ಮೋದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ : ಎಸ್.ಎಲ್.aಭೈರಪ್ಪ

Social Share

ಮೈಸೂರು, ಜ.26- ಪದ್ಮಭೂಷಣ ಪ್ರಶಸ್ತಿ ನೀಡಿರುವುದಕ್ಕೆ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಾಹಿತಿ ಎಸ್.ಎಲ್. ಭೈರಪ್ಪ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನನಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಮೋದಿ ಸರ್ಕಾರವನ್ನು ನಾನು ಹೊಗಳುತ್ತಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ. ಯಾವುದೇ ಪಕ್ಷವನ್ನು ಓಲೈಸಲು ಈ ಮಾತು ಹೇಳುತ್ತಿಲ್ಲ. ದೇಶದ ಪ್ರಧಾನಿಯಾಗಿ ಮೋದಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಹಾಗಾಗಿ ಮೋದಿ ಅವರ ಸೇವೆ ಈ ದೇಶಕ್ಕೆ ಬೇಕಿದೆ. ಮೋದಿಯಂತಹ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಇದೇ ವೇಳೆ ಭೈರಪ್ಪ ತಿಳಿಸಿದರು.

ಗಣರಾಜ್ಯೋತ್ಸವ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಕರ್ನಾಟಕ ದಾಖಲೆ

ಪದ್ಮಭೂಷಣ ಕೊಟ್ಟಿರುವುದು ಸಂತೋಷವಾಗಿದೆ. ಆದರೂ ನನ್ನ ಅನೇಕ ಪುಸ್ತಕಗಳನ್ನು ಓದಿ ಜನ ಸಂತೋಷಪಟ್ಟಿದ್ದಾರೆ ಅದು ಎಲ್ಲದಕ್ಕಿಂತ ಮಿಗಿಲಾದ ಅವಾರ್ಡ್ ಎಂದು ಹೇಳಿದರು. ಈಗ ನನಗೆ 92 ವರ್ಷ. ನಾನು ಸತ್ತ ನಂತರವೂ ನನ್ನ ಪುಸ್ತಕಗಳ ಬಗ್ಗೆ ಅಷ್ಟೇ ಪ್ರೀತಿ ಇರುತ್ತದೆಯೇ ಎಂಬುದು ನನ್ನ ಪ್ರಶ್ನೆ.

ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೆವೆ : ಅಮೆರಿಕ

ಕುಮಾರವ್ಯಾಸನ ಮಹಾಭಾರತ ಪುಸ್ತಕವನ್ನು ಪ್ರತಿ ಹಳ್ಳಿಗಳಲ್ಲಿಯೂ ಓದಿಸಿ ಹೇಳುತ್ತಾರೆ, ಆ ಪುಸ್ತಕದಲ್ಲಿ ಅಂತಹ ಶಕ್ತಿ ಇದೆ.ಅದೇ ರೀತಿ ನನ್ನ ಬರವಣಿಗೆಯಲ್ಲೂ ಆ ಶಕ್ತಿ ಇದೆಯೆ ಎಂದು ತಿಳಿದುಕೊಳ್ಳಲು ನಾನೂ ಇರಲ್ಲ,ನೀವೂ ಇರಲ್ಲ ಎಂದು ನಗೆಯಾಡಿದರು.

#SLBhyrappa, #PadmaBhushan, #PMModi, #Government,

Articles You Might Like

Share This Article