ರಾತ್ರೋ ರಾತ್ರಿ ನಂ.1 ತಂಡ ಕಟ್ಟಲಾಗಲ್ಲ : ಸಚಿನ್

Social Share

ಮುಂಬೈ, ನ. 13- ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್‍ಗಳಿಂದ ದಯನೀಯ ಸೋಲು ಕಂಡು 15 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದ್ದರಿಂದ ಅನೇಕ ಮಾಜಿ ಕ್ರಿಕೆಟಿಗರು ತಮ್ಮ ಅಸಮಾಧಾನ ಹೊರಹಾಕಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಈ ಸೋಲಿನ ಕುರಿತು ಪ್ರತಿಕ್ರಿಯಿಸಿದ್ದಾರೆ.

ಇಂಗ್ಲೆಂಡ್ ಹಾಗೂ ಭಾರತ ನಡುವೆ ಸೆಮಿಫೈನಲ್ ನಡೆದ ಅಡಿಲೇಡ್ ಮೈದಾನದ ಬೌಂಡರಿಗಳು ತುಂಬಾ ಚಿಕ್ಕದಾಗಿದ್ದು, ಈ ಮೈದಾನದಲ್ಲಿ 190 ಸವಾಲಿನ ಮೊತ್ತ ಆಗುತ್ತದೆ. ಆದರೆ ರೋಹಿತ್ ಶರ್ಮಾ ಬಳಗದ ಬ್ಯಾಟ್ಸ್‍ಮನ್‍ಗಳು ವೈಫಲ್ಯದಿಂದ 168 ರನ್‍ಗಳನ್ನು ಮಾತ್ರ ಕಲೆ ಹಾಕಿದರು, ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ' ಎಂದು ಹೇಳಿದರು.

ದುಷ್ಕರ್ಮಿಗಳಿಂದ ಮನೆ, ದೇವಾಲಯ ಧ್ವಂಸ

ಸೆಮಿಫೈನಲ್‍ನಲ್ಲಿ ಭಾರತ ತಂಡವು ಸೋಲು ಕಂಡಿರುವುದರಿಂದ ಎಲ್ಲರಂತೆ ನನಗೂ ಕೂಡ ಬೇಸರವಾಗಿದೆ. ಏಕೆಂದರೆ ನಾವೆಲ್ಲರೂ ಭಾರತ ತಂಡದ ಹಿತೈಷಿಗಳು. ಅಡಿಲೇಡ್ ಮೈದಾನದ ಸೈಡ್ ಬೌಂಡರಿಗಳು ಆಧಿಕಾರದಲ್ಲಿ ತುಂಬಾ ಚಿಕ್ಕದಾಗಿದ್ದವು, ನಾವು ಗಳಿಸಿದ್ದ 168 ರನ್‍ಗಳು 150 ರನ್‍ಗೆ ಸಮವಾಗಿದ್ದು, ಒಂದು ವೇಳೆ 190 ರನ್‍ಗಳನ್ನು ಗಳಿಸಿದ್ದರೆ ಸ್ಪರ್ಧೆ ನೀಡಬಹುದಿತ್ತು’ ಎಂದು ತೆಂಡೂಲ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

`ಬೌಲಿಂಗ್‍ನಲ್ಲೂ ಕೂಡ ನಮ್ಮ ಬೌಲರ್‍ಗಳು ಎಡವಿದರೂ, ಒಂದೇ ಒಂದು ವಿಕೆಟ್ ಪಡೆಯಲೂ ಸಾಧ್ಯವಾಗದಿದ್ದರಿಂದ ಇದು ಭಾರತಕ್ಕೆ ಕಠಿಣ ಪಂದ್ಯವಾಗಿತ್ತು. ಇಂಗ್ಲೆಂಡ್ 1 ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿರುವುದರಿಂದ ನಮಗೆ ಇದು ಅತ್ಯಂತ ಕೆಟ್ಟ ಅನುಭವವಾಗಿದೆ’ ಎಂದು ಸಚಿನ್ ವಿವರಿಸಿದರು.

ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಕಾಂಗ್ರೆಸಿಗರನ್ನು ಮನೆಗೆ ಕಳಿಸುತ್ತಾರೆ : ಜೋಷಿ

“ ಒಂದೇ ಒಂದು ಸೋಲಿನಿಂದ ಭಾರತವನ್ನು ದೂಷಿಸುವುದು ತಪ್ಪು. ಏಕೆಂದರೆ ಭಾರತವು ಟಿ 20 ಮಾದರಿ ಕ್ರಿಕೆಟ್‍ನಲ್ಲಿ ನಂಬರ್ 1 ಸ್ಥಾನದಲ್ಲಿದೆ. 2011ರ ಏಕದಿನ ವಿಜೇತ ಭಾರತ ತಂಡವು ಏಕಾಏಕಿ ಒಂದೇ ರಾತ್ರೆಯಲ್ಲಿ ನಂಬರ್ 1 ಸ್ಥಾನ ಮುಟ್ಟಿಲ್ಲ. ಅದಕ್ಕಾಗಿ ತುಂಬಾ ದಿನಗಳ ಕಾಲ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧ ಸೋಲಿನಿಂದ ತಂಡವನ್ನು ಅಲ್ಲಗಳೆಯಬಾರದು, ಅಭಿಮಾನಿಗಳು ಸದಾ ತಂಡದ ಹಾಗೂ ಆಟಗಾರರನ್ನು ಬೆಂಬಲಿಸಬೇಕು ಎಂದು ಹೇಳಿದರು.

ಮೋದಿ ನಾಮಬಲವಿಲ್ಲದೆ ಬಿಜೆಪಿಯವರ ಯೋಗ್ಯತೆಗೆ ಠೇವಣಿ ಕೂಡ ಸಿಗಲ್ಲ : ಜೆಡಿಎಸ್

ಆಟದಲ್ಲಿ ಏಳು ಬೀಳುಗಳು ಸಹಜ, ಎಲ್ಲಿ ಗೆಲ್ಲುವು ಸಿಗುತ್ತದೆ ಅಲ್ಲೇ ಸೋಲು ಕಾಣುತ್ತೇವೆ ಆದರೆ ನಾವೆಲ್ಲರೂ (ಅಭಿಮಾನಿಗಳು) ತಂಡವನ್ನು ಬೆಂಬಲಿಸುತ್ತಿರಲೇ ಬೇಕು ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

Articles You Might Like

Share This Article