ ನೀಡಿದ್ದರು. 80 ವರ್ಷದ ವಯೋವೃದ್ಧರೊಬ್ಬರು ಎರಡು ಟೀಶರ್ಟ್ ಮತ್ತು ಪ್ಯಾಂಟ್‍ಗಳು, ಟೂತ್‍ಬ್ರೆಶ್ ಮತ್ತು ಊಟಕ್ಕಾಗಿ ಸ್ಯಾಂಡ್‍ವಿಚ್‍ಗಳನ್ನು ಹಾಕಿಕೊಂಡು ಸೇನಾ ಶಿಬಿರಕ್ಕೆ ಬಂದಿದ್ದರು. ನಾನು ನನ್ನ ಮೊಮ್ಮಕ್ಕಳಿಗಾಗಿ ಹೋರಾಡಲು ಬಯಸುತ್ತೇನೆ. ಅವಕಾಶ ನೀಡಿ ಎಂದು ಕೇಳುತ್ತಿರುವುದು ಭಾವನಾತ್ಮಕವಾಗಿದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಹಳಷ್ಟು ಯುವ ಸಮುದಾಯ ಸೇನೆಗೆ ಸೇರಿ ರಷ್ಯಾಕ್ಕೆ ತಿರುಗೇಟು ನೀಡಲು ಎದುರು ನಿಂತಿದೆ. ಕೆಲವರು ಯುದ್ಧದಿಂದ ಭಯಭೀತರಾಗಿ ಪಲಾಯನಗೈದಿದ್ದರೆ, ಬಹಳಷ್ಟು ಮಂದಿ ನಾವೇಕೆ ದೇಶ ಬಿಡಬೇಕು, ಇದು ನಮ್ಮ ನೆಲ. ಇಲ್ಲಿ ಉಳಿಯುವುದು ಧೈರ್ಯದ ಪ್ರಶ್ನೆಯಲ್ಲ. ನಮ್ಮ ಬಾಧ್ಯತೆ ಎಂದು ಹೇಳುತ್ತಿದ್ದಾರೆ.
ಯುದ್ದಕ್ಕೆ ಹೋಗುವಾಗ ಕಾರು ಚಲಾಯಿಸುತ್ತಲೇ ಯೋಧನೊಬ್ಬ ರಣಭೂಮಿಯಲ್ಲಿ ನಾನು ಮೃತಪಟ್ಟರೆ ಅಳಬೇಡಿ ಎಂದು ರಾಗ ಸಂಯೋಜನೆಯೊಂದಿಗೆ ಹಾಡಿರುವುದು ಉಕ್ರೇನ್‍ನ ಪರಿಸ್ಥಿತಿಯನ್ನು ಅನಾವರಣಗೊಳಿಸಿದೆ.
ಹಲವು ಸೇನಾ ಶಿಬಿರ ಮತ್ತು ಆಸ್ಪತ್ರೆಗಳಲ್ಲಿ ಶತ್ರು ಸೇನೆಯ ಯೋಧರಿಗೆ ಚಿಕಿತ್ಸೆ ನೀಡಿ ಸಲಹಲಾಗುತ್ತಿದೆ. ಕಣ್ಣೆದುರಿಗೆ ಬೃಹತ್ ಸೋಟಗಳು ಸಂಭವಿಸುತ್ತಿದ್ದು, ಅಣಬೆಯಾಕಾರದ ಅಗ್ನಿಜ್ವಾಲೆಗಳು ಭುಗಿಲೇಳುತ್ತಿವೆ. ಆದರೂ ಬಹಳಷು ಮಂದಿ ಹೆದರದೆ ಉಕ್ರೇನ್‍ನ ದೇಶ ಭಕ್ತಿಯನ್ನು ಪ್ರದರ್ಶಿಸುವ ಮೂಲಕ ಅಧ್ಯಕ್ಷರಿಗೆ ಸಾಥ್ ನೀಡಿದ್ದಾರೆ.
ಸೆರೆ ಸಿಕ್ಕ ರಷ್ಯಾನ್ ಸೇನಾಕಾರಿಗೆ ಸಿಗರೇಟು ನೀಡಿ ಸ್ನೇಹದ ಮಾತುಗಳನ್ನಾಡುತ್ತಲೇ ಉಕ್ರೇನ್ ಯೋಧರು ಆತನ ತಲೆ ಮೇಲೆ ಮೊಟಕಿದ್ದಾರೆ. ರಾಜಧಾನಿ ಕ್ಯಿವ್‍ನಲ್ಲಿ ಶಸ್ತ್ರಸಜ್ಜಿತರಾಗಿ ತಿರುಗಾಡುತ್ತಿದ್ದ ಯೋಧರೊಂದಿಗೆ ಬಾಲಕಿಯರು ವಾಗ್ವಾದಕ್ಕಿಳಿದಿದ್ದು, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಂಖಾನುಪುಂಖವಾಗಿ ಯುದ್ದಭೂಮಿಯ ಹಲವು ಮುಖಗಳನ್ನು ಪರಿಚಯಿಸುವ ವಿಡಿಯೋಗಳು, ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುತ್ತಿವೆ.
ಮಹಿಳೆಯರು ಕೂಡ ಬಂದೂಕು ಕೈಗೆತ್ತಿಕೊಂಡು ದೇಶ ರಕ್ಷಣೆಗೆ ಪಣತೊಟ್ಟಿದ್ದಾರೆ. ಯುದ್ಧ ಭೂಮಿಯಲ್ಲಿ ಯೋಧರು ಉಕ್ರೇನ್ ವಿಶ್ವದ ಪ್ರೀತಿ ಗಳಿಸಿದೆ. ನಾವು ಜಯಿಸುತ್ತೇವೆ ಎಂಬ ವಿಶ್ವಾಸದ ಹಾಡು ಹಾಡುತ್ತಿದ್ದಾರೆ. ಎಲ್ಲದರ ಹೊರತಾಗಿ ಭಯಭೀತರಾಗಿರುವ ನಾಗರಿಕರು ಅಡಗುತಾಣಗಳಲ್ಲಿ ಜೀವನ ಕಳೆಯುತ್ತಿದ್ದಾರೆ.

Articles You Might Like

Share This Article