ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ ವಾಹನ ಪತ್ತೆಗೆ ಘಟನೆ ಮರುಸೃಷ್ಟಿ

Spread the love

ಮುಂಬೈ, ಮಾ.20- ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಎದುರು ಸ್ಫೋಟಕ ತುಂಬಿದ ವಾಹನ ನಿಲ್ಲಿಸಿದ ಘಟನೆಯನ್ನು ಎನ್‍ಐಎ ಪೊಲೀಸರು ಮರುಸೃಷ್ಟಿದ್ದಾರೆ. ಪ್ರಕರಣದ ತನಿಖೆ ದೃಷ್ಟಿಯಿಂದ ಸ್ಫೋಟಕ ತುಂಬಿದ ವಾಹನ ನಿಲ್ಲಿಸಿದ ಆರೋಪದ ಮೇಲೆ ಬಂಧಿತನಾಗಿರುವ ಸಚಿನ್ ವಾಜೆ ಅವರನ್ನು ಬಳಕೆ ಮಾಡಿಕೊಂಡು ಇಡೀ ಪ್ರಕರಣದ ಮರು ಸೃಷ್ಟಿ ಮಾಡಲಾಗಿದೆ.

ಸ್ಫೋಟಕ ವಾಹನ ನಿಲ್ಲಿಸುವಾಗ ವ್ಯಕ್ತಿಯೊಬ್ಬ ಬಿಳಿ ಕುರ್ತಾ ಧರಿಸಿ ಓಡಾಡಿರುವ ದೃಶ್ಯ ಸಿಸಿ ಟಿವಿಯಲ್ಲಿಸೆರೆಯಾಗಿದ್ದ ಹಿನ್ನಲೆಯಲ್ಲಿ ವಾಜೆ ಅವರಿಗೂ ಬಿಳಿ ಕುರ್ತಾ ತೊಡಿಸಿ ನಿನ್ನೆ ರಾತ್ರಿ ವಾಹನ ನಿಲ್ಲಿಸುವ ದೃಶ್ಯವನ್ನು ಮರುಸೃಷ್ಟಿ ಮಾಡಿಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments