ಯುರೋಪಿಯನ್ ದೇಶಗಳಿಗೆ ಅನಿಲ ಪೂರೈಕೆ ಸ್ಥಗಿತ : ರಷ್ಯಾ ಘೋಷಣೆ

Social Share

ಮಾಸ್ಕೋ, ಆ.20- ರಷ್ಯಾದ ಪ್ರಮುಖ ನೈಸರ್ಗಿಕ ಅನಿಲ ಪೈಪ್‍ಲೈನ್ ತಿಂಗಳ ಅಂತ್ಯದಲ್ಲಿ ಮೂರು ದಿನಗಳ ನಿರ್ವಹಣೆಗಾಗಿ ಸ್ಥಗಿತಗೊಳ್ಳಲಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿ ಗಾಜ್ಪ್ರೊಮ್ ಘೋಷಿಸಿದ್ದು ಇದರಿಂದಾಗಿ ಜರ್ಮನಿ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳ ಮೇಲೆ ಒತ್ತಡ ಹೆಚ್ಚದೆ.

ವಿದ್ಯುತ್ ಉತ್ಪಾದಿಸಲು, ಮನೆಗಳನ್ನು ಬಿಸಿ ಹವೆಯಲ್ಲಿಡಲು ಮತ್ತಿತರ ಕೈಗಾರಿಕೆ ವಲಯ ನಿರ್ವಹಣೆಗೆ ಅನಿಲ ಬಹು ಅವಶ್ಯವಾಗಿದ್ದು ಬದಲಿ ವ್ಯವಸ್ಥೆ ಬಗ್ಗೆ ಚಿಂತೆ ಆವರಿಸಿದೆ. ಪೈಪ್‍ಲೈನ್‍ನಲ್ಲಿ ತಾಂತ್ರಿಕ ದೋಷ ಸರಿಪಡಿಸಲು ಈ ಕ್ರಮ ಎಂದು ರಷ್ಯಾ ಹೇಳಿದೆ ಆದರೆ ಜರ್ಮನಿಯು ಇದು ರಾಜಕೀಯ ದುಷ್ಟ ಕ್ರಮವೆಂದು ಹೇಳಿದೆ.

ಗಾಜ್ಪ್ರೊಮ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 2 ರವರೆಗೆ ಪೂರೈಕೆ ಸ್ಥಗಿತಗೊಳಿಸಲಿದೆ ಪಶ್ಚಿಮ ರಷ್ಯಾ ಮತ್ತು ಜರ್ಮನಿಯನ್ನು ಸಂಪರ್ಕಿಸುವ ನಾರ್ಡ್ ಸ್ಟ್ರೀಮ್ 1 ಪೈಪ್‍ಲೈನ್ ಉದ್ದಕ್ಕೂ ಪ್ರಮುಖ ನಿಲ್ದಾಣ ಕೇದ್ರಗಳಲ್ಲಿ ನಿರ್ವಹಣೆ ದುರಸ್ತಿ ಕಾರ್ಯ ನಡೆಸಲಿದೆ.

ಮೂಲಗಳ ಪ್ರಕಾರ ರಷ್ಯಾ ಹತ್ತಾರು ಯುರೋಪಿಯನ್ ಯೂನಿಯನ್ ದೇಶಗಳಿಗೆ ನೈಸರ್ಗಿಕ ಅನಿಲ ಹರಿವನ್ನು ಕಡಿಮೆಗೊಳಿಸಿದೆ ಅಥವಾ ಕಡಿತಗೊಳಿಸಿದೆ, ಇದರಿಂದ ದೇಶದಲ್ಲಿ ಹಣದುಬ್ಬರ ಏರಲಿದು ಆರ್ಥಿಕ ಹಿಂಜರಿತದ ಅಪಾಯವನ್ನು ಹೆಚ್ಚಿಸಿದೆ.

ನಾವು ಅನಿಲ ಮಾರುಕಟ್ಟೆಗಳನ್ನು ನಿಯಂತ್ರಿಸುವ ಫೆಡರಲ್ ನೆಟ್ವರ್ಕ್ ಏಜೆನ್ಸಿಯೊಂದಿಗೆ ನಿಕಟ ಸಹಕಾರದೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಜರ್ಮನಿಯ ಆರ್ಥಿಕ ಸಚಿವಾಲಯವು ಹೇಳಿದೆ.

ಚಳಿಯ ವಾತಾವರ್ಣದ ನಡುವೆ ರಷ್ಯಾ ಅನಿಲವನ್ನು ಸಂಪೂರ್ಣವಾಗಿ ಕಡಿತಗೊಳಿಸಬಹುದೆಂಬ ಹೆಚ್ಚುನ ಭಯವನ್ನು ಹುಟ್ಟುಹಾಕುತ್ತದೆ. ಒಮ್ಮೆ ಕೆಲಸ ಪೂರ್ಣಗೊಂಡ ನಂತರ, ಅನಿಲದ ಹರಿವು ಪುನರಾರಂಭಗೊಳ್ಳುತ್ತದೆ ಎಂದು ಗಾಜ್ಪ್ರೊಮ್ ಭರವಸೆ ನೀಡಿದೆ.

Articles You Might Like

Share This Article