ಹೆಚ್ಡಿಕೆ ಹಾದಿಯಲ್ಲಿ ಸಚಿವ ಸಾ.ರಾ.ಮಹೇಶ್‍, ಹರದನಹಳ್ಳಿಯಲ್ಲಿ ಇಂದು ಗ್ರಾಮವಾಸ್ತವ್ಯ

Spread the love

Sa-Ra-Mahesh--01

ಕೆ.ಆರ್.ನಗರ, ಜು.6- ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‍ರವರು ಚುನಾವಣಾ ಸಂದರ್ಭದಲ್ಲಿ ಮತದಾರಿಗೆ ನೀಡಿದ ಭರವಸೆಯಂತೆ ಮೊದಲ ಬಾರಿಗೆ ತಾಲೂಕಿನ ಹರದನಹಳ್ಳಿಯಲ್ಲಿ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದು ಗ್ರಾಮ ವಾಸ್ತವ್ಯಕ್ಕೆ ತಾಲೂಕು ಆಡಳಿತ ಸಕಲ ಸಿದ್ದತೆ ಕೈಗೊಂಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಯಶಸ್ವಿ ಗ್ರಾಮ ವಾಸ್ತವ್ಯದಿಂದ ಪ್ರೇರಣೆ ಗೊಂಡ ಸಚಿವ ಸಾ.ರಾ.ಮಹೇಶ್, ತಮ್ಮ ನಾಯಕನಂತೆ ಆಡಳಿತ ನಡೆಸುತ್ತಿರುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹಿಡಿದ ಕೆಲಸವನ್ನು ಮಾಡುವ ಛಲವಾದಿ ರಾಜಕರಣಿಯಾಗಿರುವ ಸಾ.ರಾ.ಮಹೇಶ್ ಕೆ.ಆರ್.ನಗರ ತಾಲೂಕುನ್ನು ರಾಜ್ಯದಲ್ಲಿಯೆ ಮಾದರಿ ತಾಲೂಕನ್ನಾಗಿ ಮಾಡುವ ಜೊತೆಗೆ ಹಳ್ಳಿಯ ಜನರ ಮನಸ್ಸನ್ನು ಸಹ ಗೆದ್ದಿದ್ದಾರೆ. ಇಂದು ರಾತ್ರಿ ಹರದನಹಳ್ಳಿ ಗ್ರಾಮಕ್ಕೆ ಆಗಮಿಸಲಿರುವ ಸಚಿವರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡಲಿದ್ದು ನಾಳೆ ಬೆಳಗ್ಗೆ 9 ಗಂಟೆಗೆ ಜನಸ್ಪಂದನೆ ನಡೆಸಲಿರುವ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.

ಆದ್ದರಿಂದ ತಾಲೂಕಿನ ತಹಶೀಲ್ದಾರ್ ಮಹೇಶ್ ಚಂದ್ರ ಹರದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಚತೆ, ಬೀದಿ ದೀಪ ಸೇರಿದಂತೆ ಇತರ ಕಾಮಗಾರಿಗಳನ್ನು ಪೊರೈಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅವರು ಸಹ ಸ್ಥಳದಲ್ಲಿ ಮೊಕ್ಕಾಂ ಹೊಡಿದ್ದಾರೆ. ನೀವು ಅಧಿಕಾರಿಗಳಲ್ಲಿಗೆ ಹೋಗ ಬೇಡಿ ನಾನೆ ನಿಮ್ಮ ಮನೆ ಬಾಗಿಲಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆತಂದು ಕೆಲಸ ಮಾಡಿಸುತ್ತೇನೆ ಎಂಬ ಭರವಸೆ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡಿದ್ದಾರೆ.

ಈಗಾಗಲೇ ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ತಾ.ಪಂ. ಸಿಒ ಲಕ್ಷ್ಮಿಮೋಹನ್, ಸಿಡಿಪಿಒ ಸುಮಿತ್ರ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಮೇಶ್, ಟಿ.ಡಿ.ಪ್ರಸಾದ್, ಮಂಜುನಾಥ್, ಅರ್ಕೇಶ್‍ಮೂರ್ತಿ, ಸತ್ಯನಾರಾಯಣ, ಚಂದ್ರಶೇಖರ್, ತೋಟಗಾರಿಕಾ ಸಹಾಯಕ ನಿರ್ದೇಶಕ ಸಿ.ಚಂದ್ರು, ಸಹಾಯಕ ಕೃಷಿ ನಿರ್ದೇಶಕ ರಂಗರಾಜನ್ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin