ಕ್ಯಿವ್,ಫೆ.27-ರಷ್ಯಾದ ಮೂರು ಸಾವಿರ ಸೈನಿಕರನ್ನು ಹತ್ಯೆ ಮಾಡಿ 200 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದಾಗ ಉಕ್ರೇನ್ ಹೇಳಿದೆ.ಉಕ್ರೇನ್ ಸರ್ಕಾರ ಪ್ರಕಟಿಸಿರುವ ಮಾಹಿತಿ ಪ್ರಕಾರ ಈವರೆಗೂ 540 ಪದಾತಿಸೈನ್ಯದ ಯುದ್ದ ವಾಹನಗಳು, 16 ವಿಮಾನಗಳು, 18 ಹೆಲಿಕಾಪ್ಟರ್‍ಗಳು, 102 ಟ್ಯಾಂಕರ್‍ಗಳು, 504 ಶಸ್ತ್ರಸಜ್ಜಿತರನ್ನು ಸಾಗಿಸುವ ವಾಹನಗಳನ್ನು, ಒಂದು ಬಂಕರ್, 20 ಶಸ್ತ್ರಸಜ್ಜಿತ ಕಾರುಗಳನ್ನು ಧ್ವಂಸಗೊಳಿಸಿರುವುದಾಗಿ ಉಕ್ರೇನ್ ಪಡೆ ಹೇಳಿಕೊಂಡಿದೆ.
ಸಂಘರ್ಷ ಮುಂದುವರೆದಿದ್ದು, ರಷ್ಯಾ ಪಡೆಗಳು ಉಕ್ರೇನ್‍ನ 2ನೇ ನಗರ ಖಾಕ್ರ್ಯೀವ್‍ಗೆ ಪ್ರವೇಶ ಮಾಡಿವೆ. ರಷ್ಯಾ ಉ್ರಕೇನ್‍ನ ದಕ್ಷಿಣ ಹಾಗೂ ಆಗ್ನೇಯ ಭಾಗದ ಎರಡು ಬೃಹತ್ ನಗರಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದೆ.
ಆದರೆ ರಷ್ಯಾದ ಹೇಳಿಕೆಯ ಬಗ್ಗೆ ಹಲವು ಅನುಮಾನಗಳು ಸೃಷ್ಟಿಯಾಗಿವೆ. ಉಕ್ರೇನ್ ಇಂದು ಬೆಳಗ್ಗೆ ನೀಡಿರುವ ಮಾಹಿತಿ ಪ್ರಕಾರ ದೇಶದ ಯಾವುದೇ ಪ್ರದೇಶ ಶತ್ರು ಸೇನೆಯ ಕೈವಶವಾಗಿಲ್ಲ. ಯುದ್ಧ ಮುಂದುವರೆದಿದೆ. ಕೆಲವು ಭಾಗಗಳಲ್ಲಿ ದಾಳಿಗಳು ನಡೆಯುತ್ತಿವೆ. ಉಕ್ರೇನ್ ಯೋಧರು ಪ್ರತಿರೋಧವೊಡ್ಡುತ್ತಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ರಷ್ಯಾ ನಡೆಸುತ್ತಿರುವ ಉಕ್ರೇನ್ ಮೇಲಿನ ದಾಳಿಗೆ ಜಗತ್ತಿನ ವಿವಿಧ ಭಾಗಗಳಲ್ಲಿ ಉಕ್ರೇನ್ ಪರವಾದ ಪ್ರತಿಭಟನೆಗಳು ತೀವ್ರಗೊಂಡಿವೆ. ಆಯಾ ದೇಶಗಳ ಪ್ರಮುಖರೇ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಇದು ನಮ್ಮ ನೈತಿಕ ಬಲವನ್ನು ಹೆಚ್ಚಿಸಿದೆ ಎಂದು ಉಕ್ರೇನ್ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.
