ನಾನು ಸ್ಥಳೀಯ, ನನಗೆ ಬಿಜೆಪಿ ಟಿಕೆಟ್ ಕೊಡಿ : ಆರ್.ವಿ.ಭೂತಪ್ಪ

Social Share

ಬೆಂಗಳೂರು,ಫೆ.16: ನಾನು ಸುಮಾರು ವರ್ಷಗಳಿಂದ ಮಾಲೂರು ಜನರ ಸೇವೆಯಲ್ಲಿ ತೊಡಗಿದ್ದು, ಮುಖ್ಯವಾಗಿ ನಾನು ಸ್ಥಳೀಯನಾಗಿದ್ದು ಈ ಬಾರಿ ಬಿಜೆಪಿ ಪಕ್ಷದಿಂದ ವಿಧಾನಸಭಾ ಟಿಕೆಟ್ ಕೊಡಬೇಕೆಂದು ಆಕಾಂಕ್ಷಿ ಆರ್ ವಿ ಭೂತಪ್ಪ ಅವರು ವರಿಷ್ಠರಲ್ಲಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಮೂಲತಃ ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮದವನಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಳ್ವಿಕೆಯನ್ನು ಮತ್ತು ದೇಶ ನಾಡಿನ ಬಗ್ಗೆ ಅವರಿಗಿರುವ ಗೌರವ, ಮುಂದಾಲೋಚನೆ, ಅಭಿವೃದ್ಧಿ ಮಂತ್ರ ಇವೆಲ್ಲವನ್ನು ನೋಡಿ ನಾನು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದಿದ್ದೇನೆ.

ಕ್ಷೇತ್ರದ ಜನರ ನಾಡಿಮಿಡಿತ ನನಗೆ ಗೊತ್ತಿದೆ, ಅಲ್ಲಿನ ಸಮಸ್ಯೆಗಳೇನು ಅವುಗಳಿಗೆ ಯಾವ ರೀತಿ ಪರಿಹಾರ ಕೊಡಬೇಕೆಂಬುದನ್ನ ನಾನು ಈಗಾಗಲೇ ಯೋಚಿಸಿದ್ದೀನಿ. ಈಗಾಗಲೇ ಬಿಜೆಪಿ ಪಕ್ಷದಿಂದ ನಾಲ್ಕು ಜನರು ಆಕಾಂಕ್ಷಿಗಳಾಗಿದ್ದಾರೆ ಆದರೆ ಅವರು ಹೊರ ಕ್ಷೇತ್ರಗಳಿಂದ ಬಂದವರು. ನನಗೆ ಪಕ್ಷ ಟಿಕೆಟ್ ಕೊಟ್ಟರೆ ನೂರಕ್ಕೆ ನೂರರಷ್ಟು ಗೆದ್ದು ಬರುತ್ತೇನೆ ಎಂದರು.

ಮಾಲೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ರಸ್ತೆ, ಆಸ್ಪತ್ರೆ, ಸಾರಿಗೆ ಯಾವುದು ಸರಿ ಇಲ್ಲ ಈಗಿನ ಶಾಸಕರು ಅಭಿವೃದ್ಧಿಯ ಕಡೆ ಗಮನಹರಿಸದೆ ಅಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಾನು ಬಿಜೆಪಿ ಪಕ್ಷದಿಂದ ಗೆದ್ದು ಬಂದಿದ್ದೇ ಆದಲ್ಲಿ ನೀರಾವರಿ, ರೈತರ ಸಮಸ್ಯೆಗಳು ಸೇರಿದಂತೆ ಎಲ್ಲವನ್ನು ಬಗೆಹರಿಸುತ್ತೇನೆ ಎಂದು ಆಶ್ವಾಸನೆ ಕೊಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನಾರಾಯಣ ಸಿಂಗ್, ಸೋಮಶೇಖರ್, ಆರ್. ಸಿ ವೆಂಕಟ ಗಿರಿಯಪ್ಪ, ಆರ್ ಎಂ ಚಂದ್ರೇಗೌಡ, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

#RVBhootappa, #BJPTicket, #Malur #BJP, #AssemblyElection2023,

Articles You Might Like

Share This Article