ಬೆಂಗಳೂರು, ಡಿ.9- ನಟ ಅನಿರುದ್ಧ್ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸುವಲ್ಲಿ ಕಲಾ ಸಾಮ್ರಾಟ್ ಎಸ್.ನಾರಾಯಣ್ ಮುಂದಾಗಿದ್ದಾರೆ. ಜೊತೆ ಜೊತೆಯಲಿ ಯಶಸ್ವಿ ಧಾರಾವಾಹಿ ಚಿತ್ರೀಕರಣದ ಸಂದರ್ಭದಲ್ಲಿ ನಡೆದಿದ್ದ ಘಟನೆ ಹಿನ್ನೆಲೆಯಲ್ಲಿ ಅವರನ್ನು ಕಿರುತೆರೆ ನಿರ್ಮಾಪಕರ ಸಂಘದಿಂದ ಎರಡು ವರ್ಷಗಳ ಕಾಲ ನಿರ್ಬಂಧ ಹೇರಲಾಗಿತ್ತು.
ಇದರ ನಡುವೆ ಎಸ್.ನಾರಾಯಣ್ ಅವರು ಸೂರ್ಯವಂಶ ಎಂಬ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಅನಿರುದ್ಧ್ ಅವರಿಗೆ ಪ್ರಮುಖ ಪಾತ್ರ ನೀಡಿದ್ದಾರೆ. ಇದಕ್ಕೆ ಕಿರುತೆರೆ ನಿರ್ಮಾಪಕರು ಎಸ್.ನಾರಾಯಣ್ ಅವರ ಬಳಿ ಬಂದು ಅನಿರುದ್ಧ್ ಅವರ ಮೇಲೆ ಹೇರಿರುವ ನಿರ್ಬಂಧ ಕುರಿತಂತೆ ಮಾಹಿತಿ ನೀಡಿದರು.

ಈ ನಡುವೆ ನಾರಾಯಣ್ ಅವರು ಯಾವುದೇ ಸಮಸ್ಯೆ ಇದ್ದರೂ ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಈ ರೀತಿ ನಡೆದುಕೊಂಡರೆ ಉದ್ಯಮಕ್ಕೂ ಕೂಡ ಹಾನಿಯಾಗುತ್ತದೆ. ಗಿಡವಾಗಿದ್ದಾಗಲೇ ಅದನ್ನು ತೆಗೆದು ಹಾಕಬೇಕು.
ಮರವಾದರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂದು ಸಲಹೆ ನೀಡಿದರು. ಕೆಲಕಾಲ ಚರ್ಚೆ ನಡೆಸಿದ ನಂತರ ಕಿರುತೆರೆ ನಿರ್ಮಾಪಕರು ಕೂಡ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕುಕ್ಕರ್ ಕಿರಾತಕ ಶಾರಿಕ್ ಬೆಂಗಳೂರಿಗೆ
ಮೂಲಗಳ ಪ್ರಕಾರ, ಎಸ್.ನಾರಾಯಣ್ ಅವರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಲು ಸಕಲ ಪ್ರಯತ್ನ ನಡೆಸಿದ್ದು, ಅದು ಯಶಸ್ವಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಂಜೆ 5 ಗಂಟೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಎಲ್ಲ ವಿಷಯಗಳನ್ನೂ ಚರ್ಚಿಸಿ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ತಿಳಿದುಬಂದಿದೆ.