ಕಾಮನಬಿಲ್ಲು ನಾಡಿನಲ್ಲಿ ಸರಣಿ ವಶಪಡಿಸಿಕೊಳ್ಳುವತ್ತ ವಿರಾಟ್ ಕೊಹ್ಲಿ ಪಡೆ ಚಿತ್ತ

Social Share

ಜೋಹಾನ್ಸ್‍ಬರ್ಗ್, ಜ.2- ಸೆಂಚುರಿಯನ್ ಪಿಚ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 113 ರನ್‍ಗಳಿಂದ ಗೆಲುವು ಸಾಸುವ ಮೂಲಕ ಕಾಮನಬಿಲ್ಲು ನಾಡೆಂದೇ ಬಿಂಬಿಸಿಕೊಂಡಿರುವ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಸುವರ್ಣಾಕಾಶವನ್ನು ಕೊಹ್ಲಿ ಸೃಷ್ಟಿಸಿಕೊಂಡಿದ್ದಾರೆ.
ತಮ್ಮ ಬ್ಯಾಟಿಂಗ್‍ನಿಂದ ರನ್‍ಗಳ ಸುರಿಮಳೆಯನ್ನು ಸುರಿಸಲು ಸತತ ವಿಫಲರಾಗುತ್ತಿರುವ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಿಂದ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದು ಈಗ ಜೋಹಾನ್ಸ್‍ಬರ್ಗ್‍ನ ವೆಂಡರಸ್ ಪಿಚ್‍ನಲ್ಲಿ 2 ಟೆಸ್ಟ್ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆದ್ದ ಮೊದಲ ಭಾರತ ಹಾಗೂ ಏಷ್ಯಾನ್ ನಾಯಕ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಲು ಹೊರಟಿದ್ದಾರೆ.
ಜೋಹಾನ್ಸ್‍ಬರ್ಗ್ ಪಿಚ್ ಭಾರತ ತಂಡಕ್ಕೆ ಅದೃಷ್ಟದ ಮೈದಾನವೆಂದೇ ಬಿಂಬಿಸಿ ಕೊಂಡಿದ್ದು ಇಲ್ಲಿ ಆಡಿರುವ 5 ಪಂದ್ಯಗಳ ಪೈಕಿ ಭಾರತ 2ರಲ್ಲಿ ಗೆಲುವು ಸಾಸಿ, 3ರಲ್ಲಿ ಸಮಬಲ ಸಾಸಿರುವುದರಿಂದ ನಾಳೆಯ ಪಂದ್ಯದಲ್ಲೂ ಭಾರತವೇ ಗೆಲ್ಲುವ ಫೆವರೇಟ್ ತಂಡವಾಗಿದೆ. ನಾಳೆಯ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ಮುರಿಯುವ ಅವಕಾಶಗಳು ದಟ್ಟವಾಗಿವೆ.
* ಜೋಹಾನ್ಸ್‍ಬರ್ಗ್‍ನ ಪಿಚ್‍ನಲ್ಲಿ 7 ರನ್ ಗಳಿಸಿದರೆ, ವಂಡರಸ್ ಪಿಚ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅತಿಥೇಯ ಬ್ಯಾಟ್ಸ್‍ಮನ್ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಲಿದ್ದಾರೆ. ಜಾನ್ ರೀಡ್ 2 ಪಂದ್ಯಗಳಿಂದ 316 ರನ್ ಗಳಿಸಿದ್ದರೆ, ಕೊಹ್ಲಿ ಕೂಡ ಅಷ್ಟೇ ಪಂದ್ಯಗಳಿಂದ 310 ರನ್‍ಗಳನ್ನು ಗಳಿಸಿದ್ದಾರೆ.
* ವಿರಾಟ್ ಕೊಹ್ಲಿ 14 ರನ್ ಗಳಿಸಿದರೆ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ಗಳಿಸಲಿದ್ದಾರೆ, ಸಚಿನ್ ತೆಂಡೂಲ್ಕರ್ 15 ಪಂದ್ಯಗಳಿಂದ 1161 ರನ್ ಗಳಿಸಿದ್ದರೆ, ಭಾರತದ ಈಗಿನ ಕೋಚ್ ರಾಹುಲ್ ದ್ರಾವಿಡ್ 11 ಪಂದ್ಯಗಳಿಂದ 624 ರನ್ ಹಾಗೂ ಕೊಹ್ಲಿ 6 ಪಂದ್ಯಗಳಿಂದ 611 ರನ್‍ಗಳನ್ನು ಗಳಿಸಿದ್ದಾರೆ.
* ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಇದುವರೆಗೂ 40 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರು 41 ಗೆಲುವು ತಂದುಕೊಟ್ಟಿದ್ದರೆ, ಜೋಹಾನ್ಸ್‍ಬರ್ಗ್ ಟೆಸ್ಟ್‍ನಲ್ಲಿ ಭಾರತ ತಂಡ ಗೆಲುವು ಸಾಸಿದರೆ ವಿರಾಟ್, ಸ್ಟೀವ್ ಸ್ಮಿತ್‍ರ ದಾಖಲೆಯನ್ನು ಸಮಗೊಳಿಸಲಿದ್ದಾರೆ.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡವು ಸೆಂಚುರಿಯನ್ ಟೆಸ್ಟ್‍ನಲ್ಲಿ ಸೋಲು ಕಂಡಿದ್ದು ಸರಣಿ ಜೀವಂತವಾಗಿರಿಸಲು ನಾಳೆಯ ಪಂದ್ಯವನ್ನು ಗೆಲ್ಲುವ ಒತ್ತಡಕ್ಕೆ ಸಿಲುಕಿದೆ. ಜೊತೆಗೆ ಆ ತಂಡದ ಖ್ಯಾತ ಆಟಗಾರ ಹಾಗೂ ವಿಕೆಟ್‍ಕೀಪರ್ ಕ್ವಿಂಟನ್ ಡಿ ಕಾಕ್ ಅವರು ನಿವೃತ್ತಿ ಘೋಷಿಸಿರುವುದು ಕೂಡ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

Articles You Might Like

Share This Article